ಪಾಚಾರ್ಯ ಡಾ.ಕಿರಣಕುಮಾರ ಮುತ್ನಾಳಿ ಹೇಳಿಕೆ | ವಾರಕರಿಗಳಿಗೆ ಉಚಿತ ಆರೋಗ್ಯ ತಪಾಸಣೆ
ವಿಕ ಸುದ್ದಿಲೋಕ ಚಿಕ್ಕೋಡಿಸಮಾಜದ ಆರೋಗ್ಯ ಸೇವೆಯೇ ನಮ್ಮ ಧ್ಯೇಯವಾಗಿದ್ದು, ಆ ನಿಟ್ಟಿನಲ್ಲಿಕೆಎಲ್ ಇ ಮುಂಚೂಣಿಯಲ್ಲಿರುತ್ತದೆ ಎಂದು ಕೆಎಲ್ ಇ ಆಯುರ್ವೇದ ಕಾಲೇಜಿನ ಪಾಚಾರ್ಯ ಡಾ.ಕಿರಣಕುಮಾರ ಮುತ್ನಾಳಿ ಹೇಳಿದರು.
ಗೋವಾದಿಂದ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ವಾರಕರಿಗಳಿಗಾಗಿ ಗುರುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘‘ಯಾತ್ರಿಕರ ಆರೋಗ್ಯ ರಕ್ಷಣೆ ಹಾಗೂ ಸುರಕ್ಷಿತ ಪಾದಯಾತ್ರೆಗೆ ನೆರವಾಗಲು ಆಯೋಜಿಸಲಾದ ಈ ಶಿಬಿರವು ಕೆಎಲ್ ಇ ಸಂಸ್ಥೆಯ ಸೇವಾ ಮನೋಭಾವದ ಪ್ರತೀಕವಾಗಿದೆ. ಮುಂದೆಯೂ ಇಂತಹ ಜನಪರ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು,’’ ಎಂದರು.
ವೈದ್ಯರಾದ ಡಾ.ಸಂತೋಷ ಬೆಟಗೇರಿ, ಡಾ.ಜೀವನ ಘಾಡಗೆ, ಡಾ.ಕಾಂಚನಾ, ಡಾ.ನಿಹಾರಿಕಾ ಆರೋಗ್ಯ ತಪಾಸಣೆ ನಡೆಸಿ, ರಕ್ತದೊತ್ತಡ ಪರೀಕ್ಷೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ, ಪ್ರಥಮ ಚಿಕಿತ್ಸೆ, ಆರೋಗ್ಯ ಸಲಹೆ ಹಾಗೂ ಅಗತ್ಯ ಔಷಧ ವಿತರಣೆ ಮಾಡಿದರು.
ಪಾದಯಾತ್ರೆ ಸಂದರ್ಭದಲ್ಲಿಅನುಸರಿಸಬೇಕಾದ ಆರೋಗ್ಯ ಮುನ್ನೆಚ್ಚರಿಕೆಗಳು, ಸಾಕಷ್ಟು ನೀರು ಸೇವನೆ, ಪಾದಗಳ ಆರೈಕೆ ಹಾಗೂ ಆಯಾಸ ನಿವಾರಣೆ ಕುರಿತು ವಾರಕರಿಗಳಿಗೆ ಮಾರ್ಗದರ್ಶನ ನೀಡಲಾಯಿತು.
ಆಯುರ್ವೇದ ಉಪನ್ಯಾಸಕರಾದ ಡಾ.ಬಿ.ಬಿ.ದೇಸಾಯಿ, ಡಾ.ಬಾಹುಬಲಿ ಮಹಾಜನ, ಡಾ.ರವಿ ಮಡಿವಾಳರ ಮತ್ತು ಉಪನ್ಯಾಸಕರು, ವೈದ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ ನಿರೂಪಿಸಿ, ವಂದಿಸಿದರು.
ಫೊಟೊ: 16ಸಿಕೆಡಿ1: ಚಿಕ್ಕೋಡಿಯ ಕೆಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿವಾರಕರಿಗಳಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.