ಸಂಘಟನೆ ಯಶಸ್ವಿಗೆ ಸೇವಾ ಮನೋಭಾವ ಅಗತ್ಯ

Contributed byhai.dhl562110@gmail.com|Vijaya Karnataka
people centric service key to organizational success
ಸಂಘಟನೆ ಯಶಸ್ವಿಗೆ ಸೇವಾ ಮನೋಭಾವ ಅಗತ್ಯ

ವಿಕ ಸುದ್ದಿಲೋಕ ಕುಂದಾಣ
ದೊಡ್ಡಬಳ್ಳಾಪುರ ಜೇಸಿಐ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ, ಕರುನಾಡ ಕಾರ್ಮಿಕರ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಅಧ್ಯಕ್ಷರಾಗಿ ಐದು ವರ್ಷಗಳ ಪೂರೈಸಿದ ರವಿಕುಮಾರ್ .ಎಂ. ಅವರಿಗೆ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದಲ್ಲಿಅಭಿನಂದನೆ ಸಲ್ಲಿಸಲಾಯಿತು.

ಈ ವೇಳೆ ರವಿಕುಮಾರ್ .ಎಂ. ಮಾತನಾಡಿ, ಯಾವುದೇ ಸಂಘಟನೆ ಯಶಸ್ವಿಯಾಗಿ ಮುನ್ನಡೆಯಲು ಒಗ್ಗಟ್ಟು, ಸಂಘಟನಾ ಶಕ್ತಿ ಹಾಗೂ ಸೇವಾ ಮನೋಭಾವ ಮುಖ್ಯ. ಕಳೆದ ಐದು ವರ್ಷಗಳ ಅವಧಿಯಲ್ಲಿಕರುನಾಡ ಕಾರ್ಮಿಕರ ವೇದಿಕೆಯ ಜಿಲ್ಲಾಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿಸಂಘಟನೆಯ ಸದಸ್ಯರ ಸಹಕಾರ ಹಾಗೂ ಬೆಂಬಲದಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ಸಮಾಜದ ದುರ್ಬಲ ವರ್ಗದವರು, ಕಾರ್ಮಿಕರು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಮೂಲಕ ಸಂಘಟನೆಗಳು ಜನಪರವಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರ ಅಥವಾ ಹುದ್ದೆಗಿಂತ ಸೇವಾ ಮನೋಭಾವವೇ ಮುಖ್ಯ. ಮುಂದಿನ ದಿನಗಳಲ್ಲಿಯೂ ಸಂಘಟನೆ ಹಾಗೂ ಜೇಸಿಐ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಈ ವೇಳೆ ಕುಂದಾಣ ಹೋಬಳಿ ವ್ಯಾಪ್ತಿಯ ಅಭಿಮಾನಿ ಬಳಗದ ಸದಸ್ಯರು ಹಾಗೂ ಜೇಸಿಐ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ: 26 ಕುಂದಾಣ 4

ಕುಂದಾಣ ಗ್ರಾಮದಲ್ಲಿಕರುನಾಡ ಕಾರ್ಮಿಕರ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್ .ಎಂ ಅವರನ್ನು ಅಭಿಮಾನಿಗಳು ಅಭಿನಂದಿಸಿದರು