ಬಿಡಿಸಿಸಿ ಬ್ಯಾಂಕ್ ಗೆ 13.08 ಕೋಟಿ ರೂ., ನಿವ್ವಳ ಲಾಭ

Contributed byrathodjayakumar92@gmail.com|Vijaya Karnataka
dcc bank earns a profit of 1308 crore new online services for agricultural loans
ಬಿಡಿಸಿಸಿ ಬ್ಯಾಂಕ್ ಗೆ 13.08 ಕೋಟಿ ರೂ.ಲಾಭ

ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)
‘‘ಬಳ್ಳಾರಿ ಜಿಲ್ಲಾಸಹಕಾರಿ ಕೇಂದ್ರ ಬ್ಯಾಂಕ್ 49 ವರ್ಷಗಳಿಂದ ಲಾಭ ದಲ್ಲಿಮುನ್ನಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ13.08 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ,’’ ಎಂದು ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ‘‘ವಿಜಯನಗರ ಜಿಲ್ಲೆಯ 6 ತಾಲೂಕು ಹಾಗೂ ಬಳ್ಳಾರಿ ಜಿಲ್ಲೆಯ 5 ತಾಲೂಕುಗಳಲ್ಲಿ33 ಶಾಖೆಗಳ ಮೂಲಕ ಬ್ಯಾಂಕ್ ಕಾರ್ಯಾಚರಣೆ ನಡೆಸುತ್ತಿದೆ,’’ ಎಂದರು.

ಆನ್ ಲೈನ್ ಡ್ರಾಯಲ್ ಸೇವೆ:

‘‘3 ವರ್ಷಗಳಿಂದ ನಮ್ಮ ಬ್ಯಾಂಕ್ ಫ್ಯಾಕ್ಸ್ ಗಳ ಮೂಲಕ ರೈತರಿಗೆ ಆನ್ ಲೈನ್ ಡ್ರಾಯಲ್ ಮೂಲಕ ಕೆಸಿಸಿ ಬೆಳೆ ಸಾಲ ವಿತರಿಸಲಾಗುತ್ತಿದೆ. ಈಗ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕೇಂದ್ರ ಪುರಸ್ಕೃತ ಸಹಕಾರ ಸಂಘಗಳ ಯೋಜನೆಯಲ್ಲಿಬ್ಯಾಂಕಿಗೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಯೋಜನೆಯಲ್ಲಿಅಳವಡಿಸಲಾಗಿದ್ದು, ಎನ್ ಎಲ್ ಪಿಎಸ್ ಸಾಫ್ಟ್ ವೇರ್ ಗೂ ಮತ್ತು ಬ್ಯಾಂಕಿನ ಸಿಬಿಎಸ್ ಗೆ ಇಂಟರ್ ಫೇಸ್ ಮಾಡಲು ಬ್ಯಾಂಕು ಸ್ವಂತವಾಗಿ ಬ್ಯಾಂಕಿನ ಸಾಫ್ಟ್ ವೇರ್ ವೆಂಡರ್ ಅವರಿಂದ ಕೆಸಿಸಿ ಆನ್ ಲೈನ್ ಡ್ರಾಯಲ್ ಪೋರ್ಟಲ್ ಅಭಿವೃದ್ಧಿಪಡಿಸಿದೆ. ಇದರಿಂದಾಗಿ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ರೈತರಿಗೆ ಮಂಜೂರಾದ ಬೆಳೆ ಸಾಲದ ಮಾಹಿತಿಯನ್ನು ಬ್ಯಾಂಕಿನ ಹಂತದಲ್ಲಿಹಾಗೂ ಸಂಘಗಳ ಹಂತದಲ್ಲಿಗಣಕಯಂತ್ರವೇ ಸ್ವಯಂಚಾಲಿತವಾಗಿ ವ್ಯವಹಾರವನ್ನು ಇಂದೀಕರಿಸುತ್ತದೆ. ಬ್ಯಾಂಕು ಕಾಗದ ರಹಿತ ಅರ್ಜಿಯನ್ನು ರೂಢಿಸಿ ರೈತರಿಗೆ ಸರಳವಾಗಿ ಸಕಾಲದಲ್ಲಿತರಿತ್ವವಾಗಿ ಆನ್ ಲೈನ್ ಕೆ.ಸಿ.ಸಿ. ಬೆಳೆ ಸಾಲವನ್ನು ವಿತರಿಸುವ ಯೋಜನೆಯನ್ನು ರೂಪಿಸಿದೆ. ಇದರೊಂದಿಗೆ ರೈತರ ಪಹಣಿ ಪರಿಶೀಲನೆ ಹಾಗೂ ಆಧಾರ್ ಪರಿಶೀಲನೆಯನ್ನು ಮಾಡಲು ಆಧಾರ ಇಲಾಖೆಯ ಪಹಣಿ ವಿಭಾಗ ಹಾಗೂ ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕ್ ಮೂಲಕ ಸಂಬಂಧಿಸಿದ ಕಂದಾಯ ಇಲಾಖೆಯ ಇಲಾಖೆಯ ವ್ಯವಹರಿಸಿ ವಿಸ್ತರಿಸಿದ್ದು, ಶೀಘ್ರದಲ್ಲಿಯೇ ಬ್ಯಾಂಕಿನ ಕೆಸಿಸಿ ಅನ್ ಲೈನ್ ಡ್ರಾಯಲ್ ಪೋರ್ಟಲ್ ಗೆ ಇಂಟರ್ ಫೇಸ್ ತಿಳಿಸಿದರು. ಅವಳಿ ಜಿಲ್ಲೆಗಳಲ್ಲಿನ ಬ್ಯಾಂಕಿನ ಶಾಖೆಗಳ ಮುಖಾಂತರ ವೇತನ ಪಡೆಯುತ್ತಿರುವ ಸರಕಾರಿ ಶಾಲಾ ಶಿಕ್ಷಕರು, ಅರೆ ಸರಕಾರಿ ನೌಕರರ ಪೈಕಿ ಅಂದಾಜು 6000 ನೌಕರರಿಗೆ ಶಾಖೆಗಳ ಆರ್ಥಿಕ ಸಾಲದ ಸೌಲಭ್ಯದೊಂದಿಗೆ ಅಂತೆಯೇ ಖಾತೆಯ ಮೇಲಿನ ಸಾಲದ ಮಿತಿದಾರರಿಗೆ 1 ಕೋಟಿ ರೂ.ಗೆ ಒಳಪಟ್ಟು ಉಚಿತವಾಗಿ ಅಪಘಾತ ವಿಮಾ ಪಾಲಿಸಿಯನ್ನು ಒದಗಿಸುವುದಲ್ಲದೆ ಮರಣ ಹೊಂದಿದಲ್ಲಿಅಂತೆಯೇ ಖಾತೆದಾರರಿಗೆ ವಿಮೆ ಕಲ್ಪಿಸಲಾಗಿದೆ. ಉಭಯ ಜಿಲ್ಲೆಗಳಲ್ಲಿಒಟ್ಟು 14 ಹೊಸ ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 3 ಶಾಖೆಗಳು ಕಾರ್ಯಾರಂಭ ಮಾಡಿವೆ. ಬಾಕಿ ಇರುವ ಶಾಖೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೇಂದ್ರ ಪುರಸ್ಕೃತ ಸಹಕಾರ ಸಂಘಗಳ ಯೋಜನೆಯಲ್ಲಿಕೆಸಿಸಿ ಪೋರ್ಟಲ್ ನೊಂದಿಗೆ ಕೊಂಡಿಕೊಡಿಸಿ ಆನ್ ಲೈನ್ ಮೂಲಕ ಕೃಷಿ ಸಾಲಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಬ್ಯಾಂಕಿನ ಉಪಾಧ್ಯಕ್ಷ ಐ. ದಾರುಕೇಶ್ , ಸಿಇಒ ಜಯಪ್ರಕಾಶ್ ಹಾಗೂ ನಿರ್ದೇಶಕರು, ಅಧಿಕಾರಿಗಳಯ ಇದ್ದರು.

---

ವಿಜೆಎನ್ 25ಜಯಪ್ಪ7: ಕೆ.ತಿಪ್ಪೇಸ್ವಾಮಿ