ಶಿವನಾಂಕಾರೇಶ್ವರ ಸ್ವಾಮಿಗೆ ಆ.2 ಮತ್ತು 3ರಂದು ವಿಶೇಷ ಮಹಾರುದ್ರಾಭಿಷೇಕ

Contributed bydoddahuchaiah.vk@gmail.com|Vijaya Karnataka
17th annual mahrudrabhisheka for shiva nnkreshwara swami grand event on august 2 and 3
ಶಿವನಾಂಕಾರೇಶ್ವರ ಸ್ವಾಮಿಗೆ ಆ.2 ಮತ್ತು 3ರಂದು ವಿಶೇಷ ಮಹಾರುದ್ರಾಭಿಷೇಕ

ವಿಕ ಸುದ್ದಿಲೋಕ ಕನಕಪುರ: ಶಿವನಾಂಕಾರೇಶ್ವರ ಸ್ವಾಮಿಗೆ 17ನೇ ವರ್ಷದ ಆಷಾಢ ಮಾಸದ ವಿಶೇಷ ಮಹಾರುದ್ರಾಭಿಷೇಕ ಕಾರ್ಯಕ್ರಮ ಆಗಸ್ಟ್ 2 ಮತ್ತು 3 ರಂದು ಎರಡು ದಿವಸ ನಡೆಯಲಿದೆ.
ಕನಕಪುರ ತಾಲೂಕು ಉಯ್ಯಂಬಹಳ್ಳಿ ಹೋಬಳಿ ಮಡಿವಾಳದಲ್ಲಿರುವ ಶಿವನಾಂಕಾರೇಶ್ವರ ದೇವಸ್ಥಾನದ ಟ್ರಸ್ಟ್ ವತಿಯಿಂದ 17ನೇ ವರ್ಷದ ಆಷಾಢ ಮಾಸದ ವಿಶೇಷ ಮಹಾರುದ್ರಾಭಿಷೇಕ ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 2ರಂದು ಭಾನುವಾರ ಸಾಯಂಕಾಲ ನಾಲ್ಕು ಗಂಟೆಯಿಂದ ಭಜನೆ, ಜಾನಪದ ಕಾರ್ಯಕ್ರಮ, ಗಾನಸಂಗಮ,

ಭರತನಾಟ್ಯ, ಉಮ್ಮತ್ತೂರು ಬಸವರಾಜು ಮತ್ತು ಕಿರುತೆರೆ ನಟರ ತಂಡದಿಂದ ಹಾಸ್ಯ ಸಂಜೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.

ಭಾನುವಾರ ಸಂಜೆ 6 ಗಂಟೆಗೆ ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿದೇಗುಲ ಮಠದ ಚನ್ನಬಸವ ಶ್ರೀಗಳು, ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಮಹಾಸ್ವಾಮೀಜಿ ಅವರು,ಆದಿಚುಂಚನಗಿರಿ ರಾಮನಗರ ಶಾಖ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಮಲ್ಲನಮೂಲೆ ಮಠಾಧ್ಯಕ್ಷರಾದ ಇಮ್ಮಡಿ ಸಿದ್ಧಲಿಂಗ ಸ್ವಾಮೀಜಿ, ಗುಂಡ್ಲುಪೇಟೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ಟರು ಸೇರಿದಂತೆ ಅನೇಕರ ಸಾನ್ನಿಧ್ಯದಲ್ಲಿಭಾನುವಾರ ಸಂಜೆ 6 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ.

ಹಿರಿಮಡಿವಾಳ ಓಂಕಾರೇಶ್ವರ ಮಠಾಧ್ಯಕ್ಷರಾದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹಾಗೂ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿಸೋಮವಾರ ಮುಂಜಾನೆ 5 ಗಂಟೆಗೆ ಶಿವನಾಂಕಾರೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ ನಡೆಯಲಿದೆ. ಕಬ್ಬಹಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿದ್ದರಾಜಪ್ಪ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಅರ್ಚಕರಾದ ಶಿವನಾಂಕಾರಪ್ಪ, ಸ್ವಾಮಿ, ದೇವರಾಜು, ಸೋಮಶೇಖರ್ , ಶಿವು ಅವರ ನೇತೃತ್ವದಲ್ಲಿಬರಗೂರು ಬಸವರಾಜು ಮತ್ತು ತಂಡ, ಹಾಸನೂರು ಶಿವರಾಜು ಮತ್ತು ತಂಡದವರಿಂದ ದೇವರ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಸೋಮವಾರ ರಾತ್ರಿ 10.30ಕ್ಕೆ ಬದನವಾಳು ಶಿವಕುಮಾರ ಶಾಸ್ತ್ರಿ ಅವರು ಭೂಕೈಲಾಸ ಶಿವನ ಹರಿಕಥೆ ನಡೆಸಿಕೊಡಲಿದ್ದಾರೆ. ಭಕ್ತರಿಗೆ ಭಾನುವಾರ ಮತ್ತು ಸೋಮವಾರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.