33 ಕೆವಿ ಸಂಗೊಳ್ಳಿ ವಿದ್ಯುತ್ ವಿತರಣೆ ಉಪಕೇಂದ್ರದ ಮಾರ್ಗದ ಸಾಣಿಕೊಪ್ಪ ಲೇಔಟದಲ್ಲಿ(ಕಿತ್ತೂರ ಹತ್ತಿರ) ಕಂಬಗಳ ಸ್ಥಳಾಂತರ ಕಾಮಗಾರಿ ನಿಮಿತ್ತ ಜು.19ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ನಾನಾ ಕಡೆ ವಿದ್ಯುತ್ ವ್ಯತ್ಯಯವಾಗಲಿದೆ.ಹೊಳಿನಾಗಲಾಪುರ, ಕುಲಮನಟ್ಟಿ, ಕಡತನಾಳ, ಗುಡದೂರ, ಸಂಗೊಳ್ಳಿ, ಮಲಕಿನಕೊಪ್ಪ, ಗರ್ಜೂರ, ರಾಯಣ್ಣ ಸೈನಿಕ ಸ್ಕೂಲ್ ಮಾರ್ಗಕ್ಕೆ ಒಳಪಡುವ ಗ್ರಾಮಗಳ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿವ್ಯತ್ಯಯವಾಗಲಿದೆ.
ಸಂಪಗಾಂವ ಉಪಕೇಂದ್ರ:
33/11 ಕೆವಿ ಸಂಪಗಾಂವ ವ್ಯಾಪ್ತಿಯ ಚಿಕ್ಕಬಾಗೇವಾಡಿ, ಸಂಪಗಾಂವ, ನಾವಲಗಟ್ಟಿ, ತಿಗಡಿ, ಭಾಂವಿಹಾಳ, ಸಾಣಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿವಿದ್ಯುತ್ ಪೂರೈಕೆಯಲ್ಲಿವ್ಯತ್ಯಯವಾಗಲಿದೆ.
ನೇಗಿನಹಾಳ ಉಪಕೇಂದ್ರ:
33/11 ಕೆವಿ ನೇಗಿನಹಾಳ ವಿದ್ಯುತ್ ಉಪಕೇಂದ್ರ ವ್ಯಾಪ್ತಯ ಬೇವಿನಕೊಪ್ಪ, ಕೇಸರಕೊಪ್ಪ, ಆದಿತ್ಯ ಮಿಲ್ಕ ಡೇರಿ, ಯರಡಾಲ, ಹೊಳಿಹೊಸೂರ, ನೇಗಿನಹಾಳ, ಅಮಟೂರ, ದೇವಲಾಪುರ, ಕುರಗುಂದ ಹಾಗೂ ನಾನಾ ಗ್ರಾಮಗಳಲ್ಲಿವಿದ್ಯುತ್ ವ್ಯತ್ಯಯ ಉಂಟಾಗಲಿದೆ.