ನೀಟ್ ನಲ್ಲಿಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಾಕ್ಷಾಯಿಣಿ ಅವ್ವಾಜಿ ಅವರು ಸನ್ಮಾನಿಸಿ ಗೌರವಿಸಿದರು.**
(ಕಿಕ್ಕರ್ ) ನೀಟ್ ಪರೀಕ್ಷೆಯಲ್ಲಿಎಸ್ ಬಿಆರ್ ವಿದ್ಯಾರ್ಥಿಗಳು ಸಾಧನೆ | 685 ಅಂಕ ಪಡೆದ ಚನ್ನಬಸವ ಆಲ್ ಇಂಡಿಯಾಗೆ 190ನೇ ರಾರ ಯಂಕ್ | ಅವ್ವಾಜಿ ಶ್ಲಾಘನೆ
ಹಳ್ಳಿ ಹುಡುಗ ಚನ್ನಬಸವ ಚೆಂದದ ಸಾಧನೆ
ವಿಕ ಸುದ್ದಿಲೋಕ ಕಲಬುರಗಿ
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಶರಣಬಸವೇಶ್ವರ ರೆಸಿಡೆನ್ಸಿಯಲ್ ಸಂಯುಕ್ತ ಪಿಯು ಕಾಲೇಜು (ಎಸ್ ಬಿಆರ್ )ನಲ್ಲಿವಿದ್ಯಾಭ್ಯಾಸ ಮಾಡಿದ ಆರು ವಿದ್ಯಾರ್ಥಿಗಳು ನೀಟ್ ನಲ್ಲಿಉತ್ತಮ ಸಾಧನೆ ಮಾಡಿದ್ದಾರೆ ಎಂದು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ದಾಕ್ಷಾಯಿಣಿ ಅವ್ವಾಜಿ ಹೇಳಿದರು.
ನಗರದ ದಾಸೋಹ ಮಹಾಮನೆಯಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಈ ಮಾಹಿತಿ ನೀಡಿದರು. ಚನ್ನಬಸವ 685 ಅಂಕ ಪಡೆದು ಆಲ್ ಇಂಡಿಯಾಗೆ 190ನೇ ರಾರ ಯಂಕ್ ಪಡೆದ್ದಾನೆ. ಸಿಮ್ರಾನ್ ಬಾನು 657, ನವೀನ್ 650, ಸಂಪತ್ ಕುಮಾರ 650, ಅರ್ನವ್ ಅರಳೀಕರ… 645 ಹಾಗೂ ರೋಹಿತ… 642 ಅಂಕಗಳನ್ನು ಪಡೆದ್ದಾರೆ ಎಂದು ತಿಳಿಸಿದರು.
ನೀಚ್ ನಲ್ಲಿಉತ್ತಮ ಅಂಕ ಪಡೆದ ವಿದ್ಯಾರ್ಥಿಗಳೆಲ್ಲದೊಡ್ಡಪ್ಪ ಅಪ್ಪ ವಿದ್ಯಾರ್ಥಿ ವೇತನ ಪಡೆದು ಕಾಲೇಜಿನಲ್ಲಿಉಚಿತ ಪ್ರವೇಶ ಪಡೆದು ಜತೆಗೆ ಉಚಿತ ಹಾಸ್ಟೆಲ್ ಸೌಲಭ್ಯ ಪಡೆದವರಾಗಿದ್ದಾರೆ. ನಮ್ಮ ಸಂಸ್ಥೆಯಲ್ಲಿವಿದ್ಯಾರ್ಥಿ ವೇತನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟ್ , ಜೆಇಇನಲ್ಲೂಉತ್ತಮ ಫಲಿತಾಂಶಗಳು ಸಿಗುತ್ತಿವೆ. ಎಲ್ಲವಿದ್ಯಾರ್ಥಿಗಳು ಉತ್ತಮ ಪ್ರಯತ್ನಪಟ್ಟಿದ್ದರಿಂದ ಯಶಸ್ಸು ಸಿಕ್ಕಿದೆ ಎಂದು ಹೇಳಿದರು.
ಕಾಲೇಜಿನಲ್ಲಿಉತ್ತಮ ಬೋಧನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಮಕ್ಕಳು ಮಾನಸಿಕವಾಗಿ ಕುಗ್ಗದಿರಲಿ ಎಂಬ ಕಾರಣಕ್ಕಾಗಿ ಗುರುಗಳು ಮೋಟಿವೇಶನ್ ಸಹ ವಿದ್ಯಾರ್ಥಿಗಳಿಗೆ ನೀಡಿದ್ದಾರೆ ಎಂದು ಹೇಳಿದರು. ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಹೆಸರು ತಂದಿದ್ದಲ್ಲದೆ ಅವರ ಪಾಲಕರಿಗೂ ಹೆಸರು ತಂದಿದ್ದಾರೆ ಎಲ್ಲವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದು ಶುಭ ಕೋರಿದರು.
ನೀಟ್ ನಲ್ಲಿಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಾಕ್ಷಾಯಿಣಿ ಅವ್ವಾಜಿ ಸನ್ಮಾನಿಸಿ ಅಭಿನಂದಿಸಿದರು.
ಪ್ರಾಚಾರ್ಯರಾದ ಶ್ರೀಶೈಲ ಹೊಗಾಡೆ, ಉಪನ್ಯಾಸಕರು, ವಿದ್ಯಾರ್ಥಿಗಳ ಪಾಲಕರು ಇತರರಿದ್ದರು.
**
ಚಿತ್ರ: 17ಜಿಎಲ್ ಬಿ31
ಹಳ್ಳಿ ಹುಡುಗ ದೇಶಕ್ಕೆ 190 ರಾರ ಯಂಕ್
ಶಿಕ್ಷಕ ಮಗ ಚನ್ನಬಸವ ಧರ್ಮರಾಯ ಕೊರಳ್ಳಿ ನೀಟ್ ನಲ್ಲಿ720ಕ್ಕೆ 685 ಅಂಕ ಪಡೆದು ಆಲ್ ಇಂಡಿಯಾಗೆ 190 ರಾರ ಯಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾನೆ.
ಚನ್ನಬಸವ ಧರ್ಮರಾಯ ಕೊರಳ್ಳಿ ಮೂಲತಃ ಆಳಂದ ತಾಲೂಕಿನ ಪಡಸಾವಳಿ ಗ್ರಾಮದವರು. ತಂದೆ ಧರ್ಮರಾಯ ಕೊರಳ್ಳಿ ಪ್ರೌಢ ಶಾಲೆಯ ಶಿಕ್ಷಕರಾಗಿದ್ದಾರೆ. ತಾಯಿ ಪ್ರೇಮಾ ಗೃಹಿಣಿಯಾಗಿದ್ದಾರೆ. ಚನ್ನಬಸವ 1ನೇ ತರಗತಿಯಿಂದ 5ನೇ ತರಗತಿವರೆಗೆ ಆಳಂದದಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾನೆ. ನಂತರ 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿಯವರೆಗೆ ತಾಡತೆಗನೂರಿನ ನವೋದಯ ಶಾಲೆಯಲ್ಲಿವಿದ್ಯಾಭ್ಯಾಸ ಮಾಡಿದ್ದಾನೆ. ನಂತರ ಶ್ರೀ ಶರಣಬಸವೇಶ್ವರ ರೆಸಿಡೆನ್ಸಿಯಲ್ ಸಂಯುಕ್ತ ಪಿಯು ಕಾಲೇಜಿನಲ್ಲಿವಿದ್ಯಾಭ್ಯಾಸ ಮಾಡಿ 582 (ಶೇ.97) ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದ. ಅದೇರೀತಿ ಈ ಬಾರಿ ನೀಟ್ ನಲ್ಲಿ720ಕ್ಕೆ 685 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.
*ವೈದ್ಯನಾಗುವ ಗುರಿ: ಮುಂದೆ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಿ ವೈದ್ಯ ಹುದ್ದೆ ಪಡೆದು ಸಮಾಜ ಸೇವೆ ಮಾಡಬೇಕು ಎಂಬ ಆಸೆಯಿದೆ ಎಂದು ಚನ್ನಬಸವ ಕೊರಳ್ಳಿ ತನ್ನ ಅಭಿಲಾಶೆ ವ್ಯಕ್ತಪಡಿಸುತ್ತಾನೆ.
ಕೋಟ್ ....
ನೀಟ್ ನಲ್ಲಿಇನ್ನೂ ಅಂಕ ನಿರೀಕ್ಷೆ ಮಾಡಿದ್ದೆ. ಮೊದಲ ನೀಟ್ ಪರೀಕ್ಷೆಯಲ್ಲಿಹೆಚ್ಚು ಅಂಕ ಬರುತಿತ್ತು. ಆದರೆ, ಎರಡನೇ ನೀಟ್ ಪೇಪರ್ ಕಠಿಣವಾಗಿತ್ತು. ಆದರೂ 685 ಅಂಕ ಪಡೆದಿದ್ದೇನೆ. ಮುಂದೆ ಏಮ್ಸ್ ನಲ್ಲಿಎಂಬಿಬಿಎಸ್ ಮಾಡಬೇಕು ಎಂದುಕೊಂಡಿದ್ದೇನೆ.
- ಚನ್ನಬಸವ ಕೊರಳ್ಳಿ, ನೀಟ್ ನಲ್ಲಿ685 ಅಂಕ ಪಡೆದ ವಿದ್ಯಾರ್ಥಿ
**
ಚಿತ್ರ: 17ಜಿಎಲ್ ಬಿ32
ಸಿವಿಲ್ ಕಾಂಟ್ರ್ಯಾಕ್ಟರ್ ಪುತ್ರಿ ಸಾಧನೆ
ಸಿವಿಲ್ ಕಾಂಟ್ರ್ಯಾಕ್ಟರ್ ಪುತ್ರಿ ಸಿಮ್ರಾನ್ ಬಾನು ಜುನೈದಿ ನೀಟ್ ನಲ್ಲಿಉತ್ತಮ ಅಂಕ ಪಡೆದಿದ್ದು, 720ಕ್ಕೆ 657 ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಮೂಲತಃ ಚಿತ್ತಾಪುರದವರಾದ ಇವರು ತಂದೆ ಮೊಹ್ಮದ್ ಜಹುರುದ್ದಿನ್ ಸಿವಿಲ್ ಕಾಂಟ್ರ್ಯಾಕ್ಟರ್ ಆಗಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಎಸ್ಸೆಸ್ಸೆಲ್ಸಿವರೆಗೆ ಕೋರವಾರ ಜವಾಹರ ನವೋದಯದಲ್ಲಿವಿದ್ಯಾಭ್ಯಾಸ ಮಾಡಿದ್ದಾಲೆ. ಶ್ರೀ ಶರಣಬಸವೇಶ್ವರ ರೆಸಿಡೆನ್ಸಿಯಲ್ ಸಂಯುಕ್ತ ಪಿಯು ಕಾಲೇಜಿನಲ್ಲಿದ್ವಿತೀಯ ಪಿಯುಸಿಯಲ್ಲಿವಿದ್ಯಾಭ್ಯಾಸ ಮಾಡಿರುವ ಸಿಮ್ರಾನ್ ಪಿಯುಸಿಯಲ್ಲಿ596 ಅಂಕ ಪಡೆದಿದ್ದಳು. ಪ್ರಸ್ತುತ ನೀಟ್ ನಲ್ಲಿ720ಕ್ಕೆ 657 ಅಂಕ ಪಡೆದಿದ್ದಾಳೆ. ಕಾಲೇಜಿನಲ ಸಮಯ ಹೊರತುಪಡಿಸಿ ಮತ್ತೆ ನಾಲ್ಕು ಗಂಟೆ ಓದಿಗಾಗಿ ಮೀಸಲಿಡುತ್ತಿದ್ದೆ. ಜತೆಗೆ ಕಾಲೇಜಿನ ಉಪನ್ಯಾಸಕರ ಬೋಧನೆ ಅತ್ಯುತ್ತಮವಾಗಿದ್ದು, ಹಾಸ್ಟ್ ನಲ್ಲಿಯೂ ಕೇಳಿದ ಸಮಸ್ಯೆಗೆ ಪರಿಹಾರ ನೀಡುತ್ತಿದ್ದರು. ಆದ್ದರಿಂದ ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಪರಿಹಾರ ಸಿಗುತಿತ್ತು. ಈ ಹಿನ್ನೆಲೆಯಲ್ಲಿಉತ್ತಮ ಅಂಕ ಪಡೆಯಲು ಸಾಧ್ಯವಾಯಿತು ಎಂದು ಹೇಳಿದಳು.
*ಐಎಎಸ್ ಕನಸು: ಪ್ರಸ್ತುತ ನೀಟ್ ನಲ್ಲಿಪಡೆದ ಅಂಕದ ಮೇಲೆ ಯಾವುದಾದರು ಏಮ್ಸ…ನಲ್ಲಿಎಂಬಿಬಿಎಸ್ ಸೀಟ್ ಪಡೆದು ವಿದ್ಯಾಭ್ಯಾಸ ಮಾಡಲಾಗುವುದು. ನಂತರ ಸಿವಿಲ್ ಸವೀರ್ ಸ್ ಪರೀಕ್ಷೆಗೆ ತಯಾರಿ ನಡೆಸುವ ಗುರಿಯಿದೆ ಎಂದು ಸಿಮ್ರಾನ್ ಜುನೈದಿ ಹೇಳುತ್ತಾರೆ.
ಕೋಟ್ ...
ನೀಟ್ ನಲ್ಲಿಉತ್ತಮ ಅಂಕ ಪಡೆಯಲು ಕಾಲೇಜಿನ ಉಪನ್ಯಾಸಕರ ಉಪನ್ಯಾಸಕರ ಉತ್ತಮ ಬೋಧನೆ ಅನುಕೂಲವಾಯಿತು. ಜತೆಗೆ ತಂದೆ-ತಾಯಿ ಆಶೀರ್ವಾದ ಜತೆಗೆ ಕಷ್ಟಪಟ್ಟು ಓದಿರುವುದು ನನ್ನ ಕೈ ಹಿಡಿಯಿತು. ಎಂಬಿಬಿಎಸ್ ಮಾಡಿ ಮುಂದೆ ಐಎಎಸ್ ಮಾಡುವ ಕನಸಿದೆ.