ಹಿಪ್ಪರಗಿ ಬ್ಯಾರೇಜ್ ಗೆ ಅಪಾರ ನೀರು

Contributed bykarjol.bnt@gmail.com|Vijaya Karnataka
significant water flow to hipparagi barrage
ಹಿಪ್ಪರಗಿ ಬ್ಯಾರೇಜ್ ಗೆ ಅಪಾರ ನೀರು

ವಿಕ ಸುದ್ದಿಲೋಕ ರಬಕವಿ-ಬನಹಟ್ಟಿ
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿಸುರಿಯುತ್ತಿರುವ ಮಳೆಗೆ ನದಿಯಲ್ಲಿನೀರಿನ ಪ್ರಮಾಣ ಅಧಿಕವಾಗಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಶುಕ್ರವಾರ 70 ಸಾವಿರ ಕ್ಯುಸೆಕ್ ಒಳಹರಿವು ಇತ್ತು. ಅಷ್ಟೇ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ಕೊಯ್ನಾದಲ್ಲಿ7.7 ಸೆಂ.ಮೀ., ನವುಜಾ-6.6 ಸೆಂ.ಮೀ., ಮಹಾಬಳೇಶ್ವರ-7.8 ಸೆಂ.ಮೀ., ವಾರಣಾ-6.4 ಸೆಂ.ಮೀ. ಹಾಗೂ ದೂಮ್ , ಕನೇರಿ, ತರಾಳಿ, ರಾಧಾನಗರಿ, ದೂದಗಂಗಾ ಪ್ರದೇಶದಲ್ಲಿಭಾರಿ ಮಳೆಯಾಗಿದೆ. ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ ಕೃಷ್ಣಾ ನದಿಗೆ 73,458 ಕ್ಯುಸೆಕ್ ನೀರು ಬಿಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬಿಎನ್ ಟಿ 24-2

ರಬಕವಿ-ಬನಹಟ್ಟಿ ಸಮೀಪ ಕೃಷ್ಣಾ ನದಿಯಲ್ಲಿಅಧಿಕಗೊಂಡಿರುವ ನೀರಿನ ಪ್ರಮಾಣ.