* ಮಲ್ಲಕಂಬ ಕ್ರೀಡೋತ್ಸವ ಉದ್ಘಾಟನೆಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ
ಕ್ರೀಡಾ ಸಂಕೀರ್ಣ ಬಳಕೆಗೆ ಶೀಘ್ರ ಮುಕ್ತ
ವಿಕ ಸುದ್ದಿಲೋಕ ಧಾರವಾಡ
ನೂತನವಾಗಿ ನಿರ್ಮಾಣಗೊಂಡ ಜಿಲ್ಲಾಕ್ರೀಡಾ ಸಂಕೀರ್ಣದಲ್ಲಿಕೆಲ ನ್ಯೂನ್ಯತೆಗಳನ್ನು ಸರಿಪಡಿಸಿ, ಟೆಂಡರ ಪ್ರಕ್ರಿಯೆ ನಡೆಸಲಾಗಿದೆ. ಕೆಲವೇ ದಿನಗಳಲ್ಲಿಕ್ರೀಡಾ ಸಂಕೀರ್ಣ ಬಳಕೆಗೆ ಮುಕ್ತವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ನೂತನ ಕ್ರೀಡಾ ಸಂಕೀರ್ಣದಲ್ಲಿಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಧಾರವಾಡ ಹಾಗೂ ಕರ್ನಾಟಕ ರಾಜ್ಯ ಅಮೆಚೂರ ಮಲ್ಲಕಂಬ ಸಂಸ್ಥೆ ಸಂಯುಕ್ತಾಶ್ರಯದಲ್ಲಿಶುಕ್ರವಾರ ನಡೆದ ಮಲ್ಲಕಂಬ ಕ್ರೀಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಲ್ಲಕಂಬ ಕ್ರೀಡೆಯು ಇತ್ತೀಚಿನ ಕ್ರೀಡೆಯಲ್ಲ. ರಾಮಾಯಣ ಪುರಾಣಗಳಲ್ಲಿಮಾನಸ-ಉಲ್ಲಾಸ ಗ್ರಂಥಗಳಲ್ಲಿಈ ಬಗ್ಗೆ ಉಲ್ಲೇಖವಿದೆ. ಈ ಕ್ರೀಡೆಯಲ್ಲಿಮಾನಸಿಕ ಏಕಾಗ್ರತೆ ಬಹಳ ಮುಖ್ಯ. ಮಲ್ಲಕಂಬ ಕ್ರೀಡೋತ್ಸವ ಕಾರ್ಯಕ್ರಮದಲ್ಲಿರಾಜ್ಯದ 14 ಜಿಲ್ಲೆಯ ಒಟ್ಟು 252 ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದು ಹೇಳಿದರು.
ಬಾಜಿರಾವ್ ಪೇಶ್ವೆಯವರ ಗುರುಗಳಾದ ಬಾಳಭಟ್ಟ ಈ ಕಲೆಯನ್ನು ಪುನರುಜ್ಜೀವನಗೊಳಿಸಿದರು. ಸೈನಿಕರಿಗೆ ಮನೋಬಲವನ್ನು ತುಂಬಿಸಲು ಮತ್ತು ಹೊರಾಟದ ಕೆಚ್ಚನ್ನು ಹೆಚ್ಚಿಸಲು ಈ ಕ್ರೀಡೆಯನ್ನು ನಮ್ಮ ಭಾಗದಲ್ಲಿಹೆಚ್ಚು ಪ್ರಚಲಿತಪಡಿಸಿದರು. ಪ್ರಧಾನ ಮಂತ್ರಿಗಳು ಮಲ್ಲಕಂಬ ಕ್ರೀಡೆಯನ್ನು ಖೇಲೋ ಇಂಡಿಯಾ ಕ್ರೀಡೆಯಲ್ಲಿಸೇರ್ಪಡೆಗೊಳಿಸಿದರು ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಮಲ್ಲಕಂಬ ಮತ್ತು ರೋಪ್ ಕ್ರೀಡೆಗಳು ಬಹಳ ಪ್ರಾಚೀನವಾಗಿದ್ದು, ಈ ಮಲ್ಲಕಂಬ ವಿದ್ಯೆಯನ್ನು 1965ನೇ ಇಸ್ವಿಯಲ್ಲಿಧಾರವಾಡದ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿಎನ್ .ಎಚ್ .ಪಾಟೀಲ ಅವರೊಂದಿಗೆ ರಂಭಿಸಲಾಯಿತು. ಈ ಕ್ರೀಡೋತ್ಸವವನ್ನು ಉಳಿಸಿ ಬೆಳೆಸಲು ಲಕ್ಷೇಶ್ವರದಲ್ಲಿಕಾರ್ಯಕ್ರಮ ಮಾಡಿ ಆಲ್ ಇಂಡಿಯಾ ಅಧ್ಯಕ್ಷರಾದ ಗೋಪೆ ಅವರ ಸಮ್ಮುಖದಲ್ಲಿಮಲ್ಲಕಂಬ ಕ್ರೀಡೆ ನಡೆಸಲಾಯಿತು ಎಂದು ಹೇಳಿದರು.
ರಾಜ್ಯ ಅಮೆಚೂರ ಮಲ್ಲಕಂಬ ಸಂಸ್ಥೆ ಅಧ್ಯಕ್ಷ ಪ್ರಕಾಶ ಮ್ಯಾಗೇರಿ, ಕಾರ್ಯದರ್ಶಿ ಎಸ್ .ಎಪ್ .ಕೊಡ್ಲಿ, ಪಾಲಿಕೆ ಸದಸ್ಯ ಸುರೇಶ ಬೇದರೆ, ವಿಷ್ಣು ಕೇರಳೆ, ಸಿ.ಕೆ.ಚನ್ನಾಳ, ಸದಾನಂದ ಅಮರಾಪುರ, ಶಾಂಭಯ್ಯ ಹಿರೇಮಠ, ವಿವಿಧ ಇಲಾಖೆ ಅಧಿಕಾರಿಗಳು, ತರಬೇತುದಾರರು ಇದ್ದರು.
ಫೋಟೊ: 17ನಿಜಗುಣಿ4
ಧಾರಾಡ ನೂತನ ಕ್ರೀಡಾ ಸಂಕೀರ್ಣದಲ್ಲಿಶುಕ್ರವಾರ ನಡೆದ ಮಲ್ಲಕಂಬ ಕ್ರೀಡೋತ್ಸವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡಿ ಪಟುಗಳಿಗೆ ಶುಭ ಹಾರೈಸಿದರು.