ಬೀದರ್ ನ ಮಂಗಲಪೇಟ್ ನ ರೆವರೆಂಡ್ ಎಂ.ಡಿ.ರಾಸ್ ಮೆಮೋರಿಯಲ್ ಚರ್ಚ್ನಲ್ಲಿನಡೆದ ರೆವರೆಂಡ್ ಜೆ.ಟಿ.ಸಿಮಂಡ್ಸ್ ಕನ್ನಡ ಸಾಹಿತ್ಯ ಸಂಘದ ನಾಲ್ಕನೆಯ ವರ್ಷಾಚರಣೆ ಕಾರ್ಯಕ್ರಮವನ್ನು ಸೇಂಟ್ ಪೌಲ್ ಮೆಥೋಡಿಸ್ಟ್ ಕೇಂದ್ರ ಸಭೆಯ(ಉತ್ತರ) ಜಿಲ್ಲಾಮೇಲ್ವಿಚಾರಕ ರೆವರೆಂಡ್ ಡಿಸೋಜ ಥಾಮಸ್ ಉದ್ಘಾಟಿಸಿದರು.ಅಭಿವೃದ್ಧಿಗೆ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ
ವಿಕ ಸುದ್ದಿಲೋಕ ಬೀದರ್
ಕ್ರೈಸ್ತ ಮಿಷನರಿಗಳು ಪ್ರಾತಃ ಸ್ಮರಣೀಯರು. ಸಮಾಜದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದಾರೆ ಎಂದು ಸೇಂಟ್ ಪೌಲ್ ಮೆಥೋಡಿಸ್ಟ್ ಕೇಂದ್ರ ಸಭೆಯ(ಉತ್ತರ) ಜಿಲ್ಲಾಮೇಲ್ವಿಚಾರಕ ರೆವರೆಂಡ್ ಡಿಸೋಜ ಥಾಮಸ್ ಅಭಿಪ್ರಾಯಪಟ್ಟರು.
ನಗರದ ಮಂಗಲಪೇಟ್ ನ ರೆವರೆಂಡ್ ಎಂ.ಡಿ.ರಾಸ್ ಮೆಮೋರಿಯಲ್ ಚರ್ಚ್ನಲ್ಲಿಗುರುವಾರ ನಡೆದ ರೆವರೆಂಡ್ ಜೆ.ಟಿ.ಸಿಮಂಡ್ಸ್ ಕನ್ನಡ ಸಾಹಿತ್ಯ ಸಂಘದ 4ನೇ ವರ್ಷಾಚರಣೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ಇಂದಿನ ವ್ಯವಸ್ಥಿತ ಬದುಕಿನ ಹಿಂದೆ ಮಿಷನರಿಗಳ ಶ್ರಮವಿದೆ. ಇದನ್ನು ನಾವು ಎಂದಿಗೂ ಮರೆಯಬಾರದು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಘೋಡಂಪಳ್ಳಿಯ ಸರಕಾರಿ ಪ್ರಥಮ ದರ್ಜೆ ವಸತಿಯುತ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ದೇವಿದಾಸ ತುಮಕುಂಟೆ ಅವರು, ಮಿಷನರಿಗಳು ಇಲ್ಲಿಗೆ ಬಂದು ಅರಿವು ಬಿತ್ತುವ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿದ್ದಾರೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಕೆ.ಸುಂದರರಾಜ್ ಮಾತನಾಡಿ, ಕ್ರೈಸ್ತ ಮಿಷನರಿಗಳು ದೀನ-ದಲಿತರ, ಬಡವರ, ನಿರ್ಗತಿಕರ ಹಾಗೂ ಅಸಹಾಯಕ ಸ್ಥಿತಿಯಲ್ಲಿರುವವರನ್ನು ಮೇಲಕ್ಕೆ ಎತ್ತುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು. ಸೆಂಟ್ ಪೌಲ್ ಮೆಥೋಡಿಸ್ಟ್ ಕೇಂದ್ರ ಸಭೆಯ(ಉತ್ತರ) ಸಭಾಪಾಲಕ ರೆವರೆಂಡ್ ಎಸ್ .ಎಲ್ .ತುಕಾರಾಮ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಟಿ.ಜೆ.ಹಾದಿಮನಿ ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ತುಡಮೆ ಧನರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಟಿ.ಎಂ.ಮಚ್ಚೆ ಸ್ವಾಗತಿಸಿದರು. ಉಪಾಧ್ಯಕ್ಷ ಶಿರೋಮಣಿ ಡಾಕುಳಗಿ ನಿರೂಪಿಸಿದರು. ಸಂಘದ ನಿರ್ದೇಶಕ ಕಂಟೆಪ್ಪ ವಂದಿಸಿದರು. ರೆವರೆಂಡ್ ಧೂಳಪ್ಪ, ರೆವರೆಂಡ್ ಸೈಮನ್ ಮಾರ್ಕ್, ಶಂಭುಲಿಂಗ ವಾಲ್ದೊಡ್ಡಿ, ಬಸವರಾಜ ಮಯೂರ, ಗುರುನಾಥ ಅಕ್ಕಣ್ಣ, ಡಾ.ಬಸವರಾಜ ಬಲ್ಲೂರ, ವಿದ್ಯಾವತಿ ಬಲ್ಲೂರ, ಶಾಂತಮ್ಮ ಬಲ್ಲೂರ, ಡಾ.ರಾಮಚಂದ್ರ ಗಣಾಪುರ, ಡಾ.ಈಶ್ವರಯ್ಯ ಕೊಡಂಬಲ್ , ಜಗನ್ನಾಥ ಕಮಲಾಪುರೆ, ದೇವೇಂದ್ರ ಕರಂಜೆ, ಸುನೀಲ್ ಮಾಳಗೆ, ಸುಭಾಷ ರತ್ನ, ಭೀಮಣ್ಣ ಅಷ್ಟೂರು, ಮಾರುತಿ ಮಿತ್ರ, ವಿರಾಜಾನಂದ ಮತ್ತಿತರರಿದ್ದರು.
***ಕೋಟ್ ...
ನಾರ್ಮ ಮತ್ತು ಫೆಂಡ್ರಿಚ್ ಎಂಬ ಇಬ್ಬರು ಮಹಿಳಾ ಕ್ರೈಸ್ತ ಮಿಷನರಿಗಳು 1908ರಲ್ಲಿಮೊಟ್ಟ ಮೊದಲ ಬಾರಿಗೆ ಬೀದರ್ ನಲ್ಲಿಮೊದಲ ಕನ್ನಡ ಮಾಧ್ಯಮ ಶಾಲೆ ಆರಂಭಿಸಿದರು. ಈ ಶಾಲೆ ಇಂದಿಗೂ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷ ಹಾಗೂ ಅಭಿಮಾನದ ಸಂಗತಿಯಾಗಿದೆ. ಕ್ರೈಸ್ತ ಮಿಷನರಿಗಳು 1903ರಲ್ಲಿಯೇ ಬೀದರ್ ನಲ್ಲಿಸಾರ್ವಜನಿಕ ಆರೋಗ್ಯ ಸೇವೆ ಆರಂಭಿಸಿದ್ದರು. ಈ ಆಸ್ಪತ್ರೆಯಲ್ಲಿಎಲ್ಲವೈದ್ಯಕೀಯ ಸೌಲಭ್ಯಗಳು ಲಭ್ಯವಿದ್ದವು. ಜಿಲ್ಲೆಯ ಶಿಕ್ಷಣ , ಆರೋಗ್ಯ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರವಾಗಿದೆ.