ಮನೆ, ದೇವಸ್ಥಾನ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು (ಹೆಡ್ )
ನಾಲ್ವರ ಬಂಧನ, 44 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶ (ಕಿಕ್ಕರ್ )ವಿಕ ಸುದ್ದಿಲೋಕ ಗದಗ
ನಗರದ ಪ್ರಸಿದ್ಧ ದೇವಸ್ಥಾನ ಹಾಗೂ ವಸತಿ ಪ್ರದೇಶದಲ್ಲಿನಡೆದಿದ್ದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿರುವ ಗದಗ ಜಿಲ್ಲಾಪೊಲೀಸರು, ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 44 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು, ನಗದು ಹಣ ಹಾಗೂ ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಗದಗ-ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಹಾತಲಗೇರಿ ನಾಕಾ ಹತ್ತಿರ ಇರುವ ಶ್ರೀ ಮಹಾಲಕ್ಷಿ ್ಮೕ ದೇವಸ್ಥಾನದಲ್ಲಿಜೂ.19 ರಂದು ಕಳ್ಳತನ ನಡೆದಿತ್ತು. ಈ ಕುರಿತು ನಾರಾಯಣ ವಿಠೋಬಾ ದಹಿಂದೆ ಎಂಬುವವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಬೆಟಗೇರಿ ಪೊಲೀಸರು ಜು.18 ರಂದು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಲ್ಲಾವಳ್ಳಿ ಗ್ರಾಮದ (ಹಾಲಿ ಕದಬಳ್ಳಿ) ನಿವಾಸಿ. ಪ್ರಸ್ತುತ ಮೊಬೈಲ್ ಅಂಗಡಿ ನಡೆಸುತ್ತಿರುವ ಪೃಥ್ವಿರಾಜ ಬಿ.ಎ. ಅಲಿಯಾಸ್ ಅಪ್ಪಾಜಿಗೌಡ (31) ಎಂದು ಗುರುತಿಸಲಾಗಿದೆ. ಆತನಿಂದ 100 ಗ್ರಾಂ ಬೆಳ್ಳಿಯ ಕಿರೀಟ, 20 ಗ್ರಾಂ ಬೆಳ್ಳಿಯ ಕೈ, 5 ಗ್ರಾಂ ಬಂಗಾರದ ತಾಳಿಯ ಎರಡು ಜತೆ ಪದಕ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾಪೊಲೀಸ್ ಅಧೀಕ್ಷಕರಾದ ರೋಹನ ಜಗದೀಶ (ಐಪಿಎಸ್ ) ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಪ್ರಭಾರ) ಮಹಾಂತೇಶ ಸಜ್ಜನ ಅವರ ಮಾರ್ಗದರ್ಶನದಲ್ಲಿ, ಬೆಟಗೇರಿ ವೃತ್ತದ ಸಿಪಿಐ ಧೀರಜ್ ಬಿ.ಸಿಂಧೆ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ. ತಂಡದಲ್ಲಿಪಿಎಸ್ ಐ (ಪ್ರಭಾರ) ಚನ್ನಯ್ಯ ದೇವೂರ, ಎಎಸ್ ಐಗಳಾದ ಪಿ.ಎಫ್ .ಹುಡೇದ, ಐ.ಎಸ್ .ಲಮಾಣಿ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.
ಅಂತರ್ ಜಿಲ್ಲಾಕಳ್ಳರ ಬಂಧನ: ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಉದಯ ನಗರದ 1ನೇ ಕ್ರಾಸ್ ನಿವಾಸಿ ಮಂಜುನಾಥ ಷಣ್ಮುಖಸಾ ಬಸವಾ ಅವರ ಮನೆಯಲ್ಲಿಮೇ 6ರಿಂದ ಮೇ 8ರ ನಡುವಿನ ಅವಧಿಯಲ್ಲಿಬೃಹತ್ ಕಳ್ಳತನ ನಡೆದಿತ್ತು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಗದಗ ಶಹರ ಪೊಲೀಸರು ಮೂವರು ಅಂತರ ಜಿಲ್ಲಾಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಹ್ಮದರಫೀಕ್ ಇಸ್ಮಾಯಿಲ್ (36) ತರಕಾರಿ ವ್ಯಾಪಾರಿ, ಬಿ.ಸಿ.ರೋಡ್ , ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. ಇಮ್ರಾನ್ ಕುತುಬುದ್ದಿನ್ ತಿಗಡಿ (40) ಮೊಡಕಾ ವ್ಯಾಪಾರಿ, ಹೊಸವಳಿ ಓಣಿ, ಬೈಲಹೊಂಗಲ, ಬೆಳಗಾವಿ ಹಾಗೂ ಮೌಲಾಅಲಿ ಅಲ್ಲಿಸಾಬ ದರ್ಗಾ (34) ಚಾಲಕ, ಗಾಜಿಪೂರ, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆಎಂದು ಗುರುತಿಸಲಾಗಿದೆ.
ಬಂಧಿತರಿಂದ 330 ಗ್ರಾಂ ಚಿನ್ನದ ಆಭರಣಗಳು, 750 ಗ್ರಾಂ ಬೆಳ್ಳಿ ಸಾಮಗ್ರಿ, ಕೃತ್ಯಕ್ಕೆ ಬಳಸಿದ ಕಾರ್ , ಕಳವು ಮಾಡಿದ ಹಣದಿಂದ ಖರೀದಿಸಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ ರೋಹನ ಜಗದೀಶ ಹಾಗೂ ಡಿಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿಶಹರ ಪಿಐ ಸಂಗಮೇಶ ವಿ.ಶಿವಯೋಗಿ, ಬೆಟಗೇರಿ ಪಿಐ ಧೀರಜ್ ಶಿಂಧೆ, ಮಹಿಳಾ ಠಾಣೆ ಪಿಐ ಎಲ್ .ಕೆ.ಜೂಲಕಟ್ಟಿ, ಪಿಎಸ್ ಐಗಳಾದ ಬಿ.ಟಿ.ರಿತ್ತಿ, ರೇಣುಕಾ ಮುಂಡೆವಾಡಗಿ, ತಾಂತ್ರಿಕ ವಿಭಾಗ ಹಾಗೂ ‘ಥರ್ಡ್ ಐ’ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿಪಾಲ್ಗೊಂಡಿದ್ದರು.
ಎರಡೂ ಸಂಕೀರ್ಣ ಪ್ರಕರಣಗಳನ್ನು ಅತ್ಯಂತ ಶೀಘ್ರವಾಗಿ ಭೇದಿಸಿ, ಕಳುವಾಗಿದ್ದ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯವನ್ನು ಗದಗ ಜಿಲ್ಲಾಪೊಲೀಸ್ ಅಧೀಕ್ಷಕರಾದ ರೋಹನ ಜಗದೀಶ (ಐಪಿಎಸ್ ) ಅವರು ಶ್ಲಾಘಿಘಿಸಿದ್ದು, ಸೂಕ್ತ ನಗದು ಬಹುಮಾನ ಪ್ರಕಟಿಸಿದ್ದಾರೆ.
ಫೋಟೊ: 25 ಎಸ್ ಬಿ 6:
ಗದಗ ಪೊಲೀಸ್ ಭವನದಲ್ಲಿಮನೆ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿವಶಪಡಿಸಿಕೊಂಡ ಸ್ವತ್ತುಗಳನ್ನು ಎಸ್ಪಿ ರೋಹನ್ ಜಗದೀಶ ಪರಿಶೀಲಿಸಿದರು.