ಕೋಟ : ‘‘ಸರಕಾರಿ ಹುದ್ದೆ ಪಡೆಯಬೇಕಾದರೆ ಓದು ಅಗತ್ಯ. ನಿರಂತರ ಜ್ಞಾನ ಸಂಪಾದನೆ ಮಾಡಿದಾಗ ಯಾವುದೇ ಪರೀಕ್ಷೆಯಲ್ಲಿಯಶಸ್ಸು ಸಾಧ್ಯ,’’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ಹೇಳಿದರು.
ಜಿಲ್ಲಾಪ್ರಶಸ್ತಿ ಪುರಸ್ಕೃತ ಮಿತ್ರ ಸಂಗಮ ಬೀಜಾಡಿ-ಗೋಪಾಡಿ, ಕೋಟ ವಿ-ಶೈನ್ ಕೋಚಿಂಗ್ ಸೆಂಟರ್ ಆಶ್ರಯದಲ್ಲಿರೋಟರಿ ಕ್ಲಬ್ ಕೋಟೇಶ್ವರ, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಸಹಯೋಗದೊಂದಿಗೆ ಬೀಜಾಡಿ ಮಿತ್ರ ಸೌಧದಲ್ಲಿಭಾನುವಾರ ನಡೆದ ಸರಕಾರದ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯಶಸ್ಸು ಸಾಧಿಸಬೇಕಾದರೆ ಪರೀಕ್ಷೆಯಲ್ಲಿಅಭ್ಯರ್ಥಿಯ ಜ್ಞಾನ, ಸಾಮಾನ್ಯ ಅರಿವು, ಭಾಷಾ ಕೌಶಲ್ಯ, ವಿಷಯ ಪರಿಣತಿ ಅಗತ್ಯ ಎಂದರು.
ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಕೋಟೇಶ್ವರ ಅಧ್ಯಕ್ಷೆ ಅಕ್ಷತಾ ಗಿರೀಶ್ , ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಉಪಾಧ್ಯಕ್ಷ ರಾಜೀವ ದೇವಾಡಿಗ, ಸಮಾಜಸೇವಕ ಡೇವಿಡ್ ಸಿಕ್ವೇರ ಶುಭ ಹಾರೈಸಿದರು.
ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಅಧ್ಯಕ್ಷ ಶಂಕರನಾರಾಯಣ ಬಾಯರಿ, ಮಹಾರಾಷ್ಟ್ರ ಸರಕಾರದ ನಿವೃತ್ತ ನೌಕರ ಎಲ್ .ವಿ.ನಾಯ್ ್ಕ ಉಪಸ್ಥಿತರಿದ್ದರು. ಕೀರ್ತನಾ, ವಿಶಾಲಾಕ್ಷಿ ಅನಿಸಿಕೆ ವ್ಯಕ್ತಪಡಿಸಿದರು. ಬೀಜಾಡಿ ಮಿತ್ರ ಸಂಗಮದ ಉಪಾಧ್ಯಕ್ಷ ಅನೂಪ್ ಕುಮಾರ್ ಬಿ.ಆರ್ . ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಕೋಟೇಶ್ವರದ ಕಾರ್ಯದರ್ಶಿ ಅರುಣ್ ದೇವಾಡಿಗ ವಂದಿಸಿದರು.