ಬಳ್ಳಾರಿ: ಕಳೆದ ನಾಲ್ಕು ವರ್ಷಗಳ ಹಿಂದೆ ಪುತ್ರಿಯೊಂದಿಗೆ ಕಾಣೆಯಾಗಿದ್ದ ತಾಯಿಯನ್ನು ಪತ್ತೆ ಹಚ್ಚುವಲ್ಲಿಮಹಿಳಾ ಕಳ್ಳಸಾಗಣೆ ವಿರೋಧಿ ಘಟಕ ಯಶಸ್ವಿಯಾಗಿದೆ.ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿಪುತ್ರಿಯೊಂದಿಗೆ ಪತ್ನಿ ಕಾಣೆಯಾಗಿರುವ ಕುರಿತು 2022ರ ಫೆ.6ರಂದು ಪತಿ ಬಿ.ರಾಜು ದೂರು ದಾಖಲಿಸಿದ್ದರು. 2026ರ ಜೂನ್ .11ರಂದು ಪ್ರಕರಣವನ್ನು ಮಹಿಳಾ ಕಳ್ಳಸಾಗಣೆ ವಿರೋಧಿ ಘಟಕ(ಎ.ಎಚ್ .ಟಿ.ಯು)ಕ್ಕೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಘಟಕದ ಅಧಿಕಾರಿಗಳು ಜು.23ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿಪತ್ತೆ ಹಚ್ಚಿ ದೂರುದಾರರಿಗೆ ಒಪ್ಪಿಸಿದ್ದಾರೆ. ತಂಡದಲ್ಲಿಪಿಐ ರಮೇಶ್ ಕುಲಕರ್ಣಿ, ಸಿಬ್ಬಂದಿ ದಿನಕರ್ , ಎ.ವಿ.ಮಾರುತಿ, ರಾಮಲಿಂಗಪ್ಪ, ನೂರ್ ಜಹಾನ್ ಇದ್ದರು.