ಜಾಹೀರಾತು ಸಂಬಂಧಿಸದ ಸುದ್ದಿ ಚೆನ್ನಾಗಿ ಬಳಸಿಕೊಳ್ಳಿ.........
ತೋಟಗಾರಿಕೆ ಕಾಲೇಜ್ ಗೆ ಅನುಮತಿ ಬಾಗಲಕೋಟೆ : ‘‘ಬೀಳಗಿ ತಾಲೂಕಿನ ಬಾಡಗಂಡಿಯ ಎಸ್ .ಆರ್ .ಪಾಟೀಲ ಪ್ರತಿಷ್ಠಾನದಿಂದ ಖಾಸಗಿ ತೋಟಗಾರಿಕೆ ಕಾಲೇಜ್ ಆರಂಭಿಸಲು ಅನುಮತಿ ದೊರೆತಿದೆ’’ ಎಂದು ಪ್ರತಿಷ್ಠಾನದ ಅಧ್ಯಕ್ಷ , ಮಾಜಿ ಸಚಿವ ಎಸ್ .ಆರ್ .ಪಾಟೀಲ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘‘ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿಪ್ರಥಮ ಖಾಸಗಿ ತೋಟಗಾರಿಕೆ ಕಾಲೇಜ್ ಆರಂಭಿಸಲು ಅನುಮತಿ ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ. ಬಿಎಸ್ ಸಿ ತೋಟಗಾರಿಕೆ ಕೋರ್ಸ್ ಆರಂಭಕ್ಕೆ ಸರಕಾರ ಅನುಮತಿ ನೀಡಿದೆ. ಆ ಮೂಲಕ ಉತ್ತರ ಕರ್ನಾಟಕದ ಮೊದಲ ಖಾಸಗಿ ತೋಟಗಾರಿಕೆ ಕಾಲೇಜ್ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ತೋಟಗಾರಿಕೆ ಕಾಲೇಜ್ ಆರಂಭದಿಂದ ಈ ಪ್ರದೇಶದ ವಿದ್ಯಾರ್ಥಿಗಳಿಗೆ ತೋಟಗಾರಿಕೆ ಶಿಕ್ಷಣ ದೊರೆಯಲಿದೆ. ತೋಟಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಹೊಸ ದಿಕ್ಕು, ಆಯಾಮ ದೊರೆಯಲಿದೆ. ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳೊಂದಿಗೆ ಆಧುನಿಕ ತೋಟಗಾರಿಕೆ ತಂತ್ರಜ್ಞಾನ, ಸಂಶೋಧನೆ ಹಾಗೂ ಕೌಶಲ ಅಭಿವೃದ್ಧಿಗೆ ಮಹತ್ವದ ಕೇಂದ್ರವಾಗಿ ಕಾಲೇಜ್ ರೂಪುಗೊಳ್ಳಲಿದೆ,’’ ಎಂದು ಅವರು ತಿಳಿಸಿದ್ದಾರೆ.