*** 19ರಂದು ಬಲಿಪ ಪ್ರಶಸ್ತಿ ಪ್ರದಾನ, ತಾಳಮದ್ದಲೆ

Contributed byvijaya.poojary@timesgroup.com|Vijaya Karnataka
balipa award and taalamadale event tomorrow evening
ವಿಕ ಸುದ್ದಿಲೋಕ ಮಂಗಳೂರು

ಕೀರ್ತಿಶೇಷ ಬಲಿಪ ಭಾಗವತದ್ವಯರ ಪ್ರಶಸ್ತಿ 2026 ಪ್ರದಾನ ಸಮಾರಂಭ ಹಾಗೂ 22ನೇ ವರ್ಷದ ತಾಳಮದ್ದಲೆ ಕಾರ್ಯಕ್ರಮ ಜು.19ರಂದು ಮಧ್ಯಾಹ್ನ 2 ರಿಂದ ಮಲ್ಲಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿನಡೆಯಲಿದೆ.
ಮಲ್ಲಕ್ಷೇತ್ರದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಅರ್ಥಧಾರಿ ಹಾಗೂ ವಿಮರ್ಶಕ ರಾಧಾಕೃಷ್ಣ ಕಲ್ಚಾರ್ ಭಾಗವಹಿಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ವಾಟೆಪಡ್ಪು ವಿಷ್ಣುಶರ್ಮ ಅಭಿನಂದನಾ ಭಾಷಣ ಮಾಡಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಬಾಲಕೃಷ್ಣ ಭಟ್ ಕೂಟೇಲು ಅವರಿಗೆ ಬಲಿಪ ಭಾಗವತ ಪ್ರಶಸ್ತಿ ಪ್ರದಾನ ನಡೆಯಲಿದೆ.

ಬಳಿಕ ‘ಭೃಗು ಶಾಪ’ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಭಾಗವತಿಕೆಯಲ್ಲಿಬಲಿಪ ಶಿವಶಂಕರ ಭಟ್ , ಪುಂಡಿಕಾಯಿ ಗೋಪಾಲಕೃಷ್ಣ ಭಟ್ , ಶಾಲಿನಿ ಹೆಬ್ಬಾರ್ , ಸರಪಾಡಿ ಹರಿಪ್ರಸಾದ್ ಕಾರಂತ ಸಹಕರಿಸಲಿದ್ದಾರೆ. ಚೆಂಡೆ ಹಾಗೂ ಮದ್ದಲೆಯಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಆದಿತ್ಯ ಬರೆಕರೆ, ಚಕ್ರತಾಳದಲ್ಲಿಕೃಷ್ಣಪ್ರಸಾದ್ ಕಾಟಿಪಳ್ಳ ಸಹಕರಿಸಲಿದ್ದಾರೆ. ತಾಮಾಸುರ- ಪಲಿಯಾಲ ರವಿರಾಜ್ ಭಟ್ , ದೇವೇಂದ್ರ ರಾಧಾಕೃಷ್ಣ ಕಲ್ಚಾರ್ , ಖ್ಯಾತಿದೇವಿ- ವಿಷ್ಣುಶರ್ಮ ಪಣಕಜೆ, ವಿಷ್ಣು- ಡಾ.ವಾದಿರಾಜ ಕಲ್ಲೂರಾಯ, ಭೃಗು- ಕೃಷ್ಣಪ್ರಸಾದ್ ಕಾಟಿಪಳ್ಳ ಪಾತ್ರ ನಿರ್ವಹಿಸಲಿದ್ದಾರೆ.

ಫೋಟೊ-17ಎಂ ಬಲಿಪ