‘‘ಭಾರತ ಚುನಾವಣೆ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿಯನ್ನು ಮರುನಿಗದಿಪಡಿಸಿದೆ,’’ ಎಂದು ಜಿಲ್ಲಾಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ್ ಹೇಳಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ‘‘ಆ.8 ರವರೆಗೆ ಬಿಎಲ್ ಒಗಳಿಂದ ಮನೆ ಮನೆ ಭೇಟಿ ವಿಸ್ತರಿಸಲಾಗಿದೆ. ಆ.17ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.
ಆ.17 ರಿಂದ ಸೆ. 16ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಆ.17 ರಿಂದ ಅ.15ರವರೆಗೆ ನೋಟಿಸ್ ಅವಧಿ, ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಅ.19 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗ್ತುದೆ,’’ ಎಂದು ತಿಳಿಸಿದರು.
ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ಸೇರಿ ಐದು ವಿಧಾನಸಭೆ ಕ್ಷೇತ್ರಗಳು ಒಳಗೊಂಡಂತೆ
ಕೊಪ್ಪಳ ಜಿಲ್ಲೆಯಲ್ಲಿಒಟ್ಟು 11,90,214 ಮತದಾರರಿದ್ದಾರೆ. ಮನೆಮನೆ ಭೇಟಿ ವೇಳೆ ಗಣತಿ ನಮೂನೆ ಹಂಚಿಕೆ ಮಾಡಲಾಗಿದೆ.
ಜು.16ರ ಸಂಜೆವರೆಗೆ 7,69,695 ಗಣತಿ ನಮೂನೆ ಡಿಜಿಟಲೀಕರಣ ಮಾಡಲಾಗಿದ್ದು, ಜಿಲ್ಲೆಯಲ್ಲಿಯಲ್ಲಿಶೇ.64.07 ರಷ್ಟು ಪ್ರಗತಿಯಾಗಿದೆ.
ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲಿಹೆಚ್ಚು ಹಾಗೂ ಕೊಪ್ಪಳ ಕ್ಷೇತ್ರದಲ್ಲಿಕಡಿಮೆ ಆಗಿದೆ. ‘‘ಆನ್ ಲೈನ್ ಮೂಲಕ ಬಂದಿರುವ 475 ಅರ್ಜಿ ಪರಿಶೀಲನೆ ಬಾಕಿಯಿದೆ. ಇದುವರೆಗೂ 1426 ಗೈರುಹಾಜರಿ , 13,068 ಕಾಯಂ ಸ್ಥಳಾಂತರ, 9333 ಮೃತರು, 5131 ನಕಲು, 42 ಇತರೆ ಎಂಬುದಾಗಿ ಕಂಡು ಬಂದಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬಿಎಲ್ ಒ-ಬಿಎಲ್ ಎ ಸಭೆ ಮಾಡಿದ್ದು, ವಿಧಾನಸಭೆ ಕ್ಷೇತ್ರವಾರು ಸಭೆ ನಡೆಸಲು ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,’’ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿಜಿಲ್ಲಾಚುನಾವಣೆ ಶಾಖೆಯ ತಹಸೀಲ್ದಾರ್ ರವಿ ವಸ್ತ್ರದ್ , ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸುನಿಲ್ ಹೆಸರೂರ, ಕೃಷ್ಣ ಇಟ್ಟಂಗಿ, ಸೋಮನಗೌಡ, ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
======
ವಿಧಾನ ಸಭೆ ಕ್ಷೇತ್ರವಾರು ಮಾಹಿತಿ
ಕನಕಗಿರಿ ವಿಧಾನಸಭೆ- ಶೇ.70.49
ಯಲಬುರ್ಗಾ - ಶೇ. 66.03
ಗಂಗಾವತಿ- ಶೇ. 63.06
ಕುಷ್ಟಗಿ- ಶೇ. 61.58
ಕೊಪ್ಪಳ- ಶೇ.59.88
==
16-ಕೆಪಿಎಲ್ ವಿಠ್ಠಲ ಫೊಟೊ-27
ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿನಡೆದ ಸಭೆಯಲ್ಲಿಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ್ ಮಾತನಾಡಿದರು.