ವಿಕ ಸುದ್ದಿಲೋಕ ಹುಬ್ಬಳ್ಳಿಡಾ.ಆರ್ .ಬಿ.ಪಾಟೀಲ ಮಹೇಶ ಪಪೂ ಕಾಲೇಜಿನಲ್ಲಿಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಾನೂನು ಅರಿವು- ನೆರವು ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡದ ಕಾರ್ಯದರ್ಶಿ ಅಲ್ಲಪ್ಪ ಎಂ.ಬಡಿಗೇರ ಮಾತನಾಡಿ, ಹುಟ್ಟಿನಿಂದ ಸಾವಿನವರೆಗೆ ಕಾನೂನು ಇದೆ. ಪಾಪಿಸುವುದು ನಮ್ಮ ಕರ್ತವ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಅತಿಥಿಗಳಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಡಾ.ಕೆ.ಎಸ್ .ಸಮೀರಕುಮಾರ ಮಾತನಾಡಿ, ತಂದೆ, ತಾಯಿ ಮತ್ತು ಪಾಲಕರ ಮಾರ್ಗದರ್ಶನದಲ್ಲಿಜೀವನವನ್ನು ರೂಪಿಸಿಕೊಳ್ಳಬೇಕು. ಯಾವುದೇ ದುಶ್ಚಟಕ್ಕೆ ಬಲಿಯಾಗದೇ ಉತ್ತಮ ಭವಿಷ್ಯವನ್ನು ರೂಢಿಸಿಕೊಳ್ಳಬೇಕು ಎಂದರು. ಕಾನೂನು ನೆರವು ರಕ್ಷಣಾ ಸಲಹೆಗಾರರಾದ ಎಸ್ .ಎಸ್ .ಪಾಟೀಲ ಮತ್ತು ಮಯೂರ ನಾಟೇಕರ ವೇದಿಕೆಯಲ್ಲಿದ್ದರು.
ಎನ್ .ಎಲ್ .ಇ. ಸಂಸ್ಥೆಯ ಶೈಕ್ಷಣಿಕ ಸಂಯೋಜಕ ವಿಜಯಕುಮಾರ ಪಾಟೀಲ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಕಾಲೇಜಿನ ಪ್ರಾಂಶುಪಾಲ ರಾಮ ಮೋಹನ ಎಚ್ .ಕೆ., ಉಪ ಪ್ರಾಂಶುಪಾಲ ರಮೇಶ ಹೊಂಬಾಳೆ ಉಪಸ್ಥಿತರಿದ್ದರು. ನೀಲ್ ಪ್ರತಾಪನ್ ನಿರೂಪಿಸಿ, ವಂದಿಸಿದರು.
ಫೋಟೊ: ಲಾ - ಎಚ್ ಬಿಎಲ್ 23
ಹುಬ್ಬಳ್ಳಿಯ ಡಾ.ಆರ್ .ಬಿ.ಪಾಟೀಲ ಮಹೇಶ ಪಪೂ ಕಾಲೇಜಿನಲ್ಲಿನಡೆದ ಕಾನೂನು ಅರಿವು- ನೆರವು ಕಾರ್ಯಕ್ರಮದಲ್ಲಿಗಣ್ಯರು ಭಾಗವಹಿಸಿದ್ದರು.