ಹೊಸದಿಲ್ಲಿ: ಟೀಮ್ ಇಂಡಿಯಾದ ತ್ರಿವಳಿ ಬ್ಯಾಟಿಂಗ್ ತಾರೆಗಳಾದ ಶುಬ್ಮನ್ ಗಿಲ್ , ವಿರಾಟ್ ಕೊಹ್ಲಿಮತ್ತು ರೋಹಿತ್ ಶರ್ಮ ಐಸಿಸಿ ಏಕದಿನ ಬ್ಯಾಟಿಂಗ್ ರಾರ ಯಂಕಿಂಗ್ ನಲ್ಲಿಅಗ್ರ ಐವರಲ್ಲಿಮೂರು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಬುಧವಾರ ಬಿಡುಗಡೆಯಾದ ನೂತನ ಬ್ಯಾಟರ್ ಗಳ ರಾರ ಯಂಕಿಂಗ್ ಪಟ್ಟಿಯಲ್ಲಿಕೇವಲ 1 ಅಂಕದ ಹಿನ್ನಡೆಯೊಂದಿಗೆ ಗಿಲ್ ದ್ವಿತೀಯ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ನ ಡೇರಿಲ್ ಮಿಚೆಲ್ ಮೊದಲ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಮುಗಿದ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿಗಿಲ್ 188 ರನ್ ಕಲೆಹಾಕಿದರು. ಕೊಹ್ಲಿ(767 ಅಂಕ) ಮತ್ತು ರೋಹಿತ್ (758) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.