*ಯಶಸ್ಸಿಗೆ ಗುರಿ, ಗುರು ಅಗತ್ಯ: ಶ್ರೀಮೋಹನದಾಸ ಸ್ವಾಮೀಜಿ

Contributed byganeshaprasadapandelu@gmail.com|Vijaya Karnataka
success and guru teachings of shreemohanadas swamiji
ಮಾಣಿಲ ಶ್ರೀಧಾಮ ಶ್ರೀದುರ್ಗಾ ಮಹಾಲಕ್ಷೀ ಕ್ಷೇತ್ರದಲ್ಲಿಧಾರ್ಮಿಕ ಸಭೆ

ವಿಕ ಸುದ್ದಿಲೋಕ ವಿಟ್ಲ
ಮಾನವೀಯತೆ ಮೈಗೊಡಿಸಿಕೊಳ್ಳುವುದು ಅವಶ್ಯಕ. ಮನುಷ್ಯತ್ವ ಶ್ರೇಷ್ಠವಾದುದು. ಗುರಿ ಮತ್ತು ಗುರುವನ್ನು ಮುಂದಿಟ್ಟುಕೊಂಡು ಸಮಾಜ ಮುಂದುವರಿಯಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಮಾಣಿಲ ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿನಡೆಯುತ್ತಿರುವ 48 ದಿನಗಳ ಸಾಮೂಹಿಕ ಲಕ್ಷೀ ಪೂಜೆ ಹಾಗೂ ವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿಆಶೀರ್ವಚನ ನೀಡಿದರು.

ಶಿಷ್ಟಾಚಾರ ಬದ್ಧತೆ ಇದ್ದಾಗ ಯಶಸ್ಸು ಅರಸಿ ಬರುತ್ತದೆ. ನಿಷ್ಠೆ ಶಿಸ್ತು ಬದುಕಿನ ನೆಮ್ಮದಿಗೆ ಸಹಕಾರಿ ಆಗುತ್ತದೆ. ದೇಹ ಶುದ್ಧಿಮಾಡಿಕೊಳ್ಳುತ್ತೇವೆ. ಆದರೆ ಮನಃ ಶುದ್ಧಿ ಮಾಡಿಕೊಳ್ಳಲು ವಿಫಲರಾಗಿದ್ದೇವೆ ಎಂದು ಸ್ವಾಮೀಜಿ ಹೇಳಿದರು.

ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೊ. ವೇದವ್ಯಾಸ ರಾಮಕುಂಜ, ಹಿಂದೂ ಸಂಪ್ರದಾಯಗಳು ಮತ್ತು ಹಬ್ಬ ಹರಿದಿನಗಳು ವಿಷಯದಲ್ಲಿ ಉಪನ್ಯಾಸ ನೀಡಿ, ಸಂಬಂಧಗಳ ಕೊಂಡಿ ಉಳಿಸಿ ಮುಂದುವರಿಯಬೇಕಾದರೆ ಆಚರಣೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ಪ್ರತಿ ಹಬ್ಬಗಳು, ಸಂಪ್ರದಾಯಗಳ ಹಿಂದೆ ಸಂಸ್ಕೃತಿಯ ಬೇರು ಇದೆ. ಅದನ್ನು ಗಟ್ಟಿಗೊಳಿಸಬೇಕು ಎಂದರು.

ತಂತ್ರಿ ಉರ್ಮಿಯ ಬ್ರಹ್ಮಶ್ರೀ ವೇದಮೂರ್ತಿ ರಾಮ ಪ್ರಸಾದ ನಲ್ಲೂರಾಯ, ಮಾಜಿ ಮಂಡಲ ಪ್ರಧಾನ ಮುರುವ ನಡುಮನೆ ಮಹಾಬಲ ಭಟ್ , ಕಾಸರಗೋಡು ಜಿಲ್ಲಾಪಂಚಾಯಿತಿ ಸದಸ್ಯ ಜೆ. ಎಸ್ . ಸೋಮಶೇಖರ್ ಶೇಣಿ, ವಿಟ್ಲಕುಲಾಲ ಸಂಘದ ಅಧ್ಯಕ್ಷ ಬಾಬು ಬಿ.ಕೆ., ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಚಂದ್ರಾವತಿ ಶೆಟ್ಟಿ ಎನ್ .ಬಾಯಾರು ಉಪಸ್ಥಿತರಿದ್ದರು.

ಮಾಣಿಲ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ವ್ರತಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ, ಸಂಚಾಲಕ ಚೆನ್ನಪ್ಪ ಕುಲಾಲ್ ಎರುಗಲ್ಲು, ಚಂದ್ರಶೇಖರ ಕೆದುಮೂಲೆ, ನಾಗೇಶ್ ಕೊಡಂದೂರು, ಸೂರಜ್ ರೈ ಕೆಳಗಿನಮನೆ, ವಿಠಲ ಶೆಟ್ಟಿ ಸುಣ್ಣಂಬಳ ಮತ್ತಿತರರು ಉಪಸ್ಥಿತರಿದ್ದರು.

ವ್ರತಾಚರಣೆ ಸಮಿತಿ ಗೌರವಾಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಇನ್ನೊಬ್ಬ ಗೌರವಾಧ್ಯಕ್ಷ ಕಲ್ಯಾಟೆ ವೆಂಕಟರಮಣ ಭಟ್ ವಂದಿಸಿದರು. ಸತೀಶ್ ಕುಮಾರ್ ಕಾಪು ಕಾರ್ಯಕ್ರಮ ನಿರೂಪಿಸಿದರು.

ಭಜನಾ ಸಂಕೀರ್ತನೆ, ಗುರುಪೂಜೆ: ಸಭಾಕಾರ್ಯಕ್ರಮದ ಪೂರ್ವದಲ್ಲಿಗಣಪತಿ ಹೋಮ, ಭಜನಾ ಸಂಕೀರ್ತನೆ, ಗುರುಪೂಜೆ, ಕ್ಷೀರಾಭಿಷೇಕ ನಾಗಾರಾಧನೆ ಗೋಪೂಜೆ ಇತ್ಯಾದಿ ನಡೆದವು. ಸಭಾ ಕಾರ್ಯಕ್ರಮದ ಬಳಿಕ ಸಾಮೂಹಿಕ ಕುಂಕುಮಾರ್ಚನೆ, ಲಕ್ಷ್ಮೀ ಪೂಜೆ ಜರುಗಿತು.

ಪೊಟೋ...2607ವಿಟಿಎಲ್ ಮಾಣಿಲ

ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.