ಗಣತಿ ಫಾರಂ ಬಿಎಲ್ ಒಗಳಿಗೆ ತಲುಪಿಸಿ

Contributed bygiridigitalartsbirur@gmail.com|Vijaya Karnataka
polling forms should be available systematically
ಗಣತಿ ಫಾರಂ ಬಿಎಲ್ ಒಗಳಿಗೆ ತಲುಪಿಸಿ

ವಿಕ ಸುದ್ದಿಲೋಕ ಕಡೂರು
ಎಸ್ ಐಆರ್ ಪ್ರಕ್ರಿಯೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಮತದಾರರ ಹೆಸರು ಸೇರ್ಪಡೆ, ಹೆಸರು ಕೈಬಿಡುವಿಕೆ, ತಿದ್ದುಪಡಿ ಹಾಗೂ ವಿಳಾಸ ಬದಲಾವಣೆ ಸೇರಿದಂತೆ ಎಲ್ಲಪ್ರಕ್ರಿಯೆಗಳನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಅನುಸಾರ ಪಾರದರ್ಶಕವಾಗಿ ಮತ್ತು ನಿಖರವಾಗಿ ಕೈಗೊಳ್ಳುವಂತೆ ಕಾಂಗ್ರೆಸ್ ಎಸ್ ಐಆರ್ ಪಟ್ಟಣದ ವೀಕ್ಷಕ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಸುಭಾಷ್ ನಗರ ವ್ಯಾಪ್ತಿಯ 19, 20, 21ನೇ ವಾರ್ಡ್ ಗಳಲ್ಲಿನ ಎಸ್ ಐಆರ್ ಪ್ರಕ್ರಿಯೆಯಲ್ಲಿತೊಡಗಿಸಿಕೊಂಡ ಹಿರಿಯ ನಾಗರಿಕ ಮತದಾರರನ್ನು ಗುರುವಾರ ಗೌರವಿಸಿ ಮಾತನಾಡಿದರು. ಈಗಾಗಲೇ ಎಸ್ ಐಆರ್ ಸಂಬಂಧಿಸಿ ಗಣತಿ ಫಾರಂಗಳನ್ನು ಬಿಎಲ್ ಒಗಳು ವಿತರಣೆ ಮಾಡಿದ್ದಾರೆ. ಅರ್ಹ ಮತದಾರರು ಗಣತಿ ಫಾರಂಗಳನ್ನು ಅಗತ್ಯ ಮಾಹಿತಿಗಳೊಂದಿಗೆ ಭರ್ತಿ ಮಾಡಿ ಕಡ್ಡಾಯವಾಗಿ ಬಿಎಲ್ ಒ ಗಳಿಗೆ ತಲುಪಿಸಬೇಕು ಎಂದರು.

ವಿಶೇಷವಾಗಿ ಎಸ್ ಐಆರ್ ಪ್ರಕ್ರಿಯೆಗೆ ಹಿರಿಯ ನಾಗರಿಕರು ಉತ್ಸುಕರಾಗಿ ಗಣತಿ ನಮೂನೆಯನ್ನು ಭರ್ತಿ ಮಾಡಲು ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಹಿರಿಯ ನಾಗರಿಕರಿಗೆ ಎಸ್ ಐಆರ್ ನಲ್ಲಿತೊಡಗಿಸಿಕೊಳ್ಳಲು ಪಕ್ಷದ ವತಿಯಿಂದ ಎಲ್ಲರೀತಿಯ ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.

ಪುರಸಭೆ ಮಾಜಿ ಸದಸ್ಯೆ ಜ್ಯೋತಿ ಆನಂದ್ , ಮುಖಂಡರಾದ ಡಿಶ್ ಮಂಜುನಾಥ್ , ನಾಗೇಂದ್ರ, ಸಾದಿಕ್ , ಅಜ್ಜಯ್ಯ, ಮಂಜುನಾಥ್ , ಚಂದ್ರು, ವರುಣ್ , ಭುವಿತ್ , ಇಲಿಯಾಸ್ ಹಾಗೂ ಇತರರಿದ್ದರು.

23ಕೆಡಿಆರ್ 2

ಕಡೂರಿನ ಸುಭಾಷ್ ನಗರದ 21ನೇ ವಾರ್ಡ್ ವ್ಯಾಪ್ತಿಯ ಎಸ್ ಐಆರ್ ಪ್ರಕ್ರಿಯೆಯಲ್ಲಿಭಾಗವಹಿಸಿದ ಹಿರಿಯ ನಾಗರಿಕ ವೆಂಕಟಪ್ಪ ಅವರಿಗೆ ಕಾಂಗ್ರೆಸ್ ವೀಕ್ಷಕ ಭಂಡಾರಿ ಶ್ರೀನಿವಾಸ್ ಗೌರವಿಸಿದರು.