ಎಸ್ ಐಆರ್ ; 11.61 ಲಕ್ಷ ಅರ್ಜಿ ವಿತರಣೆ, 11.09 ಲಕ್ಷ ಸ್ವೀಕೃ

Contributed bytvlbdr@gmail.com|Vijaya Karnataka
1161 lakh applications distributed in bidar 1109 lakh information worlds first limited
ಎಸ್ ಐಆರ್ ; 11.61 ಲಕ್ಷ ಅರ್ಜಿ ವಿತರಣೆ, 11.09 ಲಕ್ಷ ಸ್ವೀಕೃತಿ

ಬೀದರ್ : ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿಜು.25ರ ವರೆಗೆ ಒಟ್ಟಾರೆ 14,61,959 ಮತದಾರರ ಗಣತಿ ನಮೂನೆ ಅರ್ಜಿಗಳನ್ನು ವಿತರಿಸಲಾಗಿದೆ. ಈ ಪೈಕಿ 11,09,267 ಮತದಾರರ ಗಣತಿ ನಮೂನೆ ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಬೀದರ್ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಸೀಲ್ದಾರ್ ತಿಳಿಸಿದ್ದಾರೆ. ಜಿಲ್ಲಾದ್ಯಂತ 88,946 ಸಂಗ್ರಹಿಸಲಾಗದ ಎಣಿಕೆ ನಮೂನೆ ಅರ್ಜಿಗಳಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಎಸ್ ಐಆರ್ ಪ್ರಕ್ರಿಯೆ ಹಿನ್ನೆಲೆಯಲ್ಲಿಬಿಎಲ್ ಒಗಳು ಮನೆ ಮನೆಗೆ ಭೇಟಿ ನೀಡಿ, ಮತದಾರರ ಗಣತಿ ನಮೂನೆಗಳ ಅರ್ಜಿ ವಿತರಿಸಿ, ಸ್ವೀಕರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.