* ಗ್ರಾಮೀಣ ಭಾಗದಲ್ಲಿಸಮಸ್ಯೆ ಹೆಚ್ಚಳ* ಶಾಲೆಗೆ ಕಾಲ್ನಡಿಯಲ್ಲೇ ತೆರಳುವ ವಿದ್ಯಾರ್ಥಿಗಳು
ನೆನಪಾಗಿ ಉಳಿದ ಸರಕಾರಿ ಸೈಕಲ್
ಚಂದ್ರಧಿಶೇಧಿಖರ ಬೆಧಿನ್ನೂಧಿರು ಸಿಂಧನೂರು
್ಚha್ಞd್ಟ್ಠಚಿಛ್ಞ್ಞ್ಠ್ಟಿಃಜಞaಜ್ಝಿ.್ಚಟಞ
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿನ ಆಶಾಕಿರಣದಂತೆ ಇದ್ದ ಸರಕಾರಿ ಸೈಕಲ್ ಯೋಜನೆ ಕೈಬಿಟ್ಟು ವರ್ಷಗಳೇ ಕಳೆದಿದ್ದರೂ ಅಲ್ಲಲ್ಲಿಇರುವ ಹಳೆ ಸೈಕಲ್ ಗಳು ನೆನಪಾಗಿ ಉಳಿದಿವೆ.
ರಾಜ್ಯ ಸರಕಾರ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಯೋಜನೆ ಆರಂಭಿಸಿದ್ದು, ಬದಲಾವಣೆಗೆ ಕಾರಣವಾಗಿತ್ತು. 2006-2007ರಲ್ಲಿಆರಂಭವಾಗಿದ್ದ ಯೋಜನೆ, 2019-20ಕ್ಕೆ ಕೊನೆಯಾಗಿದೆ. ಕೋವಿಡ್ ಲಾಕ್ ಡೌನ್ ಬಳಿಕ ಸಂಪೂರ್ಣ ಸ್ಥಗಿತವಾಗಿದೆ. ವಿದ್ಯಾರ್ಥಿಗಳನ್ನು ಸರಕಾರ ಶಾಲೆಗೆ ಸೆಳೆಯುವುದು, ದಾಖಲಾತಿ ಹೆಚ್ಚಿಸುವುದು, ಪ್ರಯಾಣದ ವೇಳೆ ತಗ್ಗಿಸುವುದು ಸೇರಿದಂತೆ ಮಹತ್ತರ ಬದಲಾಣೆಯ ಕಾರಣಕ್ಕೆ ಶುರುವಾಗಿದ್ದ ಸೈಕಲ್ ಯೋಜನೆ ಕಡೆಗೆ ಸರಕಾರ ಗಮನಹರಿಸದೆ ಇರುವುದು ಬೇಸರ ಮೂಡಿಸಿದೆ. ಸರಕಾರ ಶಾಲೆಗಳಲ್ಲಿಊಟ, ಬಟ್ಟೆಯ ಜತೆಗೆ ನೀಡುತ್ತಿದ್ದ ಸೈಕಲ್ ಯೋಜನೆಯನ್ನು ಕೈಬಿಟ್ಟಿರುವುದು ಮಕ್ಕಳಲ್ಲಿಬೇಸರ ಮೂಡಿಸಿದೆ. ಸರಕಾರಿ ಸೌಲಭ್ಯ ನೀಡುವಲ್ಲಿಉಂಟಾಗುತ್ತಿರುವ ಸಮಸ್ಯೆಯಿಂದಾಗಿಯೂ ಮಕ್ಕಳ ಸಂಖ್ಯೆ ಕ್ಷೀಣಿಸಲು ಕಾರಣವಾಗುತ್ತಿದೆ.
ತಪ್ಪದ ಸಮಸ್ಯೆ:
ತಾಲೂಕಿನ ಬಹುತೇಕ ಗ್ರಾಮಗಳಲ್ಲಿಪ್ರೌಢ ಶಾಲಾ ಮಕ್ಕಳು ಕಲಿಕೆಗಾಗಿ ಪಕ್ಕದ ಊರುಗಳಿಗೆ ತೆರಳಬೇಕು. ಬಸ್ ಗಳಲ್ಲಿಪ್ರಯಾಣ ಉಚಿತವಿದ್ದರೂ, ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ನಡೆದುಕೊಂಡು ಶಾಲೆಗೆ ಹೋಗುವುದು ಸಾಮಾನ್ಯವಾಗಿದೆ. ಸರಕಾರದ ಸೈಕಲ್ ನೀಡಿದರೆ ಇಂತಹ ವಿದ್ಯಾರ್ಥಿಗಳು ಬಸ್ ಗಾಗಿ ಕಾಯುವುದು, ನಡೆದು ಶಾಲೆಗೆ ಹೋಗುವುದು ತಪ್ಪುತ್ತಿತ್ತು. ಆದರೆ ಸರಕಾರ ಯೋಜನೆಯನ್ನು ಸಂಪೂರ್ಣ ಕೈಬಿಟ್ಟಿದ್ದು, ಸೈಕಲ್ ಕುರಿತು ಧ್ವನಿ ಎತ್ತುವವರೇ ಇಲ್ಲದಂತಾಗಿದೆ.
ಹಳೆ ಸೈಕಲ್ ಬಳಕೆ:
ಈ ಹಿಂದೆ ಸರಕಾರದಿಂದ ಸೈಕಲ್ ಪಡೆದಿರುವ ಕೆಲವೊಬ್ಬರು ಕಾಲೇಜು ಹಂತಕ್ಕೆ ಬಂದರೂ ಅವುಗಳನ್ನು ಬಳಕೆ ಮಾಡುವುದು ಕಾಣಬಹುದಾಗಿದೆ. ಪತ್ರಿಕೆ ವಿತರಕರು, ಅಂಗಡಿ, ಮುಂಗಟ್ಟುಗಳಲ್ಲಿಕೆಲಸ ಮಾಡಲು ತೆರಳುವವರು ಇದೇ ಸೈಕಲ್ ಗಳನ್ನು ಹತ್ತಿಕೊಂಡು ಹೋಗುತ್ತಿದ್ದಾರೆ. ಆದರೆ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಮಾತ್ರ ಸೈಕಲ್ ಸೌಲಭ್ಯ ಇಲ್ಲವಾಗಿದೆ. ಹಳೆ ಸೈಕಲ್ ನೋಡುವ ಬಹುತೇಕರು, ಇದು ಸರಕಾರಿ ಸೈಕಲ್ ಎಂದು ಉದ್ಘರಿಸಿ, ಹಳೆ ದಿನ ಮೆಲುಕು ಹಾಕುತ್ತಿದ್ದಾರೆ. ಇದಲ್ಲದೆ ಸರಕಾರಿ ಸೈಕಲ್ ಗಳ ರಿಪೇರಿ ಸೇರಿ ಇತರೆ ಕಾರಣಗಳಿಂದ ಬದುಕುಕಟ್ಟಿಕೊಂಡಿದ್ದ ಪಂಕ್ಚರ್ ಅಂಗಡಿ ವ್ಯಾಪಾರಿಗಳು ಸಹ ಆರ್ಥಿಕ ಮುಗ್ಗಟ್ಟು ಎದುರಿಸಿದ್ದಾರೆ. ಸರಕಾರ ಆರ್ಥಿಕ ಸಮಸ್ಯೆ ಕಾರಣಕ್ಕೆ ಸೈಕಲ್ ಯೋಜನೆ ಕೈಬಿಟ್ಟಿದ್ದು, ಅವಶ್ಯವಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ ಸೌಲಭ್ಯ ನೀಡಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
---
ಕೋಟ್ -
ನಾನು 8ನೇ ತರಗತಿಯಲ್ಲಿದ್ದಾಗ ನೀಡಿದ್ದ ಸೈಕಲ್ ನಿಂದ ಓದಿ, ಈಗ ಪದವಿ ಶಿಕ್ಷಣದವರೆಗೂ ಸೈಕಲ್ ಬಳಕೆ ಮಾಡುತ್ತಿದ್ದೇನೆ. ಸರಕಾರದ ಸೈಕಲ್ ನಿಂದ ನನಗೆ ತುಂಬಾ ಅನುಕೂಲವಾಗಿದೆ.
-ಮಾಳಪ್ಪ, ಸಿಂಧನೂರು
ಕೋಟ್ -
ಗ್ರಾಮೀಣ ಭಾಗದಲ್ಲಿಸರಕಾರ ಸೈಕಲ್ ನೀಡಿದರೆ, ದಿನವೂ ಶಾಲೆಗೆ ಹೋಗಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಇಂದಿಗೂ ಶಾಲೆಗೆ ನಡೆದು ಹೋಗುವುದು ತಪ್ಪಿಲ್ಲ. ಸರಕಾರ ಸೈಕಲ್ ಯೋಜನೆಯನ್ನು ಪುನಃ ಆರಂಭಿಸಬೇಕು.
-ಸುರೇಶ ನೆಕ್ಕಂಟಿ, ಮುಖಂಡ, ಸಿಂಧನೂರು
---
ಆರ್ ಸಿಎಚ್ 15ಎಸ್ ಎನ್ ಡಿ3:
ಸಿಂಧನೂರಿನಲ್ಲಿಯುವಕನೊಬ್ಬ ಸರಕಾರಿ ಸೈಕಲ್ ಮೂಲಕ ಪತ್ರಿಕೆ ಹಂಚಿಕೆ ಮಾಡುತ್ತಿರುವುದು.