ಸರಕಾರಿ ರಜೆಯಲ್ಲೂಬೆಳೆ ವಿಮೆ ನೋಂದಣಿ

Contributed byMruthyunjayar77@gmail.com|Vijaya Karnataka
farmers can register for crop insurance even during holidays
(ರೈತರ ಅನುಕೂಲಕ್ಕಾಗಿ ಕೃಷಿ, ತೋಟಗಾರಿಕೆ ಇಲಾಖೆ ಕಚೇರಿಗಳು ತೆರೆದಿರಲಿವೆ)

ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜು.26ರಂದು ಸರಕಾರಿ ರಜೆ ಇದ್ದರೂ ತಾಲೂಕಿನ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಬೆಳೆ ವಿಮೆ ನೋಂದಣಿಗಾಗಿ ತಮ್ಮ ಕಚೇರಿಗಳನ್ನು ಎಂದಿನಂತೆ ತೆರೆಯಲು ನಿರ್ಧರಿಸಿವೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನ ಎಲ್ಲಹೋಬಳಿ ರೈತ ಸಂಪರ್ಕ ಕೇಂದ್ರಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳು ಈ ಎರಡೂ ದಿನಗಳಲ್ಲಿಕಾರ್ಯನಿರ್ವಹಿಸಲಿದ್ದು, ರೈತರು ತಮ್ಮ ಬೆಳೆ ವಿಮೆ ನೋಂದಣಿಯನ್ನು ಮಾಡಿಸಿಕೊಳ್ಳಬಹುದು. ಚಿಕ್ಕಬಳ್ಳಾಪುರ ತಾಲೂಕಿನ ತೋಟಗಾರಿಕೆ ಇಲಾಖೆ ಕೂಡ ಜು.26ರಂದು ರಜೆ ಇದ್ದರೂ ತನ್ನ ಕಚೇರಿಯನ್ನು ತೆರೆಯಲಿದ್ದು, ತಾಲೂಕಿನ ಮಾವು, ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಾರರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬೆಳೆ ವಿಮೆ ನೋಂದಣಿಗೆ ರೈತರು ಪಹಣಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಬ್ಯಾಂಕ್ ಖಾತೆ ಪುಸ್ತಕ (ಪಾಸ್ ಬುಕ್ ) ಪ್ರತಿ ದಾಖಲಾತಿಗಳನ್ನು ಕಡ್ಡಾಯವಾಗಿ ತರಬೇಕೆಂದು ಕೃಷಿ ಇಲಾಖೆ ತಿಳಿಸಿದೆ.

ರೈತರು ಕೊನೆಯ ಕ್ಷಣದವರೆಗೆ ಕಾಯದೆ, ಸರಕಾರಿ ರಜೆ ದಿನಗಳಲ್ಲೇ ಲಭ್ಯವಿರುವ ಈ ವಿಶೇಷ ಸೇವೆಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಮನವಿ ಮಾಡಿವೆ.