ಲಕ್ಷ್ಮೇಶ್ವರ ಸುದ್ದಿ

Contributed bybeerappapujar93@gmail.com|Vijaya Karnataka
emphasis on cultivating reading habits among children
ಮಕ್ಕಳಲ್ಲಿಪತ್ರಿಕೆ ಓದುವ ಹವ್ಯಾಸ ಬೆಳೆಸಿ

ವಿಕ ಸುದ್ದಿಲೋಕ ಲಕ್ಷ್ಮೇಶ್ವರ
ಸಮಾಜದಲ್ಲಿಮೌಲ್ಯನಿಷ್ಠ, ಶಾಂತಿ, ಸುವ್ಯವಸ್ಥೆ ಕಾಪಾಡುವ ಮತ್ತು ಪ್ರಸ್ತುತ ಸ್ಪರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗುವ ಪತ್ರಿಕೆಗಳ ಸಂಖ್ಯೆ ಹೆಚ್ಚಬೇಕು, ಪಾಲಕರು ಮಕ್ಕಳಲ್ಲಿಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು ಎಂದು ಪಿಎಸ್ ಐ ನಾಗರಾಜ ಗಡದ ಹೇಳಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೂವಿನಶಿಗ್ಲಿವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಉತ್ತಮ ಬರವಣಿಗೆ ಮೂಲಕ ಸಮಾಜಕ್ಕೆ ಅನೇಕ ಒಳ್ಳೆಯ ಕಾರ್ಯಕಗಳನ್ನು ಮಾಡಿರುವ ಅನೇಕ ಮಾಧ್ಯಮಗಳನ್ನು ನೋಡಬಹುದು. ಪತ್ರಕರ್ತರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ಸಾಮಾಜಿಕ ಕಳಕಳಿ ಮತ್ತು ಚಿಂತನೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ಕಾರ್ಯಕಾರಿ ಸಮಿತಿ ಸದಸ್ಯ ಆನಂದಯ್ಯ ವಿರಕ್ತಮಠ ಮಾತನಾಡಿ, ಪತ್ರಿಕಾರಂಗ ಸಮಾಜದ ಅಂಕುಡೊಂಕುಗಳನ್ನು ತಿದ್ದುವದರ ಜತೆ ಸಮಾಜಮುಖಿ ಕಾರ್ಯಗಳಲ್ಲಿಯೂ ಕೈಜೋಡಿಸುವ ಕಾರ್ಯವನ್ನು ಮಾಡುತ್ತಿದೆ. ಪತ್ರಕರ್ತರು ಸುದ್ದಿ ಮಾಡುವದರ ಜತೆ ಸಮಾಜದ ಶುದ್ಧಿಯನ್ನು ಮಾಡುವ ಕಾರ್ಯವನ್ನು ಮಾಡಬೇಕಾಗುತ್ತದೆ. ಸ್ಮಶಾನವೆಂದರೆ ಅದು ಶಿವನ ಮನೆ ಇದ್ದಂತೆ ಅಂತಹ ಮನೆಯನ್ನು ಸ್ವಚ್ಛಗೊಳಿಸುವ ವಿಶೇಷ ಕಾರ್ಯವನ್ನು ಮಾಡಿದ್ದು ರಾಜ್ಯದಲ್ಲಿಯೇ ಪ್ರಥಮ ಎನ್ನಬಹುದಾಗಿದೆ ಎಂದರು.

ತಾಲೂಕು ಅಧ್ಯಕ್ಷ ಅಶೋಕ ಸೊರಟೂರ ಅಧ್ಯಕ್ಷತೆ ವಹಿಸಿದ್ದರು. ಶರಣು ದೊಡ್ಡೂರ, ಸುರೇಶ ಕಡ್ಲಿಮಟ್ಟಿ, ಗುರುರಾಜ ಪಾಟೀಲಕುಲಕರ್ಣಿ, ಬಸವರಾಜ ಪಟ್ಟೇದ, ಮಲ್ಲಿಕಾರ್ಜುನ ಕಳಸಾಪೂರ, ಶಿವಲಿಂಗಯ್ಯ ಹೊತಗಿಮಠ, ನಾಗರಾಜ ಹಣಗಿ, ರಮೇಶ ನಾಡಗೇರ, ಕರಿಯಪ್ಪ ಶಿರಹಟ್ಟಿ, ಮಂಜುನಾಥ ರಾಥೋಡ, ಸುರೇಶ ಲಮಾಣಿ, ಹರೀಶ ಲಕ್ಷ್ಮೇಶ್ವರ, ಪರಮೇಶ ಲಮಾಣಿ, ದಿಗಂಬರ ಪೂಜಾರ, ಸೋಮಣ್ಣ ಯತ್ನಳ್ಳಿ ಇತರರಿದ್ದರು. ಇದೇ ಸಂದರ್ಭದಲ್ಲಿಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.

ಪೋಟೋ ಕ್ಯಾಪ್ಸನ್ :

ಲಕ್ಷ್ಮೇಶ್ವರ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು, ಪಿಎಸ್ ಐ ನಾಗರಾಜ ಗಡದ ಉದ್ಘಾಟಿಸಿದರು.