ಒಬಿಸಿ ಗಣತಿ ವರದಿ ಎಲ್ಲಿ ಹೋಯಿತು?: ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್

Contributed bysudhakara.kannadamoole@timesofindia.com|Vijaya Karnataka
obc census report keshav prasads allegations
ವಿಕ ಸುದ್ದಿಲೋಕ ಪುತ್ತೂರು

ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ ಸಾಮಾಜಿಕ -ಶೈಕ್ಷಣಿಕ ಗಣತಿಯ ವರದಿಯನ್ನು ಮಂಡಿಸುವ ಬದ್ಧತೆ ಮುಖ್ಯಮಂತ್ತಿ ಡಿ.ಕೆ. ಶಿವಕುಮಾರ್ ಗೆ ಇದೆಯೇ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಪ್ರಶ್ನಿಸಿದರು.
ಅವರು ಗುರುವಾರ ಪುತ್ತೂರಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮಗಳ ಜತೆ ಮಾತನಾಡಿದರು.

ಹಿಂದಿನ ಸಿಎಂ ಸಿದ್ಧರಾಮಯ್ಯ ಹಿಂದುಳಿದ ವರ್ಗಗಳ ಆಯೋಗದ ಗಣತಿ ವರದಿಯನ್ನು ಸ್ವೀಕರಿಸಿದ್ದರು. ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಈ ವರದಿಯನ್ನು ಕ್ಯಾಬಿನೆಟ್ ನಲ್ಲಿಮಂಡಿಸಿ, ವಿಧಾನಸಭೆ ಅಧಿವೇಶನದಲ್ಲಿಮಂಡಿಸಿ ಚರ್ಚೆಗೆ ಒಳಪಡಿಸಬೇಕು. ಈ ಮೂಲಕ ಹಿಂದುಳಿದ ವರ್ಗಗಳ ಮೇಲಿನ ಬದ್ಧತೆ ಪ್ರಕಟಿಸಬೇಕು ಎಂದವರು ಆಗ್ರಹಿಸಿದರು.

2013-18ರ ಅವಧಿಯಲ್ಲೂ ಆಗಿನ ಕಾಂಗ್ರೆಸ್ ಸರಕಾರ ಕಾಂತರಾಜು ಆಯೋಗದ ವರದಿ ಸಿದ್ಧ ಮಾಡಿ ಅದನ್ನು ಮಂಡನೆ ಮಾಡಲಿಲ್ಲ. ಬಳಿಕ ಜಯಪ್ರಕಾಶ್ ಹೆಗ್ಡೆ ಅವರ ಮೂಲಕ ಪುನರ್ ವರದಿ ತಯಾರಿಸಿತು. ಅದು ಕ್ಯಾಬಿನೆಟ್ ಮುಂದೆ ಬರಲು 14 ತಿಂಗಳು ಬೇಕಾಯಿತು. ಅದನ್ನು ರಾಹುಲ್ ಗಾಂಧಿಯವರ ಆಣತಿಯಂತೆ ಕಸದ ಬುಟ್ಟಿಗೆ ಎಸೆಯಲಾಗಿದೆ. ಜಯಪ್ರಕಾಶ್ ಹೆಗ್ಡೆ ವರದಿಗೆ 165 ಕೋಟಿ ರೂ. ವ್ಯಯಿಸಲಾಗಿದ್ದು, ಪ್ರಸ್ತುತ ಮಧುಸೂದನ್ ಗಣತಿಗೆ ಸುಮಾರು 450 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ. ಇಷ್ಟೆಲ್ಲಖರ್ಚು ಮಾಡಿದರೂ ಆ ವರದಿಯನ್ನು ಮಂಡಿಸುವ ಬದ್ಧತೆ ಸರಕಾರಕ್ಕಿಲ್ಲಎಂದರು.

ಜಾತಿ ಗಣತಿ ಮಾಡುವ ಅಧಿಕಾರ ಜನಗಣತಿ ಮಾಡುವ ಕೇಂದ್ರ ಸರಕಾರಕ್ಕೆ ಮಾತ್ರವೇ ಇದೆ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಜಾತಿ ಗಣತಿ ಹೆಸರಿನಲ್ಲಿ ಜಾತಿಗಳನ್ನು ಒಡೆಯುವ ಕಾರ್ಯ ಮಾಡುತ್ತಿದೆ ಎಂದರು.

ಬಿಜೆಪಿಯವರು ಹಿಂದುಳಿದ ವರ್ಗದ ಯುವಕರನ್ನು ಬಳಸಿ ಬಳಿಕ ಬಿಸಾಡುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆ ಉತ್ತರಿಸಿದ ಅವರು, ಹಿಂದುಳಿದ ವರ್ಗಕ್ಕೆ ಬಿಜೆಪಿ ಅನೇಕ ಅವಕಾಶಗಳನ್ನು ನೀಡಿದೆ. ಒಬಿಸಿ ಯುವಕರು ಕಾಂಗ್ರೆಸ್ ಷಡ್ಯಂತ್ರಕ್ಕೆ ಬಲಿಯಾಗಬಾದರು ಎಂದರು.

ವಿಧಾನಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ , ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ , ಪಕ್ಷದ ಪ್ರಮುಖರಾದ ಯತೀಶ್ ಅರ್ವಾರ್ , ಪ್ರಸನ್ನ ಕುಮಾರ್ ಮಾರ್ತ, ವಿದ್ಯಾ ಆರ್ . ಗೌರಿ, ರಾಜೇಶ್ ಬನ್ನೂರು, ಸತೀಶ್ ನಾಯ್ ್ಕ ಉಪಸ್ಥಿತರಿದ್ದರು.