ಪುಸ್ತಕ ಓದು, ಉತ್ತಮ ಸಾಹಿತ್ಯ ಜನ ಸಮಾಜವನ್ನು ಕಟ್ಟುವಲ್ಲಿಕಲ್ಪವೃಕ್ಷ, ಕಾಮಧೇನು, ಸಂಜೀವಿನಿಯಾಗಿ ಕೆಲಸ ಮಾಡುತ್ತದೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದ್ದಾರೆ.ಅವರು ಎಂಜಿಎಂ ಕಾಲೇಜು ಟ್ರಸ್ಟ್ , ಎಂಜಿಎಂ ಪದವಿ ಕಾಲೇಜು, ಎಂಜಿಎಂ ಪದವಿ ಪೂರ್ವ ಕಾಲೇಜು, ಎಂಜಿಎಂ ಸಂಧ್ಯಾ ಕಾಲೇಜು ಹಾಗೂ ಟಿ. ಮೋಹನ್ ದಾಸ್ ಪೈ ಕೌಶಲಾಭಿವೃದ್ಧಿ ಕೇಂದ್ರದ ಸಹಯೋಗದಲ್ಲಿಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿಗುರು ಎಂದರೆ ಲಘು ಅಲ್ಲ(ಸ್ವಾಮಿ ವೀರೇಶಾನಂದ ಸರಸ್ವತಿ ರಚಿತ) ಕೃತಿ ಬಿಡುಗಡೆ ಸಮಾರಂಭದಲ್ಲಿಗುರುವಾರ ಆîೕರ್ವಚನ ನೀಡಿದರು.
ಭೂಮಿಯಿಂದ ಚಂದ್ರನಲ್ಲಿಗೆ ಕಲ್ಪಿಸಿದ ಸಂಪರ್ಕವನ್ನು ಮನುಷ್ಯ-ಮನುಷ್ಯರ ಹೃದಯದ ನಡುವೆ, ಜೀವನದ ಗುರಿ ತೋರಿಸದೆ ದಾರಿ ತಪ್ಪಿಸಿದ್ದೇವೆ. ಗ್ರಂಥ ಓದು ಬದುಕಿನ ತಪಸ್ಸು. ವೈಚಾರಿಕ, ಭಾವನಾತ್ಮಕ ವಿಚಾರಗಳ ಬಗ್ಗೆ ಬುದ್ಧಿ, ಹೃದಯದ ನಡುವೆ ತಿಕ್ಕಾಟವಾದರೆ ವಿಶಾಲ ಮನೋಭಾವ ಬೆಳೆಯಲು ಸಾಧ್ಯ.
ಜೀವನ ಸಂಹಿತೆಯೇ ವೇದ, ಬದುಕು ಅರ್ಥಪೂರ್ಣ, ಸಶಕ್ತವಾಗಿಸುತ್ತದೆ. ಗುರು ವ್ಯಕ್ತಿಯಲ್ಲ, ತತ್ವ. ಮನುಷ್ಯನ ಎಲ್ಲಾಸಮಸ್ಯೆಗಳಿಗೆ ಶಿಕ್ಷಣದಲ್ಲಿಪರಿಹಾರವಿದೆ. ಒಂದು ಒಳ್ಳೇ ಶಾಲೆಯಿಂದ 100ಜೈಲು ಸ್ಥಾಪನೆ ತಪ್ಪಿಸಬಹುದು. ಪುಸ್ತಕಗಳಿಗಿಂತ ಉತ್ತಮ ಸ್ನೇಹಿತರು ಬೇರೆ ಇಲ್ಲ. ಸಾಹಿತ್ಯ ನಮಗೆ, ಸಮಾಜಕ್ಕೆ ಹಿತನೀಡಬೇಕು.
ಅಧ್ಯಯನಶೀಲತೆ ಯೋಗ್ಯತೆಯನ್ನು ನಿರ್ಧರಿಸುತ್ತದೆ. ಅಧ್ಯಾತ್ಮ, ಧರ್ಮ, ನೈತಿಕ ಶಿಕ್ಷಣ , ಸಂಸ್ಕಾರದ ಹೊರತು ವ್ಯಕ್ತಿತ್ವದ ದುರ್ನಡತೆ, ದೇಶ ಕಟ್ಟಲು ಬೇಕಾದ ವ್ಯಕ್ತಿಗಳ ನಡವಳಿಕೆಯನ್ನು ವಿಜ್ಞಾನದಿಂದ ತಿದ್ದಲು ಸಾಧ್ಯವಾಗದು. ಕನ್ನಡ ಪುಸ್ತಕಗಳು ಮಾರಾಟವಾಗುತ್ತಿಲ್ಲಎನ್ನುವ ಚಿಂತೆ ಬೇಡ. ರಾಮಕೃಷ್ಣ ವಿವೇಕಾನಂದ ಆಶ್ರಮ ಪ್ರತಿವರ್ಷ 4 ಕೋಟಿ ರೂ. ಮೌಲ್ಯದ ಸಾಹಿತ್ಯ ಕೃತಿಗಳ ಮಾರಾಟ ಮಾಡುತ್ತಿದೆ. ಉತ್ತಮ ಚಿಂತನೆಯ ಕೃತಿಗೆ ಶಾಶ್ವತ ಮೌಲ್ಯವಿದೆ, ಮಹತ್ವ ಕಳೆದುಕೊಳ್ಳದು ಎಂದರು.
ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ ಕೃತಿ ಬಿಡುಗಡೆ ಮಾಡಿದರು. ಟಿ.ಮೋಹನ್ ದಾಸ್ ಪೈ ಕೌಶಲ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ. ರಂಗ ಪೈ, ಎಂಜಿಎಂ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಗಾಯತ್ರಿ ಜಿ. ಪೈ, ವೈಸ್ ಪ್ರಿನ್ಸಿಪಾಲ್ ಡಾ. ವಿಶ್ವನಾಥ ಪೈ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಿನ್ಸಿಪಾಲ… ಡಾ. ದೇವಿದಾಸ್ ನಾಯ್ ್ಕ, ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಮಾಲತಿದೇವಿ ಉಪಸ್ಥಿತರಿದ್ದರು.
ಭೂಮಿಕಾ ಪ್ರಾರ್ಥಿಸಿದರು. ಆಡಳಿತಾಧಿಕಾರಿ ಡಾ. ಕೆ. ಶ್ರೀಧರ ಆರ್ . ಪೈ ಸ್ವಾಗತಿಸಿದರು. ಎಂಜಿಎಂ ಪದವಿ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಡಾ. ವಿಶ್ವನಾಥ ಪೈ ವಂದಿಸಿದರು.