ಶ್ರೀರಾಮನಗರ: ಗ್ರಾಮದ ಎ.ಕೆ.ಆರ್ .ಡಿ. ಪಿ.ಯು. ಕಾಲೇಜಿನಲ್ಲಿಭಾನುವಾರ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣೆ ಶಿಬಿರ ಜರುಗಿತು.ಕಣ್ಣಿನ ತಪಾಸಣೆ, ಹೃದಯ ರೋಗ, ಸಕ್ಕರೆ ಕಾಯಿಲೆ, ಎಲುಬು ನೋವಿನ ಕಾಯಿಲೆ ತಪಾಸಣೆ ಮಾಡಲಾಯಿತು.
ವಿಜಯನಗರ-ಬೆಂಗಳೂರಿನ ಲಯನ್ಸ್ ಕ್ಲಬ್ ಅಧ್ಯಕ್ಷ ಶಂಕರೇಗೌಡ ಮಾತನಾಡಿ, ‘‘ಶಿಬಿರದಲ್ಲಿ 500 ಜನರು ಭಾಗವಹಿಸಿದ್ದು, 300 ರೋಗಿಗಳಿಗೆ ಕಣ್ಣಿನ ತಪಾಸಣೆ ಮಾಡಲಾಗಿದೆ.
ಉಳಿದ ನಾನಾ ಕಾಯಿಲೆ ಹೊಂದಿದವರಿಗೆ ಔಷಧ ವಿತರಿಸಲಾಯಿತು’’ ಎಂದು ಮಾಹಿತಿ ನೀಡಿದರು.
ವಿಜಯನಗರ-ಬೆಂಗಳೂರಿನ ಲಯನ್ಸ್ ಕಾರ್ಯದರ್ಶಿ ಅವಿನಾಶ ವಶಿಷ್ಠ, ಖಜಾಂಚಿ ಆನಂದ, ಸದಸ್ಯರಾದ ಭೈರೇಗೌಡ, ಬಾದಪ್ಪ, ಅನುಪಮಾ, ಬಸವರಾಜ ಇದ್ದರು.
===============
26 ಶ್ರೀರಾಮನಗರ 02
ಶ್ರೀರಾಮನಗರದ ಎ.ಕೆ.ಆರ್ .ಡಿ. ಪಿ.ಯು. ಕಾಲೇಜಿನಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿನೇತ್ರ ತಪಾಸಣೆ ಮಾಡಲಾಯಿತು.