ಚೇಳೂರು: ಬಾಗೇಪಲ್ಲಿವಿಧಾನಸಭೆ ಕ್ಷೇತ್ರದ ರೈತರಿಗೆ ಕೃಷಿ ಇಲಾಖೆಯಿಂದ ಉಚಿತ ಬಿತ್ತನೆ ಬೀಜ ವಿತರಣೆಯಾಗಲಿ. ಸರಕಾರಿ ಸೌಲಭ್ಯಗಳನ್ನು ನಿಮ್ಮ ಮನೆಗೆ ಬಾಗಿಲಿಗೆ ತಲುಪಿಸುವುದೇ ನಮ್ಮ ಸರಕಾರದ ಧ್ಯೇಯ ಎಂದು ಶಾಸಕ ಎಸ್ .ಎನ್ . ಸುಬ್ಬಾರೆಡ್ಡಿ ತಿಳಿಸಿದರು. ಬಿಳ್ಳೂರು ಗ್ರಾಮದಲ್ಲಿಕೃಷಿ ಇಲಾಖೆಯ ಬಿತ್ತನೆ ಬೀಜ ವಿತರಿಸಿ ಮಾತನಾಡಿದ ಅವರು, ಸರಕಾರದ ಸೌಲಭ್ಯಗಳನ್ನು ರೈತರಿಗೆ ತಲುಪಿಸಬೇಕು. ಈ ವರ್ಷ ಮಳೆಯ ಅಭಾವ ಎದುರಾಗುತ್ತಿದೆ, ಕೃಷಿ ಇಲಾಖೆಗೆ ಹೋಗಿ ಬೆಳೆ ವಿಮೆ ಮಾಡಿಸಿ, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ರೈತರಿಗೆ ಸಲಹೆ ನೀಡಿದರು. ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸ್ , ಕೃಷಿ ಅಧಿಕಾರಿ ಗಂಗಾಧರರೆಡ್ಡಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ವಿ. ದಿವ್ಯಾ, ವಿವಿಧ ಗ್ರಾಪಂ ಅಧಿಕಾರಿಗಳು, ಹಲವು ಮುಖಂಡರು ಹಾಜರಿದ್ದರು.