ವಿದ್ಯಾರ್ಥಿಗಳು ಡ್ರಗ್ಸ್ ವಿರೋಧಕ್ಕೆ ರಾಯಭಾರಿಗಳಾಗಿ

Contributed bybhrahmanand.arali@timesgroup.com|Vijaya Karnataka
students take initiative to raise awareness against drugs
(ಚಿತ್ರಗಳು ಬರಲಿವೆ)

**
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ .ಡಿ. ಸಲಹೆ | ಇಎಸ್ ಐಸಿ ಆಸ್ಪತ್ರೆಯಲ್ಲಿ‘ಆಪರೇಷನ್ ರೈಸ್ ’ ‘ಬೇಡ ಬ್ರೋ’ ಅಭಿಯಾನ

ವಿದ್ಯಾರ್ಥಿಗಳು ಡ್ರಗ್ಸ್ ವಿರೋಧಕ್ಕೆ ರಾಯಭಾರಿಗಳಾಗಿ

ವಿಕ ಸುದ್ದಿಲೋಕ ಕಲಬುರಗಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸ ಜತೆ ಡ್ರಗ್ಸ್ ವಿರೋಧಿ ಅಭಿಯಾನದ ರಾಯಭಾರಿಗಳಾಗಿ ಆರೋಗ್ಯಕರ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ .ಡಿ. ಸಲಹೆ ನೀಡಿದರು.

ನಗರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ, ಇಎಸ್ ಐಸಿ ವೈದ್ಯಕೀಯ ಕಾಲೇಜು ಸಹಯೋಗದಲ್ಲಿಗುರುವಾರ ಇಎಸ್ ಐಸಿ ಆಸ್ಪತ್ರೆಯ ಸಭಾಂಗಣದಲ್ಲಿಆಯೋಜಿಸಿದ್ದ ‘ಆಪರೇಷನ್ ರೈಸ್ ’ ಮತ್ತು ‘ಬೇಡ ಬ್ರೋ’ ಮಾದಕ ವಸ್ತು ವಿರೋಧಿ ಜಾಗೃತಿ ಅಭಿಯಾನದ ಕಾರ್ಯಕ್ರಮದಲ್ಲಿಮಾತನಾಡಿದರು. ವಿದ್ಯಾವಂತರು ಹೇಳಿದ ಮಾತು ಸಮಾಜ ಇಂದಿಗೂ ಕೇಳುತ್ತದೆ. ಅದರಂತೆ ವಿದ್ಯಾರ್ಥಿಗಳು ‘ಡ್ರಗ್ಸ್ ಬೇಡ ಬ್ರೋ’ ಎಂಬ ಸಂದೇಶವನ್ನು ಕುಟುಂಬ, ಸ್ನೇಹಿತರ ವಲಯ ಹಾಗೂ ಸಮಾಜದ ಎಲ್ಲಹಂತಗಳಿಗೆ ತಲುಪಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಡ್ರಗ್ಸ್ ನಿಯಂತ್ರಣ ಕೇವಲ ಸರಕಾರ ಹಾಗೂ ಪೊಲೀಸ್ ಇಲಾಖೆಯ ಕೆಲಸ ಮಾತ್ರವಲ್ಲ. ಇದು ಜವಾಬ್ದಾರಿ ಹೊಂದಿರುವ ಪ್ರತಿ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿಇದುವರೆಗೆ 700ಕ್ಕೂ ಹೆಚ್ಚು ಮಾದಕ ವಸ್ತು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಮಾರಾಟಗಾರರ ವಿರುದ್ಧ ಮಾತ್ರವಲ್ಲದೆ ಸೇವನೆ ಮಾಡುವವರ ವಿರುದ್ಧವೂ ಕ್ರಮ ಜರುಗಿಸಲಾಗಿದೆ. ಇಲಾಖೆ ಸಾಮಾಜಿಕ ಜಾಲತಾಣಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ 48 ಸಾವಿರಕ್ಕೂ ಹೆಚ್ಚು ಯುವಕರಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದೆ. ಸನ್ಮಿತ್ರ ಯೋಜನೆಯಡಿ ಮಾದಕ ವ್ಯಸನಕ್ಕೆ ಒಳಗಾಗಿದ್ದ 585 ಮಂದಿ ಗುರುತಿಸಿ ಕೌನ್ಸೆಲಿಂಗ್ ಹಾಗೂ ಪುನರ್ವಸತಿ ಕಾರ್ಯಕ್ರಮಗಳಿಗೆ ಒಳಪಡಿಸಲಾಗಿದ್ದು, ಆ ಸಂಖ್ಯೆ 185ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದರು.

ಈಶಾನ್ಯ ವಲಯ ಪೊಲೀಸ್ ಮಹಾನಿರ್ದೇಶಕ ಶಾಂತನು ಸಿನ್ಹಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿಗಳಾದ ಶಾಲೂ ಹಾಗೂ ಪ್ರವೀಣ ನಾಯಕ್ , ಎಎಸ್ ಪಿ ಮಹೇಶ್ ಮೇಘಣ್ಣನವರ, ಡಿಎಚ್ ಒ ಡಾ.ಶರಣಬಸಪ್ಪ ಕ್ಯಾತನಾಳ್ , ಇಎಸ್ ಐಸಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಧಾನಾಜಿ ಜಾಧವ್ , ವೈದ್ಯಕೀಯ ತಜ್ಞರಾದ ಡಾ.ಅನೀಶ್ ಆಯಿಷಾ, ಡಾ.ಪ್ರಶಾಂತ್ , ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್ ....

ಟೀನೇಜರ್ ಗಳು ಆಕರ್ಷಿತರಾಗಬೇಡಿ

ಮನೋರೋಗ ತಜ್ಞ ಡಾ.ಮಹಮ್ಮದ್ ಇರ್ಫಾನ್ ಮಹಾಗಾವಿ ಮಾತನಾಡಿ, ರಾಷ್ಟ್ರೀಯ ಸಮೀಕ್ಷೆ ಪ್ರಕಾರ ದೇಶದಲ್ಲಿಸುಮಾರು 3.1 ಕೋಟಿ ಜನರು ಗಾಂಜಾ, 2.3 ಕೋಟಿ ಜನರು ಓಪಿಯಾಯ್ಡ್ (ಅಫೀಮು, ಹೆರಾಯಿನ್ , ಬ್ರೌನ್ ಶುಗರ್ ಮತ್ತು ನೋವು ನಿವಾರಕ ಮಾತ್ರೆಗಳು) ಹಾಗೂ 77 ಲಕ್ಷ ಜನರು ಇನ್ಹೇಲಂಟ್ಸ್ ( ಉಸಿರಾಟದ ಮೂಲಕ ಸೇವಿಸುವ ರಾಸಾಯನಿಕಗಳು) ಬಳಸುತ್ತಿದ್ದಾರೆ. ಸಿಗರೇಟ್ , ಮದ್ಯಪಾನ, ಕೆಲವು ಸೈಕೋಆಕ್ಟಿವ್ ಔಷಧ ಹಾಗೂ ಕಫ್ ಸಿರಪ್ ಗಳು ಕಾನೂನುಬದ್ಧವಾಗಿ ಲಭ್ಯವಿದ್ದರೂ ಅವುಗಳ ದುರ್ಬಳಕೆ ವ್ಯಸನಕ್ಕೆ ಕಾರಣವಾಗುತ್ತಿದೆ. ಗಾಂಜಾ, ಕೋಕೇನ್ ನಂತಹ ಅಕ್ರಮ ಮಾದಕ ವಸ್ತುಗಳತ್ತ ಯುವಕರು ಹಾಗೂ ಟೀನೇಜರ್ ಗಳು ಆಕರ್ಷಿತರಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಯುವಜನರಲ್ಲಿಹೆಚ್ಚುತ್ತಿರುವ ವ್ಯಸನ ಪ್ರವೃತ್ತಿ ತಡೆಯಲು ಜಾಗೃತಿ, ಕುಟುಂಬದ ಬೆಂಬಲ ಹಾಗೂ ಸಾಮಾಜಿಕ ಹೊಣೆಗಾರಿಕೆ ಅತ್ಯಗತ್ಯ ಎಂದು ಹೇಳಿದರು.

***

ಕೋಟ್ ...

ನಗರ ಮತ್ತು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿಕಳೆದ ಮೂರು ವರ್ಷಗಳಲ್ಲಿಮಾದಕ ವಸ್ತುಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಲಾಗಿದೆ. ಈ ಅವಧಿಯಲ್ಲಿ700ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 1,200 ಕೆ.ಜಿ.ಗೂ ಅಧಿಕ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನೂರಾರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅನೇಕರಿಗೆ ನ್ಯಾಯಾಲಯದಿಂದ ಶಿಕ್ಷೆಯೂ ವಿಧಿಸಲಾಗಿದೆ.

- ಡಾ. ಶರಣಪ್ಪ ಎಸ್ .ಡಿ., ಪೊಲೀಸ್ ಆಯುಕ್ತ, ಕಲಬುರಗಿ