ವಿಕ ಸುದ್ದಿಲೋಕ ಶ್ರೀರಾಮನಗರ ಗ್ರಾಮದಲ್ಲಿಪಾಂಡುರಂಗ -ರುಕ್ಮೀಣಿದೇವಿ ಭಾವಚಿತ್ರದ ಮೆರವಣಿಗೆ ಭಾನುವಾರ ಜರುಗಿತು.
ರೇಣುಕಾ ಯಲ್ಲಮ್ಮ ದೇವಸ್ಥಾನ ಎದುರು ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೀರ್ತನೆ ಕಾರ್ಯಕ್ರಮ ಜರುಗಿತು. ಕೊಟ್ನೆಕಲ್ ನ ಸಂಗಯ್ಯ ತಾತ, ಅರ್ಚಕ ಶ್ರೀಕಾಂತಯ್ಯಸ್ವಾಮಿ, ಚಿಕ್ಕಸೋಬಟಗಿ ಚಂದ್ರಪ್ಪ ಸಂತರ ನೇತೃತ್ವದಲ್ಲಿಪೋತಿ ಸ್ಥಾಪನೆ ನಡೆಯಿತು. ಹಳೇ ಜೂರಟಗಿ ವೆಂಕಟೇಶಪ್ಪ ಸಂತರು, ಚಿಕ್ಕಬೊಮ್ಮನಾಳ ದೇವಪ್ಪ ಸಂತರು, ಹುಲಸನಹಟ್ಟಿಯ ಶರಣಪ್ಪ ಸಂತರಿಂದ ಪೂಜಾ ಕಾರ್ಯಕ್ರಮ ಹಾಗೂ ನಾಮಜಪ ನೆರವೇರಿತು. ಚಂದ್ರಪ್ಪ ಅವರು ಕೀರ್ತನೆ ನಡೆಸಿಕೊಟ್ಟರು. ಹೊಸಪೇಟೆಯ ಪದ್ಮಾವತಿ ಅವರು ಪ್ರವಚನ ಸೇವೆ ಸಲ್ಲಿಸಿದರು. ಪನ್ನಾಪುರಿನ ಸುಖಮುನಿಯಪ್ಪ ವೀಣಾ ಸೇವೆ ಮಾಡಿದರು.
26 ಶ್ರೀರಾಮನಗರ 01
ಶ್ರೀರಾಮನಗರದಲ್ಲಿಪಾಂಡುರಂಗ ರುಕ್ಮೀಣಿದೇವಿ ಭಾವಚಿತ್ರ ಮೆರವಣಿಗೆ ಸಂಭ್ರಮದಿಂದ ಭಾನುವಾರ ಜರುಗಿತು.