ರೋಟರಿ ಐಸಿರಿಯ ಕ್ರೀಡಾ ವಿಭಾಗದ ಸಂಯೋಜಕ ಅಶೋಕ್ ನಾಯಕ್ ಅವರ ದ್ವಿತೀಯ ಪುತ್ರ ಚಿ.ಪ್ರಾಂಶ್ ನಾಯಕ್ ಅವರ ಮೂರನೇ ಜನ್ಮದಿನದ ಅಂಗವಾಗಿ ಹಿರಿಯರೊಂದಿಗೆ ಉಪಾಹಾರ ಹಾಗೂ ಸುಮಾರು 20 ಸಾವಿರ ರೂ. ಮೌಲ್ಯದ ದಿನಬಳಕೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಭಾನುವಾರ ಕೊಳಲಗಿರಿಯ ಸ್ವರ್ಗಾಶ್ರಮದಲ್ಲಿನಡೆಯಿತು.ಕಾರ್ಯಕ್ರಮದ ಪ್ರಾಯೋಜಕ ಅಶೋಕ್ ನಾಯಕ್ ಮಾತನಾಡಿ, ಸಮಾಜದಲ್ಲಿವೃದ್ಧಾಶ್ರಮಗಳ ಅನಿವಾರ್ಯತೆ ಹೆಚ್ಚುತ್ತಿರುವುದು ಬೇಸರದ ಸಂಗತಿಯಾದರೂ, ಸ್ವರ್ಗಾಶ್ರಮದಂತಹ ಸಂಸ್ಥೆಗಳು ಹಾಗೂ ಡಾ.ಶಶಿಕಿರಣ್ ಅವರಂತಹ ಸಮಾಜಮುಖಿ ವ್ಯಕ್ತಿಗಳು ಅಸಹಾಯಕರಿಗೆ ಆಶಾಕಿರಣವಾಗಿರುವುದು ಶ್ಲಾಘನೀಯ. ತಮ್ಮ ಪುತ್ರನ ಮೂರು ಜನ್ಮದಿನಗಳನ್ನೂ ಇಂತಹ ಸೇವಾ ಸಂಸ್ಥೆಗಳ ಮೂಲಕ ಆಚರಿಸಿರುವುದು ಜೀವನದಲ್ಲಿವಿಶೇಷ ತೃಪ್ತಿ ತಂದಿದೆ ಎಂದರು.
ಸ್ವರ್ಗಾಶ್ರಮವನ್ನು ನಿರ್ವಹಿಸುತ್ತಿರುವ ಹೋಮ್ ಡಾಕ್ಟರ್ ಫೌಂಡೇಶನ್ ಮುಖ್ಯಸ್ಥ ಡಾ.ಶಶಿಕಿರಣ್ ಸಂಸ್ಥೆಯ ಸ್ಥಾಪನೆಗೆ ಕಾರಣವಾದ ಹಿನ್ನೆಲೆ, ಹಿರಿಯರ ಆರೈಕೆಗೆ ಅನುಸರಿಸುತ್ತಿರುವ ಸೇವಾ ವಿಧಾನಗಳ ಕುರಿತು ಮಾಹಿತಿ ನೀಡಿದರು. ರೋಟರಿ ಐಸಿರಿ ಅಧ್ಯಕ್ಷ ಸಂದೀಪ್ ಕುಮಾರ್ ದಿನಬಳಕೆ ಸಾಮಗ್ರಿ ಹಸ್ತಾಂತರಿಸಿ ಮಾತನಾಡಿದರು. ರೋಟರಿ ಐಸಿರಿ ಕಾರ್ಯದರ್ಶಿ ರಾಜೇಶ್ ಡಿ.ಶೆಣೈ ವಂದಿಸಿದರು. ಗುರುಪ್ರಸಾದ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಸೌಮ್ಯಾ ಕಾಮತ್ , ಲಕ್ಷ್ಮಣ ಕಾಮತ್ , ಲಾವಣ್ಯ, ಶ್ಲೋಕ್ ನಾಯಕ್ , ಪ್ರಾಂಶ್ ನಾಯಕ್ , ಮಂಜುನಾಥ ಉಪಾಧ್ಯ, ಸ್ಮಿತಾ ಜಿ.ಕಾಮತ್ , ಕೊರಗಪ್ಪ ಶೆಟ್ಟಿಗಾರ್ , ಅನಿಲ್ ಕುಮಾರ್ , ಕೃಷ್ಣಪ್ಪ, ವೆಂಕಟೇಶ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕೆ.ಪ್ರಕಾಶ್ ಶೆಣೈ ಹಾಗೂ ಉಪಾಹಾರ ವ್ಯವಸ್ಥೆ ಮಾಡಿದ ನಾಗರಾಜ್ ಅವರಿಗೆ ಅಶೋಕ್ ನಾಯಕ್ ಕೃತಜ್ಞತೆ ಸಲ್ಲಿಸಿದರು.