ಪೆರಂಪಳ್ಳಿಯಲ್ಲಿಮನೆಯಂಗಳಕ್ಕೆ ಬಿದ್ದ ಈಚರ್ ಲಾರಿ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಡಿಕ್ಕಿ * ಕ್ರೇನ್ ಸಹಾಯದಿಂದ ಲಾರಿ ತೆರವು

Contributed byajitha.m@timesofindia.com|Vijaya Karnataka
accident in perampalli causes five days power disruption
ವಿಕ ಸುದ್ದಿಲೋಕ ಉಡುಪಿ

ಚಾಲಕನ ನಿಯಂತ್ರಣ ತಪ್ಪಿದ ಈಚರ್ ಲಾರಿಯೊಂದು ರಸ್ತೆ ಬದಿಯ ಟ್ರಾನ್ಸ್ ಫಾರ್ಮರ್ ಕಂಬ, ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಬಳಿಕ ಮನೆಯೊಂದರ ಅಂಗಳಕ್ಕೆ ಬಿದ್ದ ಘಟನೆ ಶನಿವಾರ ರಾತ್ರಿ ಪೆರಂಪಳ್ಳಿ ಮೀನು ಮಾರುಕಟ್ಟೆ ಸಮೀಪ ಸಂಭವಿಸಿದೆ.
ಮಣಿಪಾಲದಿಂದ ಪೆರಂಪಳ್ಳಿ ಮಾರ್ಗವಾಗಿ ಸಾಗುತ್ತಿದ್ದ ಲಾರಿ ರಾತ್ರಿ ಸುಮಾರು 9 ಗಂಟೆ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಮೊದಲು ಟ್ರಾನ್ಸ್ ಫಾರ್ಮರ್ ಕಂಬ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಬಳಿಕ ರವಿ ಪೂಜಾರಿ ಎಂಬವರ ಮನೆಯ ಅಂಗಳಕ್ಕೆ ಬಿದ್ದಿದೆ. ಮನೆಯ ಸಿಮೆಂಟ್ ಶೀಟ್ ಗೆ ಹಾನಿಯಾಗಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ.

ಲಾರಿ ಚಾಲಕ ನಿದ್ರೆಗೆ ಜಾರಿದ್ದರಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ವೇಳೆ ರಸ್ತೆಯಲ್ಲಿಅಥವಾ ಮನೆಯಂಗಳದಲ್ಲಿಯಾರೂ ಇರದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿತಪ್ಪಿದೆ.

ಡಿಕ್ಕಿಯ ರಭಸಕ್ಕೆ ಟ್ರಾನ್ಸ್ ಫಾರ್ಮರ್ ಕಂಬ ಮುರಿದು ಬಿದ್ದಿದ್ದು, ಶನಿವಾರ ರಾತ್ರಿಯಿಂದ ಆ ಭಾಗದಲ್ಲಿವಿದ್ಯುತ್ ಸರಬರಾಜಿನಲ್ಲಿವ್ಯತ್ಯಯ ಉಂಟಾಯಿತು. ಭಾನುವಾರ ಬೆಳಗ್ಗೆ ಎರಡು ಕ್ರೇನ್ ಗಳ ಸಹಾಯದಿಂದ ಲಾರಿಯನ್ನು ತೆರವುಗೊಳಿಸಲಾಯಿತು.

ಫೋಟೊ: 26ಎಎ ಉಡುಪಿ