ಲಯನ್ಸ್ ಕ್ಲಬ್ ಮಂಗಳೂರ್ ಬೆಂದೂರ್ ವೆಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕದ್ರಿ ಅಶೋಕ ಭವನ ಸಭಾಂಗಣದಲ್ಲಿನಡೆಯಿತು.ಕ್ಲಬ್ ನಡೆಸುತ್ತಿರುವ ಸೇವಾ ಕಾರ್ಯಗಳ ಬಗ್ಗೆ ಜಿಲ್ಲಾಸಂಯೋಜಕ ಸ್ವರೂಪ ಶೆಟ್ಟಿ ಮೆಚ್ಚು್ಚಗೆ ವ್ಯಕ್ತಪಡಿಸಿದರು.
ಅಧ್ಯಕ್ಷ ರವಿಕುಮಾರ್ ಎಂ.ಎಸ್ ., ಕಾರ್ಯದರ್ಶಿ ನಾಗರಾಜ ಶೆಟ್ಟಿ, ಖಜಾಂಚಿ ಹರೀಶ್ ಶೆಟ್ಟಿ ಕಾವೂರು, ಇತರ ಪದಾಧಿಕಾರಿಗಳ ಎನ್ .ಜೆ. ನಾಗೇಶ್ , ಮುರುಳೀಧರ್ ಭಂಡಾರಿ, ಹರೀಶ್ ಮಲ್ಲಿ, ವಿಠಲ್ ಆಳ್ವ , ಅನಂತ್ ಶೇಟ್ , ಕುಮರೇಶನ್ , ಕೇಶವ ಬಿ, ದೀಪಕ್ ಕುಮಾರ್ , ರಾಮ್ ಗಣೇಶ್ , ಅಬ್ದುಲ್ ಸತ್ತಾರ್ , ಭರತ್ ಜೈನ್ , ಗುರುಪ್ರಸಾದ್ ಪ್ರಮಾಣ ವಚನ ಸ್ವೀಕರಿಸಿದರು.
ಮಾಜಿ ಗವರ್ನರ್ ಕುಡ್ಪಿ ಅರವಿಂದ್ ಶೆಣೈ, ವೆಂಕಟೇಶ್ ಹೆಬ್ಬಾರ್ , ಮಹಮದ್ ಇಕ್ಬಾಲ್ , ಲೋಕೇಶ್ ಶೆಟ್ಟಿ ಶುಭ ಸಂದೇಶ ನೀಡಿದರು. ಕ್ಲಬಿನ ಪರವಾಗಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಅನಂತ ಶೇಟ್ ಕಾರ್ಯಕ್ರಮ ನಿರೂಪಿಸಿದರು.