ಸಾವಯವ ಕೃಷಿಗೆ ಆದ್ಯತೆ ನೀಡಿ

Contributed byhotiblhvk@gmail.com|Vijaya Karnataka
prioritizing organic farming the need for multifaceted approaches to farmers welfare
ನಿಡಸೋಸಿ ನಿಜಲಿಂಗೇಶ್ವರ ಸ್ವಾಮೀಜಿ ಸಲಹೆ | ರಾಜ್ಯಮಟ್ಟದ ರೈತ ಹುತಾತ್ಮ ದಿನಾಚರಣೆ

ವಿಕ ಸುದ್ದಿಲೋಕ, ಬೈಲಹೊಂಗಲ
ಕೃಷಿ ನಂಬಿ ದುಡಿದರೆ ಆರ್ಥಿಕವಾಗಿ ಸಬಲರಾಗಲು ಕೃಷಿ ಕ್ಷೇತ್ರ ಸಹಕಾರಿ ಆಗುತ್ತದೆ ಎಂದು ನಿಡಸೋಸಿಯ ನಿಜಲಿಂಗೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿಅಖಂಡ ಕರ್ನಾಟಕ ರೈತ ಸಂಘದ ಆಶ್ರಯದಲ್ಲಿಮಂಗಳವಾರ ನಡೆದ 46ನೇ ರಾಜ್ಯಮಟ್ಟದ ರೈತ ಹುತಾತ್ಮ ದಿನಾಚರಣೆ ಹಾಗೂ ಹಸಿರು ಶಾಲು ದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ‘‘ಸಾವಯವ ಕೃಷಿಗೆ ರೈತರು ಹೆಚ್ಚಿನ ಆದ್ಯತೆ ನೀಡಬೇಕು ರೈತರ ಉದ್ಧಾರಕ್ಕೆ ಶ್ರಮಿಸಿದ ರೈತ ಹೋರಾಟಗಾರರು ಇಂದಿಗೂ ಸ್ಮರಣೀಯವಾಗಿದ್ದಾರೆ,’’ಎಂದರು.

ರೈತ ಮುಖಂಡ ಶಿವಾನಂದ ಇಂಚಲ ಪ್ರಾಸ್ತಾವಿಕವಾಗಿ ಮಾತನಾಡಿ, ‘‘ರೈತ ಮುಖಂಡರು ಒಗ್ಗಟ್ಟಿನಿಂದ ದುಡಿದರೆ ರೈತರು ಉದ್ಧಾರ ಸಾಧ್ಯ,’’ಎಂದು ತಿಳಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಕ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿದರು. ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಅಂಕಲಗಿಯ ಅಮರಸಿದ್ದೇಶ್ವರ ಸ್ವಾಮೀಜಿ, ಪ್ರಭಾ ಅಕ್ಕನವರು, ಡಾ.ಮಹಾಂತೇಶ ಆರಾದ್ರಿಮಠ, ವೀರಯ್ಯ ಸ್ವಾಮೀಜಿ, ಗೌರವಾಧ್ಯಕ್ಷ ಸಿದ್ಧನಗೌಡ ಪಾಟೀಲ, ಮಲ್ಲಿಕಾರ್ಜುನ ವಾಲಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹುಂಬಿ, ರಾಜ್ಯ ಮಹಿಳಾ ಗೌರವಾಧ್ಯಕ್ಷೆ ನಿಂಗಮ್ಮ ಮೈಸೂರು, ಕೆ.ಎಸ್ .ಸುಧೀರಕುಮಾರ, ಶಾಂತಮ್ಮ ಚಿತ್ರದುರ್ಗ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಉದ್ಯಮಿ ವಿಜಯ ಮೆಟಗುಡ್ಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಅಣ್ಣಪ್ಪ ಅರಳಿಕಟ್ಟಿ, ಶಂಕ್ರೆಪ್ಪ ಕಡಕೋಳ, ವಿಠ್ಠಲ ಯಾಸನ್ನವರ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಮಹಾಂತೇಶ ತುರಮರಿ ಸ್ವಾಗತಿಸಿದರು. ಶೈಲಜಾ ಕೊಕ್ಕರಿ ನಿರೂಪಿಸಿದರು.

ಫೊಟೊ21ಹೆಚ್ ಟಿಪಿ3: ಬೈಲಹೊಂಗಲದಲ್ಲಿನಡೆದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ನಾನಾ ಶ್ರೀಗಳು, ಗಣ್ಯರು ಉದ್ಘಾಟಿಸಿದರು.