ಜಿಬಿಎನಲ್ಲಿಎಐ ಘಟಕ ಸ್ಥಾಪನೆ

Contributed byshiva.rama@timesgroup.com|Vijaya Karnataka
four new axis analysis vases registered for the evening
ವಿಕ ಸುದ್ದಿಲೋಕ ಬೆಂಗಳೂರು

ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಾಗರಿಕ ಸೇವೆಗಳನ್ನು ಆಧುನೀಕರಿಸಲು ಪ್ರತ್ಯೇಕ ಕೃತಕ ಬುದ್ಧಿಮತ್ತೆ (ಎಐ) ಘಟಕವನ್ನು ಸ್ಥಾಪಿಸುತ್ತಿದೆ.
ಈ ಘಟಕವು ಡಿಜಿಟಲ್ ಆಡಳಿತವನ್ನು ಬಲಪಡಿಸಲು, ಪೌರರ ದತ್ತಾಂಶಗಳನ್ನು (ಡೇಟಾ) ಸಂಯೋಜಿಸಲು ಮತ್ತು ಆಡಳಿತಾತ್ಮಕ ದಕ್ಷತೆಯನ್ನು ಸುಧಾರಿಸಲು ಎಐ-ಆಧಾರಿತ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲಿದೆ.

ಪ್ರತಿಯೊಬ್ಬ ನಾಗರಿಕ ಮತ್ತು ಆಸ್ತಿಗಳಿಗೆ ಒಂದೇ ರೀತಿಯ ಡಿಜಿಟಲ್ ಗುರುತನ್ನು ಸೃಷ್ಟಿಸುವುದು, ಪೌರ ಸಂಸ್ಥೆಗಳು ತಂತ್ರಜ್ಞಾನ ಮಾರಾಟಗಾರರ ಮೇಲಿರುವ ಅವಲಂಬನೆಯನ್ನು ಕಡಿಮೆ ಮಾಡುವುದು, ಪ್ರತ್ಯೇಕವಾಗಿರುವ ನಾಗರಿಕ ಮತ್ತು ಸ್ಥಳೀಯ ಸಂಸ್ಥೆಗಳ ಡೇಟಾವನ್ನು ಒಗ್ಗೂಡಿಸಿ ಜನರಿಗೆ ಸುಲಭವಾಗಿ ಸೇವೆಗಳನ್ನು ಒದಗಿಸುವುದು ಎಐ ಘಟಕ ಸ್ಥಾಪನೆಯ ಮುಖ್ಯ ಉದ್ದೇಶವಾಗಿದೆ.

ಬಿಬಿಎಂಪಿ, ಜಲಮಂಡಳಿ ಸೇರಿದಂತೆ ವಿವಿಧ ಪ್ರತ್ಯೇಕ ಇಲಾಖೆಗಳ ಡೇಟಾವನ್ನು ಒಂದೆಡೆ ಸಂಯೋಜಿಸುವುದು, ಹೊರಗಿನ ಐಟಿ ಕಂಪನಿಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಜಿಬಿಎ ಸ್ವತಃ ತನ್ನದೇ ಆದ ನಾಗರಿಕ ಸೇವಾ ಆ್ಯಪ್ ಗಳನ್ನು ಎಐ ತಂತ್ರಜ್ಞಾನದ ಸಹಾಯದಿಂದ ತ್ವರಿತವಾಗಿ ಅಭಿವೃದ್ಧಿಪಡಿಸಲಿದೆ. ಸಾರ್ವಜನಿಕರ ಅರ್ಜಿಗಳ ವಿಲೇವಾರಿ, ಆಸ್ತಿ ತೆರಿಗೆ ಮತ್ತು ಡಿಜಿಟಲ್ ಗುರುತು ಪ್ರಕ್ರಿಯೆ ವೇಗಗೊಳಿಸಲು ಇದರಿಂದ ಸಹಕಾರಿಯಾಗಲಿದೆ.

ಈ ನಡುವೆ, ಭಾರತದ ಮೊದಲ ಸರಕಾರಿ ‘ಎಐ ವಿಶ್ವವಿದ್ಯಾಲಯ’ವನ್ನು ಬೆಂಗಳೂರಿನಲ್ಲಿಸ್ಥಾಪಿಸುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ಈಗಾಗಲೇ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿಬರೋಬ್ಬರಿ 100 ಎಕರೆ ಜಾಗದಲ್ಲಿಮುಖ್ಯ ಕ್ಯಾಂಪಸ್ ತಲೆಯೆತ್ತಲಿದೆ. ಕೇವಲ ಬೆಂಗಳೂರಿಗೆ ಸೀಮಿತವಾಗದೆ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲೂಪ್ರಾದೇಶಿಕ ಕ್ಯಾಂಪಸ್ ಗಳನ್ನು ಸ್ಥಾಪಿಸಿ, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್ , ರೊಬಾಟಿಕ್ಸ್ ಮತ್ತು ಡೇಟಾ ಸೈನ್ಸ್ ವಿಷಯಗಳಲ್ಲಿಪದವಿ ಹಾಗೂ ಸಂಶೋಧನೆಗೆ ಅವಕಾಶ ಕಲ್ಪಿಸಲು ಸರಕಾರ ಉದ್ದೇಶಿಸಿದೆ.