ವಿಕ ಸುದ್ದಿಲೋಕ ಹಾಸನಮನುಷ್ಯ ಯಾವಾಗ ಈ ಭೂಮಿಯಲ್ಲಿಹುಟ್ಟಿದನೋ ಆಗಿನಿಂದಲೇ ಜನಪದ ಕಲೆಯೂ ಹುಟ್ಟಿಕೊಂಡಿದೆ ಎಂದು ಜನಪದ ಸಾಹಿತಿ ಡಾ. ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.
ತಾಲೂಕಿನ ಹೂವಿನಹಳ್ಳಿಯ ಚಿತ್ರಕೂಟ ಗುರುಕುಲ ಕಲಾಮಂದಿರದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಮತ್ತು ಹಾಸನ ಹಾಗೂ ರಾಜಾರಾಮ್ ತೊಗಲುಗೊಂಬೆ ಮೇಳ ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ತೊಗಲುಗೊಂಬೆ ವಿಚಾರ ಸಂಕಿರಣ ಮತ್ತು ಪ್ರದರ್ಶನ ಕಾರ ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘‘ ಜನಪದ ಕಲೆ ಗೆ ಸಾವಿಲ್ಲ. ಮನುಷ್ಯನ ಅಂತ್ಯದೊಂದಿಗೆ ಜನಪದ ಕಲೆ ನಾಶವಾಗಬಹುದು ಅಷ್ಟೇ, ಜನಪದ ಕಲಾವಿದರು ಈ ದೇಶದ ರಾಯಬಾರಿಗಳು. ಕಲೆ ಯಾವುದೇ ಒಂದು ಜಾತಿ, ಪ್ರದೇಶಕ್ಕೆ ಸೀಮಿತವಾದುದಲ್ಲ. ತೊಗಲುಗೊಂಬೆ ಕಲೆ ಮೂಲತ: ಆಂಧ್ರ, ಮರಾಠಿಯಲ್ಲಿಹುಟ್ಟಿದ್ದು, ಹಿಂದೆ ರಾಮಾಯಣ ಭಾಗವತ ಕಥೆಗೆ ಸೀಮಿತವಾಗಿದ್ದ ಈ ಕಲೆ ಈಗ ಸರಕಾರದ ಯೋಜನೆಗಳ ಪ್ರಚಾರ ಕಾರ ್ಯಕ್ರಮಕ್ಕೂ ಬಳಕೆಯಾಗುತ್ತಿದೆ,’’ಎಂದರು.
‘‘ಹಿರಿಯ ಕಲಾವಿದರು, ಕಿರಿಯರಿಗೆ ತರಬೇತಿ ನೀಡಿ ಈ ಮೂಲ ಕಲೆಯನ್ನು ಉಳಿಸಬೇಕಿದೆ,’’ಎಂದು ಹೇಳಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ,‘‘ಗುಂಡುರಾಜ್ ತಮ್ಮ ಕಲಾಪ್ರತಿಭೆಯಿಂದ ಇಂದು ಅಂತಾರಾಷ್ಟ್ರೀಯ ಕಲಾವಿದರಾಗಿ ಹೆಸರು ಗಳಿಸಿದ್ದಾರೆ. ಅಮೆರಿಕಾ ದೇಶದಲ್ಲಿಆಗಿಂದಾಗ್ಗೆ ಇವರು ಕಲಾಪ್ರದರ್ಶನ ನೀಡುತ್ತಿದ್ದಾರೆ. ಗೊರೂರಿನ ಮನು ಅಮೆರಿಕಾದಲ್ಲಿಕನ್ನಡ ಸಂಘ ಮೂಲಕ ಕಲಾಪ್ರದರ್ಶನಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ತಮ್ಮ ಸಾಹಿತ್ಯ ಸಾಧನೆಯಿಂದ ಗೊರೂರು ಗ್ರಾಮವನ್ನು ರಾಜ್ಯ,ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧಿಗೆ ಕಾರಣರಾದರೋ ಹಾಗೆಯೇ ಹೂವಿನಹಳ್ಳಿ ಕಾವಲು ಕೂಡ ಗುಂಡುರಾಜ್ ಅವರಿಂದ ಖ್ಯಾತಿ ಗಳಿಸುತ್ತಿದೆ,’’ಎಂದು ಶ್ಲಾಘಿಘಿಸಿದರು.
ಕೆಎಸ್ ಆರ್ ಟಿಸಿ ನಿವೃತ್ತ ನೌಕರರು ಯು.ಜೆ.ಮಲ್ಲಿಕಾರ್ಜುನ, ತಬಲವಾದಕ ಕೃಷ್ಣಮೂರ್ತಿ, ಉದಯಕುಮಾರ್ , ಮೇಕಪ್ ಹನುಮಂತು, ಜನಪದ ಗಾಯಕ ಕಟ್ಟೆಬೆಳಗುಳಿ ಕುಮಾರ್ , ಪೌರಾಣಿಕ ನಾಟಕ ಕಲಾವಿದರಾದ ಯರೇಹಳ್ಳಿ ಮಂಜೇಗೌಡರು, ಶ್ರೀಕಂಠಪ್ಪ, ಚಂದ್ರಶೇಖರ್ ಹೊಳೆನರಸೀಪುರ, ಪ್ರಭಾಕರ್ , ಸೋಮಶೇಖರ್ , ದರ್ಶನ್ ವೆಂಕಟೇಶ್ , ಕವಯತ್ರಿ ಪಲ್ಲವಿ ಬೇಲೂರು ಮೊದಲಾದವರು ಹಾಜರಿದ್ದರು.
ಫೋಟೊ
ಹಾಸನ ತಾಲೂಕು ಹೂವಿನಹಳ್ಳಿಯಲ್ಲಿಜಿಲ್ಲಾಮಟ್ಟದ ತೊಗಲುಗೊಂಬೆ ವಿಚಾರ ಸಂಕಿರಣ ಮತ್ತು ಪ್ರದರ್ಶನ ಕಾರ ್ಯಕ್ರಮದಲ್ಲಿಜನಪದ ಸಾಹಿತಿ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿದರು.