ಫ್ರಂಟ್ ಲೀಡ್

Contributed byJaya shree|Vijaya Karnataka
pm modi pays tribute to kargil heroes through front lead
ಕಾರ್ಗಿಲ್ ವೀರರಿಗೆ ಮೋದಿ ನಮನ

- 136ನೇ ಮನ್ ಕೀ ಬಾತ್ , ಕ್ಯಾಚ್ ದಿ ರೈನ್ ಆಂದೋಲನಕ್ಕೆ ಪ್ರಧಾನಿ ಕರೆ
ಕಾರ್ಗಿಲ್ ವಿಜಯ್ ದಿವಸ್ ನಮ್ಮ ರಾಷ್ಟ್ರದ ಶೌರ್ಯ ಮತ್ತು ತ್ಯಾಗದ ಅಮರ ಕಥೆಯಾಗಿದೆ. ದೇಶದ ಗಡಿಯನ್ನು ರಕ್ಷಿಸಲು ನಮ್ಮ ವೀರ ಸೈನಿಕರು ತೋರಿದ ಅಪ್ರತಿಮ ಧೈರ್ಯವನ್ನು ಈ ದಿನ ನಮಗೆ ನೆನಪಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್ ’ನ 136ನೇ ಸಂಚಿಕೆಯಲ್ಲಿಕಾರ್ಗಿಲ್ ವಿಜಯ್ ದಿವಸ್ ಸಂದರ್ಭವನ್ನು ಉಲ್ಲೇಖಿಸಿದ ಅವರು, ಭಾರತೀಯ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು.

ಜಲಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದ ಪ್ರಧಾನಿ, ಮಳೆಗಾಲದ ಈ ಸಮಯದಲ್ಲಿ‘ಕ್ಯಾಚ್ ದಿ ರೇನ್ ’ ಅಭಿಯಾನದಲ್ಲಿಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಜುಲೈ 4ರಿಂದ ದೇಶಾದ್ಯಂತ ಆರಂಭವಾಗಿರುವ ವಿಶೇಷ ಅಭಿಯಾನದಲ್ಲಿಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ, ಹಳೆಯ ಜಲಮೂಲಗಳ ಜೀರ್ಣೋದ್ದಾರ ಮತ್ತು ಬೃಹತ್ ಸಸಿ ನೆಡುವ ಕಾರ್ಯಕ್ರಮಗಳಲ್ಲಿಹಳ್ಳಿ ನಗರ ಹಾಗೂ ಪಂಚಾಯಿತಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ರಕ್ಷಣಾ ಉತ್ಪಾದನೆ, ರಫ್ತು ಮತ್ತು ಸ್ನೇಹಪರ ರಾಷ್ಟ್ರಗಳೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಯಲ್ಲಿಭಾರತ ಹೊಸ ಎತ್ತರಕ್ಕೇರುತ್ತಿದೆ ಎಂದ ಪ್ರಧಾನಿ, ಇತ್ತೀಚೆಗಷ್ಟೇ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಯುದ್ಧನೌಕೆ ಐಎನ್ ಎಸ್ ಮಹೇಂದ್ರಗಿರಿಯನ್ನು ಉಲ್ಲೇಖಿಸಿದರು. ಜೊತೆಗೆ, ಭಾರತದ ಮೊದಲ ಖಾಸಗಿ ನಿರ್ಮಿತ ‘ವಿಕ್ರಮ್ -1’ ರಾಕೆಟ್ ನ ಯಶಸ್ವಿ ಉಡಾವಣೆಯನ್ನು ಉಲ್ಲೇಖಿಸಿ ‘‘ಒಂದು ಕಾಲದಲ್ಲಿಅಸಾಧ್ಯವೆಂದು ಭಾವಿಸಲಾಗಿದ್ದನ್ನು ನಮ್ಮ ಯುವ ನಾವೀನ್ಯಕಾರರು ಸಾಧಿಧಿಸಿ ತೋರಿಸಿದ್ದಾರೆ’’ ಎಂದು ಬಣ್ಣಿಸಿದರು. ‘ಏಕ್ ಪೆಡ್ ಮಾ ಕೆ ನಾಮ್ ’ ಅಭಿಯಾನದಡಿ ಅಹಮದಾಬಾದ್ ನಲ್ಲಿಒಂದೇ ಗಂಟೆಯಲ್ಲಿ3.5ಲಕ್ಷಕ್ಕೂ ಹೆಚ್ಚು ಹಾಗೂ ಉತ್ತರ ಪ್ರದೇಶದಲ್ಲಿಒಂದೇ ದಿನದಲ್ಲಿ35 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿತ್ತು ಎಂದು ಪ್ರಶಂಸಿಸಿದರು.

ಆರು ಪಟ್ಟು ಹೆಚ್ಚಿದ ಖಾದಿ ಮಾರಾಟ: ಕಳೆದ 12 ವರ್ಷಗಳಲ್ಲಿದೇಶದಲ್ಲಿಖಾದಿಯ ಜನಪ್ರಿಯತೆ ಗಣನೀಯವಾಗಿ ಬೆಳೆದಿದ್ದು, ಮಾರಾಟವು ಆರು ಪಟ್ಟು ಹೆಚ್ಚಾಗಿ 8,000 ಕೋಟಿ ರೂ.ಗೆ ತಲುಪಿದೆ ಎಂದು ಪ್ರಧಾನಿ ಹೇಳಿದರು. ಶೀಘ್ರದಲ್ಲೇ ಬರಲಿರುವ ‘ರಾಷ್ಟ್ರೀಯ ಕೈಮಗ್ಗ ದಿನ’ದ ಅಂಗವಾಗಿ ಪ್ರತಿಯೊಬ್ಬರೂ ಕೈಮಗ್ಗ ಹಾಗೂ ಖಾದಿ ಉತ್ಪನ್ನಗಳನ್ನು ಖರೀದಿಸುವಂತೆ ಮನವಿ ಮಾಡಿದರು. ಜೊತೆಗೆ, ಪೋಚಂಪಲ್ಲಿ, ಕಚ್ ಹಾಗೂ ತ್ರಿಪುರಾದ ಸಾಂಪ್ರದಾಯಿಕ ವಾದ್ಯಗಳನ್ನು ಪುನರುಜ್ಜಿವನಗೊಳಿಸುತ್ತಿರುವ ಸ್ಥಳೀಯ ಕಲಾವಿದರ ಶ್ರಮವನ್ನು ಪ್ರಶಂಸಿಸಿದರು.

ಬಾಕ್ಸ್ :

ಯುನೆಸ್ಕೊ ಪಟ್ಟಿಗೆ ಸಾರನಾಥ

ಉತ್ತರ ಪ್ರದೇಶದ ಸಾರನಾಥ ಬೌದ್ಧ ತಾಣವು ಯುನೆಸ್ಕೊದ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ, ‘‘ಸಾರನಾಥಕ್ಕೂ ಭಗವಾನ್ ಬುದ್ಧನಿಗೂ ನಿಕಟ ಸಂಬಂಧವಿದೆ. ಬುದ್ಧನ ಜ್ಞಾನ, ಕರುಣೆ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶಗಳು ಇಂದಿಗೂ ಜಗತ್ತಿಗೆ ಸ್ಪೂರ್ತಿ ನೀಡುತ್ತಿವೆ. ಈ ಗೌರವವು ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಆಧ್ಯಾತ್ಮಕ್ಕೆ ಸಿಕ್ಕ ಮನ್ನಣೆ. ಇದರಿಂದಾಗಿ ಪ್ರಪಂಚದಾದ್ಯಂತ ಇರುವ ಜನರು ಸಾರನಾಥಕ್ಕೆ ಬಂದು ಭಗವಾನ್ ಬುದ್ಧನ ವಿಚಾರಗಳನ್ನು ತಿಳಿದುಕೊಳ್ಳಲು ಮತ್ತು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಲು ಪ್ರೇರಣೆಯಾಗಲಿದೆ’’ ಎಂದು ಎಕ್ಸ್ ನಲ್ಲಿಪೋಸ್ಟ್ ಮಾಡಿದ್ದಾರೆ.