ವಿಶ್ವ ಮೆದುಳಿನ ದಿನಾಚರಣೆ

Contributed bypuru.dpete1987@gmail.com|Vijaya Karnataka
brain health key highlights of the world brain day celebration
ವಿಕ ಸುದ್ದಿಲೋಕ ಚಾಮರಾಜನಗರ

ಜಿಲ್ಲಾಡಳಿ, ಜಿಲ್ಲಾಪಂಚಾಯಿತಿ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿ ವಿಶ್ವ ಮೆದುಳಿನ ದಿನ ಆಚರಿಸಲಾಯಿತು.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ ಸಭಾಂಗಣದಲ್ಲಿಆಯೋಜಿಸಿದ್ದ ಕಾರ ್ಯಕ್ರಮವನ್ನು ಸಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಎಸ್ .ಮಾರುತಿ ಉದ್ಘಾಟಿಸಿದರು.

ಕಾರ ್ಯಕ್ರಮ ಸಂಪನ್ಮೂಲ ವ್ಯಕ್ತಿ, ನರಶಸ್ತ್ರ ಚಿಕಿತ್ಸಕ ಡಾ. ರಾಜೇಶ್ ಮಾತನಾಡಿ, ‘‘ಮೆದುಳು ಮನುಷ್ಯನ ಜೀವನದಲ್ಲಿಬಹುಮುಖ್ಯವಾದ ಅಂಗ. ಮೆದುಳನ್ನು ರಕ್ಷಣೆ ಮಾಡಿಕೊಂಡರೆ ಪಾಶ್ರ್ವವಾಯು, ಅಪಸ್ಮಾರ, ಮರೆಗುಳಿಯಂತಹ ರೋಗಗಳನ್ನು ತಡೆಗಟ್ಟಬಹುದು,’’ ಎಂದರು.

‘‘ವ್ಯಾಯಾಮ, ಉತ್ತಮ ನಿದ್ರೆ, ದೈಹಿಕ ಚಟುವಟಿಕೆ, ಆರೋಗ್ಯಕರ ಹವ್ಯಾಸಗಳಾದ ಯೋಗ ಮತ್ತು ಧ್ಯಾನ, ಸಂಘ ಜೀವಿಯಾಗಿರುವುದು ಇವುಗಳನ್ನು ಮಾಡುವುದರಿಂದ ನಮ್ಮ ಮೆದುಳನ್ನು ಸಮತೋಲನದಲ್ಲಿಟ್ಟು ಕೊಳ್ಳಬಹುದು. ವಾಹನ ಚಾಲನೆ ಮಾಡುವಾಗ ಹೆಲ್ಮೆಟೆ ಬಳಸುವುದು, ತಲೆಗೆ ಪೆಟ್ಟು ಬಿದ್ದಾಗ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ರಕ್ತದೊತ್ತಡ ಹಾಗೂ ಮಧುಮೇಹ ರೋಗಗಳನ್ನು ಸಮತೋಲನದಲ್ಲಿಇಟ್ಟಿಕೊಳ್ಳಬೇಕು,’’ ಎಂದು ತಿಳಿಸಿದರು.

ಜಿಲ್ಲಾಶಸ್ತ್ರಚಿಕಿತ್ಸಕರಾದ ಡಾ.ಚಿನ್ನಭೋವಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕಬಿ) ಯೋಜನೆಯ ಡಾ.ಪುಷ್ಪಾಂಕ್ .ಯು ಕುದರ್ , ಜಿಲ್ಲಾಸಂಯೋಜಕರಾದ ಎನ್ .ಸತೀಶ್ , ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.

ಸಿಎಚ್ ಎನ್ 23ಎಸ್ ಎಂಆರ್ 5

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿ ವಿಶ್ವ ಮೆದುಳಿನ ದಿನಾಚರಣೆ ಕಾರ ್ಯಕ್ರಮವನ್ನು ಸಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಎಸ್ .ಮಾರುತಿ ಉದ್ಘಾಟಿಸಿದರು.