ಕಲಬುರಗಿ: ದರ್ಗಾ ಹಜರತ್ ಖ್ವಾಜಾ ಬಂದೇನವಾಜ್ ಸಜ್ಜಾದಾ ನಶೀನ್ ಡಾ.ಹಫೀಜ್ ಸಯ್ಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಮತದಾನದ ವಿಶೇಷ ತೀವ್ರ ಪರಿಷ್ಕರಣೆ ನಮೂನೆ ಭರ್ತಿ ಮಾಡಿ ಸಲ್ಲಿಸಿದರು.
ಬಿಎಲ್ ಒ ಅಫ್ಜಲ್ ರಶೀದ್ , ನೋಡಲ್ ಅಧಿಕಾರಿ ಶರಣಕುಮಾರ ತೆಂಗ್ಲಿಹಾಗೂ ಬಿಎಲ್ ಒ ಮೇಲ್ವಿಚಾರಕಿ ಅಶ್ವಿನಿ ಕುಲಕರ್ಣಿ ನಮೂನೆ ಪರಿಶೀಲಿಸಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿದರು. ಡಾ.ಹಫೀಜ್ ಸಯ್ಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಮಾತನಾಡಿ, ಕೊನೆಯ ಕ್ಷಣದವರೆಗೆ ಕಾಯದೇ ಅಗತ್ಯ ದಾಖಲೆಗಳೊಂದಿಗೆ ನಮೂನೆ ಸಲ್ಲಿಸಬೇಕು ಎಂದು ತಿಳಿಸಿದರು. ಪಾಲಿಕೆ ಸದಸ್ಯ ಜನಾಬ್ ಖುಸ್ರೋ ಜಗೀರ್ ದಾರ್ ಉಪಸ್ಥಿತರಿದ್ದರು.