ರಾಜ್ಯದಲ್ಲಿಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ) ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆಹಾಗೂ ಸಾಮಾಜಿಕ ಅನ್ಯಾಯದ ಘಟನೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್ .ಮಾಳಗಿ ಆಗ್ರಹಿಸಿದರು.ನಗರದ ಪ್ರವಾಸಿ ಮಂದಿರದಲ್ಲಿಅಹಿಂದ ಸಂಘಟನೆ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘‘ಅಹಿಂದ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಬಲೀಕರಣಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಆದ್ಯತೆ ನೀಡಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿಅಹಿಂದ ಸಮುದಾಯದ ಮೇಲೆ ದೌರ್ಜನ್ಯ, ಹಲ್ಲೆಹಾಗೂ ತಾರತಮ್ಯದ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಬಾರದು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಸರಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’’ ಎಂದು ಹೇಳಿದರು.
‘‘ಅಹಿಂದ ಸಮುದಾಯದ ಜನರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕಿದ್ದು, ಸಾಮಾಜಿಕ ನ್ಯಾಯದ ಪರ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ’’ ಎಂದು ಅವರು ತಿಳಿಸಿದರು.
ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಪರಮೇಶ ದೇಸಳ್ಳಿ, ರಾಜ್ಯ ಉಪಾಧ್ಯಕ್ಷ ನಾಗರಾಜ ಬಾಲಣ್ಣನವರ, ಜಿಲ್ಲಾಕಾನೂನು ಘಟಕದ ಅಧ್ಯಕ್ಷ ನ್ಯಾಯವಾದಿ ಜಗದೀಶ ಮಲ್ಲೀಕೇರಿ, ಜಿಲ್ಲಾಉಪಾಧ್ಯಕ್ಷ ಪುಟ್ಟಪ್ಪ ಕುರಿ, ನಿಂಬಣ್ಣ ಹರಿಜನ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಮಂಜುನಾಥ ಮಡಿವಾಳರ, ವಕೀಲ ನಾಗರಾಜ ಮಾಳಗಿ, ಅಶೋಕ ಮರೆಯಣ್ಣನವರ, ಉಡಚಪ್ಪ ಮಾಳಗಿ, ರಾಜಶೇಖರ ಮಣ್ಣಮ್ಮನವರ, ಹನುಮಂತಪ್ಪ ಕಂಬಾರ, ನಾಗಪ್ಪ ಮುಳಗುಂದ, ವಿರೇಶ ನಿಂಬಣ್ಣನವರ, ಜಗದೀಶ ಬಣಕಾರ, ಡಿಳ್ಳೇಪ್ಪ ಅಗಡೇರ, ಮಂಜಪ್ಪ ಹಿತ್ತಲಮನಿ, ಮಾಲತೇಶ ಹುಚ್ಚಮರೆಣ್ಣನವರ, ಮಲ್ಲೇಶಪ್ಪ ಡಂಬಳ, ಗುಡ್ಡಪ್ಪ ಪೂಜಾರ ಅನೇಕರು ಉಪಸ್ಥಿತರಿದ್ದರು.
-
ಕೋಟ್
ಅಹಿಂದ ಸಮುದಾಯದ ಮೇಲೆ ದೌರ್ಜನ್ಯ, ಹಲ್ಲೆಗಳು ಹೆಚ್ಚುತ್ತಿವೆ. ಅಹಿಂದ ಜನರ ಮೇಲೆ ಹಲ್ಲೆದೌರ್ಜನ್ಯ ಬಗ್ಗೆ ಸಿಒಡಿ ತನಿಖೆಯಾಗಬೇಕು. ಜಿಲ್ಲೆಯಲ್ಲಿಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಹಿಂದ ವರ್ಗಗಳ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ.
-ಡಿ.ಎಸ್ ಮಾಳಗಿ., ಮಾಜಿ ಉಪಾಧ್ಯಕ್ಷ, ಲಿಡ್ಕರ್ ನಿಗಮ
ಪೋಟೋ 23 ಮಂಜು 1
ಹಾವೇರಿ ಪ್ರವಾಸಿ ಮಂದಿರದಲ್ಲಿಅಹಿಂದ ಸಂಘಟನೆಯ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.