ವಿಕ ಸುದ್ದಿಲೋಕ ಬ್ಯಾಕೋಡು (ಶಿವಮೊಗ್ಗ)ಹೊಸನಗರ ತಾಲೂಕಿನ ಸಂಪೆಕಟ್ಟೆ ಸಮೀಪದ ನಂದಿಹಕ್ಕಲು ಗ್ರಾಮದ ಪುಟ್ಟಪ್ಪ (70) ಎಂಬುವವರು ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ.
ಸೋಮವಾರ ಸಂಜೆ ಇವರು ತುಮರಿ ಸಮೀಪದ ಕೊಡಸರ ಗ್ರಾಮದಲ್ಲಿರುವ ತಮ್ಮ ಮಗಳ ಮನೆಗೆ ತೆಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಸಣ್ಣ ಹಳ್ಳವನ್ನು ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮ ಘಟನೆ ಸಂಭವಿಸಿದೆ.
ಮಂಗಳವಾರ ರಾತ್ರಿ ಹಳ್ಳಕ್ಕೆ ಮೀನು ಹಿಡಿಯಲು ಹೋದ ಗ್ರಾಮಸ್ಥರು ಶವ ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪುಟ್ಟಪ್ಪ ಅವರಿಗೆ ಪತ್ನಿ, ಮೂವರು ಪುತ್ರಿಯರು , ಒಬ್ಬ ಪುತ್ರ ಇದ್ದಾರೆ. ಕಾರ್ಗಲ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.