ನಾಗರ ಪಂಚಮಿಗೆ ಬನ ಟ್ರೇಲರ್

Contributed bybabitha.salian@timesgroup.com|Vijaya Karnataka
release date announcement of ban movie for nagar panchami
ನಾಗರ ಪಂಚಮಿಗೆ ಬನ ಟ್ರೇಲರ್

ಖ್ಯಾತ ನಿರೂಪಕ, ಟಿವಿ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ನಟಿಸಿರುವ ‘ಬನ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಇದು ತುಳು ಮತ್ತು ಕನ್ನಡ ಭಾಷೆಗಳಲ್ಲಿಅಕ್ಟೊಬರ್ 23ರಂದು ತೆರೆ ಕಾಣಲಿದೆ. ಪೋಸ್ಟರ್ ಮೂಲಕ ಗಮನ ಸೆಳೆದಿರುವ ಈ ಚಿತ್ರದಲ್ಲಿನಾಗನ ಕಥೆಯಿದೆ. ಇದು ಕೋಸ್ಟಲ್ ವುಡ್ ನ ಇತಿಹಾಸದಲ್ಲೇ ನಾಗ ಕಥೆ ಹೊಂದಿರುವ ಮೊದಲ ಚಿತ್ರವಾಗಿದೆ.
ಬನ ಚಿತ್ರದ ಮೂಲಕ ಜಯಪ್ರಕಾಶ್ ಶೆಟ್ಟಿ ಪ್ರಥಮ ಬಾರಿಗೆ ತುಳುವಿನಲ್ಲಿನಟಿಸಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದೆ ರೂಪಾ ವರ್ಕಾಡಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ನಿತಿನ್ ರೈ ಕುಕ್ಕುವಳ್ಳಿ ಈ ಚಿತ್ರ ನಿರ್ದೇಶಿಸಿದ್ದಾರೆ.