ಸೇವಾ ನಿವೃತ್ತಿ ಅಧ್ಯಾಪಕರಿಗೆ ಗೌರವಾರ್ಪಣೆ

Contributed byvijaya.poojary@timesgroup.com|Vijaya Karnataka
teacher honoring discussion on indian knowledge tradition at retirement ceremony
ವಿಕ ಸುದ್ದಿಲೋಕ ಮಂಗಳೂರು

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ದಕ್ಷಿಣ ಕನ್ನಡ ಜಿಲ್ಲೆಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಆಫ್ ಬಿಸಿನೆಸ್ ಮ್ಯಾನೇಜ್ ಮೆಂಟ್ ಮಂಗಳೂರು ಸಹಯೋಗದಲ್ಲಿಶನಿವಾರ ಗುರುವಂದನಾ ಕಾರ್ಯಕ್ರಮ, ಸೇವಾ ನಿವೃತ್ತಿ ಹೊಂದಿದ ಅಧ್ಯಾಪಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿನಡೆಯಿತು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಸಂದೀಪ್ ಬೂದಿಹಾಳ ಕಾರ್ಯಕ್ರಮ ಉದ್ಘಾಟಿಸಿ, ಗುರು ಶಿಷ್ಯ ಪರಂಪರೆ ಅತ್ಯಂತ ಮಹತ್ವದ್ದಾಗಿದ್ದು, ಅದು ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ , ವಾಗ್ಮಿ ಡಾ. ರವೀಂದ್ರ ಅವರು ಭಾರತೀಯ ಜ್ಞಾನ ಪರಂಪರೆ ಕುರಿತು ಮಾತನಾಡಿ, ಇಂದಿನ ಯುವ ಸಮುದಾಯಕ್ಕೆ ಭಾರತಿಯ ಜ್ಞಾನ ಪರಂಪರೆಯ ಮಹತ್ವವನ್ನು ತಿಳಿಸುವ ಜವಾಬ್ದಾರಿ ಇಂದಿನ ಶಿಕ್ಷಕರಲ್ಲಿದೆ. ಆಧುನಿಕ ಶಿಕ್ಷಣ ಪದ್ಧತಿಯ ಮಧ್ಯೆ ಭಾರತೀಯ ಶಿಕ್ಷಣ ಪರಂಪರೆಯನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸಬೇಕು, ಆಗ ಮಾತ್ರ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಜನಾಂಗಕ್ಕೆ ನಾವು ತಲುಪಿಸುವುದಕ್ಕೆ ಸಾಧ್ಯ ಎಂದರು.

ಕೆಆರ್ ಎಂಎಸ್ ಎಸ್ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ.ಮಾಧವ ಎಂ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್ ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಪ್ರಿನ್ಸಿಪಾಲ್ ಡಾ. ಭಾನುಪ್ರಕಾಶ್ ಬಿ.ಇ. ಶಿಕ್ಷಕ ವೃತ್ತಿಯ ಶ್ರೇಷ್ಠತೆಯ ಕುರಿತು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧ್ಯಾಪಕರಾದ ಕೆ. ಎಸ್ . ಹೆಗ್ಡೆ ಕಾಲೇಜಿನ ದಿನೇಶ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯದ ಪ್ರೊ ವಿಶಾಲಾಕ್ಷಿ, ವಿಜಯಾ ಕಾಲೇಜಿನ ವೆಂಕಟೇಶ್ ಭಟ್ , ಎಸ್ ಡಿಎಂ ಕಾಲೇಜಿನ ಪ್ರೊ. ಅರುಣಾ ಪಿ. ಕಾಮತ್ , ಬೆಳಂದೂರು ಕಾಲೇಜಿನ ಶಂಕರ್ ಭಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಡಾ.ಸುಧಾ ಯು. ಸ್ವಾಗತಿಸಿದರು. ಶ್ರುತಿ ಎನ್ . ವಂದಿಸಿದರು. ಗೀತಾ ಜೈನ್ , ಕಾಜಲ್ ಶ್ರುತಿ ಎನ್ ಕಾರ್ಯಕ್ರಮಸಂಯೋಜಿಸಿ ಕಾಜಲ್ ಕಾರ್ಯಕ್ರಮ ನಿರೂಪಿಸಿದರು.

25ಎಂಎನ್ ಜಿ-ಸೇವಾ ಸನ್ಮಾನ