ಶಾನ್ವಿಗೆ ಕಥೆಗಳ ಮೇಲೆ ಲವ್ವಾಗಿದೆ!

Contributed bybabitha.salian@timesgroup.com|Vijaya Karnataka
shanvi srivastava is making waves
ಶಾನ್ವಿಗೆ ಕಥೆಗಳ ಮೇಲೆ ಲವ್ವಾಗಿದೆ!

ಇಂಟ್ರೊ
ಕೋವಿಡ್ ಲಾಕ್ ಡೌನ್ ಗೂ ಮುನ್ನ ಕನ್ನಡದ ಬಿಝಿ ನಟಿಯಾಗಿದ್ದ ಶಾನ್ವಿ ಶ್ರೀವಾಸ್ತವ ಆ ಬಳಿಕ ಸೈಲೆಂಟ್ ಆಗಿದ್ದರು. ಈಗ ಅವರು ‘ ಅಮೆರಿಕಾ ಅಮೆರಿಕಾ-2 ’ ಸಿನಿಮಾದ ನಾಯಕಿಯಾಗಿದ್ದಾರೆ.

ಮಲ್ವೀರ

ನಟಿ ಶಾನ್ವಿ ಶ್ರೀವಾಸ್ತವ ಅವರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ-2’ ಚಿತ್ರದಲ್ಲಿನಟರಾದ ಪೃಥ್ವಿ ಅಂಬಾರ್ ಹಾಗೂ ನಿರೂಪ್ ಭಂಡಾರಿಗೆ ಜೋಡಿಯಾಗಿದ್ದಾರೆ. ಸೂಪರ್ ಹಿಟ್ ‘ಅಮೆರಿಕಾ ಅಮೆರಿಕಾ’ ಸಿನಿಮಾದ ಈ ಸೀಕ್ವೆಲ್ ನಲ್ಲಿನಟಿಸುವ ಜತೆಗೆ ಇನ್ನೂ ಕೆಲವು ಚಿತ್ರಗಳಲ್ಲಿಅವರು ಕಾಣಿಸಿಕೊಂಡಿದ್ದು, ಅವುಗಳ ಬಿಡುಗಡೆಗೆ ಕಾಯುತ್ತಿದ್ದಾರೆ.

ಶಾನ್ವಿ ಶ್ರೀವಾಸ್ತವ ಅಭಿನಯದ ಸಿನಿಮಾ ತೆರೆಕಂಡು ಮೂರು ವರ್ಷ ಕಳೆದಿವೆ. ಈ ಅಂತರ ಬಗ್ಗೆ ವಿವರಿಸಿರುವ ಅವರು, ‘ತುಂಬಾ ಜನರಿಗೆ ಗೊತ್ತು, ನನಗೆ ಸ್ಕಿ್ರಪ್ಟ್ ಇಷ್ಟ ಆಗಿಲ್ಲಎಂದರೆ ನಾನು ಸಿನಿಮಾ ಒಪ್ಪುವುದಿಲ್ಲ. ನಾನೊಬ್ಬ ಮಧ್ಯಮ ವರ್ಗದ ಹುಡುಗಿಯಾಗಿ ನಾನು ಗಳಿಸಿದ್ದನ್ನು ಉಳಿತಾಯ ಮಾಡುತ್ತೇನೆ. ಹಾಗಾಗಿ ಹಣಕ್ಕಾಗಿ ಸಿನಿಮಾ ಮಾಡುವ ಯೋಚನೆ ಬರಲ್ಲ. ನಾನು ಒಪ್ಪಿ ಮಾಡಿದ ಚಿತ್ರ ಗೆದ್ದರೂ, ಸೋತರೂ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ನಟನಾ ಕರಿಯರ್ ಇನ್ನೊಂದೆರಡು ವರ್ಷಗಳಿಗೆ ಮುಗಿಯುವಂಥದ್ದಲ್ಲ. ಸಾಯುವವರೆಗೂ ನಟಿಸಬೇಕೆನ್ನುವ ಬಯಕೆ ಇದೆ. ಕನ್ನಡದಲ್ಲಿ‘ಬ್ಯಾಂಗ್ ’ ಸಿನಿಮಾ ಬಿಡುಗಡೆಯಾದ ಬಳಿಕ ತೆಲುಗು, ಮರಾಠಿ, ತಮಿಳು ವೆಬ್ ಸಿರೀಸ್ ಗಳಲ್ಲಿಬಿಝಿ ಇದ್ದೆ. ಈ ನಡುವೆ ‘ಅಮೆರಿಕಾ ಅಮೆರಿಕಾ-2’ದಲ್ಲಿನಟಿಸಿದೆ. ಸಿನಿಮಾ ಕರಿಯರ್ ನಲ್ಲಿನಾಯಕಿಯರಿಗೆ ಜೀವಿತಾವಧಿ ಕಡಿಮೆ, ಆದರೆ ನಟಿಗಲ್ಲ. 50, 60ರ ವಯಸ್ಸಿನಲ್ಲೂಮಹಿಳಾ ಪ್ರಧಾನ ಚಿತ್ರಗಳಲ್ಲಿನಟಿಯರು ಅಭಿನಯಿಸುತ್ತಿದ್ದಾರೆ. ಅಂಥ ಕಥೆ, ಸಿನಿಮಾಗಳು ಬರುತ್ತಿರುವುದು ಈಗಿನ ಟ್ರೆಂಡ್ . ಸಿನಿಮಾಗಳ ನಡುವೆ ಅಂತರವಿದ್ದರೂ ಬೆಸ್ಟ್ ಕೊಡಲು ಯೋಚಿಸುತ್ತೇನೆ’ ಎಂದಿದ್ದಾರೆ.

‘ ಅಮೆರಿಕಾ ಅಮೆರಿಕಾ-2 ಚಿತ್ರದ ಪಾತ್ರ ಒಪ್ಪಿಕೊಳ್ಳುವಾಗ ಭಯವಿತ್ತು. ಈ ಥರದ ಪಾತ್ರ ನಾನು ಇಲ್ಲಿಯವರೆಗೂ ಮಾಡಿಲ್ಲ. ಇಂಥ ಪಾತ್ರವಿರುವ ಕನ್ನಡ ಸಿನಿಮಾಗಳು ಈ ನಡುವೆ ಬಂದಿಲ್ಲ. ಇದರಲ್ಲಿರುವ ಪ್ರಬುದ್ಧ ಪಾತ್ರದಲ್ಲಿನಾನು ಹೇಗೆ ಕಾಣಿಸಿಕೊಳ್ಳುವೆ, ಜನರು ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬ ಆತಂಕವಿತ್ತು. ಬೇರೆ ಸಿನಿಮಾಗಳ ಸ್ಕಿ್ರಪ್ಟ್ ಅದರ ಶೂಟಿಂಗ್ ಸೆಟ್ ಗೆ ಹೋದಾಗಲೂ ಸಿಗುವುದಿಲ್ಲ, ಆದರೆ ಇದರ ಸ್ಕಿ್ರಪ್ಟ್ ಬಹುತೇಕ ಮೂರು ತಿಂಗಳ ಮೊದಲೇ ನಿರ್ದೇಶಕರು ನನಗೆ ನೀಡಿದ್ದರು. ಹಾಗಾಗಿ ಪಾತ್ರವನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಹಾಗೂ ತೆರೆಯ ಮೇಲೆ ಅಷ್ಟೇ ನೈಜವಾಗಿ ನಟಿಸಲು ಸಾಧ್ಯವಾಯಿತು. ಒಂದು ಪಾತ್ರವನ್ನು ಇಲ್ಲಿಯವರೆಗೂ ನಾನು ಇಷ್ಟೊಂದು ಎಂಜಾಯ್ ಮಾಡಿರಲಿಲ್ಲ. ಹಾಗಾಗಿ ಈ ಪಾತ್ರದ ಬಗ್ಗೆ ಅತ್ಯಂತ ಪೊಸೆಸಿವ್ ಆಗಿದ್ದೇನೆ. ನಾನು ‘ಅಮೆರಿಕಾ ಅಮೆರಿಕಾ’ ಸಿನಿಮಾ ನೋಡಿರಲಿಲ್ಲ, ಅದರ ಸೀಕ್ವೆಲ್ ನ ಆಫರ್ ಬಂದಮೇಲೆ ನೋಡಿದೆ’ ಎಂದು ಹೇಳಿದ್ದಾರೆ ಶಾನ್ವಿ ಶ್ರೀವಾಸ್ತವ.

ಕೋಟ್

ಸಿನಿಮಾದಲ್ಲಿಮಹತ್ವವಿಲ್ಲದ ಪಾತ್ರಗಳನ್ನು ಮಾಡಲು ನನಗೆ ಇಷ್ಟವಿಲ್ಲ. ಯಾವುದೇ ಪಾತ್ರ ನನಗೆ ವೈಯಕ್ತಿಕವಾಗಿ ಕನೆಕ್ಟ್ ಆಗಬೇಕು. ನಾನು ಭಾವಜೀವಿಯಾಗಿರುವುದರಿಂದ ಪಾತ್ರಕ್ಕೆ ನಾನು ನ್ಯಾಯ ಒದಗಿಸುವಂತಿದ್ದರಷ್ಟೇ ಒಪ್ಪುತ್ತೇನೆ. ಅದಕ್ಕೆ ತಕ್ಕಂತೆ ನನಗೀಗ ತುಂಬಾ ಪವರ್ ಫುಲ್ ಪಾತ್ರಗಳು, ಗಟ್ಟಿ ಕತೆಗಳು ಬರುತ್ತಿವೆ.

ಶಾನ್ವಿ ಶ್ರೀವಾಸ್ತವ | ನಟಿ