ಪ್ರಖರ ವೈಚಾರಿಕ ಬರಹಗಾರ ಲಿಂಗಣ್ಣ ಸತ್ಯಂಪೇಟೆ

Contributed byvenkatesh.narasappa@timesgroup.com|Vijaya Karnataka
honorable writer linganna satyampete 14th remembrance and award presentation
ಚಿತ್ರ: ಬಸವ ಮಾರ್ಗ

ಬೆಂಗಳೂರಿನ ಸಿಸಿಬಿ ಪೊಲೀಸ್ ಅಧಿಕಾರಿ ಡಾ.ಬಿ.ಎಸ್ .ಸುಧಾಕರ್ ಅವರಿಗೆ ರಾಜ್ಯಮಟ್ಟದ ಬಸವ ಮಾರ್ಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
**

(ಕಿಕ್ಕರ್ ) ಅಪ್ಪನ ಒಡನಾಟ ಕೃತಿ ಬಿಡುಗಡೆ, ಬಸವ ಮಾರ್ಗ ಪ್ರಶಸ್ತಿ ಪ್ರದಾನ

ಪ್ರಖರ ವೈಚಾರಿಕ ಬರಹಗಾರ ಲಿಂಗಣ್ಣ ಸತ್ಯಂಪೇಟೆ

ವಿಕ ಸುದ್ದಿಲೋಕ ಕಲಬುರಗಿ

ಶಾಲಾ ಶಿಕ್ಷಕರಾಗಿ, ಪತ್ರಕರ್ತರಾಗಿ ದಿಟ್ಟತನದಿಂದ ರಾಜಕಾರಣಿಗಳ ಅಕ್ರಮಗಳ, ರೈತರ ಬವಣೆಗಳ ಬಗ್ಗೆ ಬರೆಯುತ್ತಿದ್ದ ದಿ.ಲಿಂಗಣ್ಣ ಸತ್ಯಂಪೇಟೆ ಅವರಿಗೆ ಸಾಕಷ್ಟು ಕಿರುಕುಳ ನೀಡಿದರೂ ವಿಚಲಿತರಾಗಿರಲಿಲ್ಲಎಂದು ಮಾಜಿ ಸಚಿವ ಎಸ್ .ಕೆ.ಕಾಂತಾ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಶರಣಮಾರ್ಗ ಚಾರಿಟೆಬಲ್ ಟ್ರಸ್ಟ್ ನಿಂದ ನಗರದಲ್ಲಿಶನಿವಾರ ಆಯೋಜಿಸಿದ್ದ ಲಿಂಗಣ್ಣ ಸತ್ಯಂಪೇಟೆ 14ನೇ ಸಂಸ್ಮರಣೆ, ಬಸವಮಾರ್ಗ ಪ್ರಶಸ್ತಿ ಪ್ರದಾನ ಹಾಗೂ ಅಪ್ಪನ ಒಡನಾಟ ಗ್ರಂಥ ಬಿಡುಗಡೆ ಸಮಾರಂಭದಲ್ಲಿಮಾತನಾಡಿದರು. ಶಾಲಾ ಶಿಕ್ಷಕರಾಗಿದ್ದ ಅವರು ನಿರ್ಭೀತಿಯಿಂದ ಲಂಕೇಶ್ ಪತ್ರಿಕೆಯಲ್ಲಿಬರೆಯುತ್ತಿದ್ದರು. ಕೆಲ ವರದಿಗಳಿಗೆ ಸಂಬಂಧಿಸಿದಂತೆ ಪಿ.ಲಂಕೇಶ್ ಅವರನ್ನೂ ಎದುರು ಹಾಕಿಕೊಂಡಿದ್ದರು. ಅವರ ವೈಚಾರಿಕತೆ ಹಾಗೂ ಪ್ರಖರ ಬರವಣಿಗೆಯಿಂದಾಗಿ ಹಲವು ಬಾರಿ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದರು. ಶ್ರಮಜೀವಿಗಳು, ರೈತರು ಕಷ್ಟದಲ್ಲೇ ಇರುತ್ತಾರೆ. ಗಂಟೆ ಹೊಡೆಯುವವರು, ಮಂತ್ರ ಹೇಳುವವರು ಸುಖವಾಗಿಯೇ ಇರುತ್ತಾರೆ. ರೈತರಿಗೆ ಸೌಲಭ್ಯ ನೀಡದ ಸರಕಾರ ಸಿಮೆಂಟ್ ಕಾರ್ಖಾನೆಗಳ ಉದ್ಯಮಿಗಳಿಗೆ ಶೇ.70ರಷ್ಟು ಸಬ್ಸಿಡಿಯಲ್ಲಿಸಾಲ ಮಂಜೂರು ಮಾಡುತ್ತದೆ. ಇದು ಯಾವ ನ್ಯಾಯ ಎಂದು ಕಾಂತಾ ಬೇಸರ ವ್ಯಕ್ತಪಡಿಸಿದರು.

ಶಾಸಕ ಬಿ.ಆರ್ .ಪಾಟೀಲ ಮಾತನಾಡಿ, ಬಸವ ತತ್ವ ಅನುಯಾಯಿಯಾಗಿದ್ದ ಲಿಂಗಣ್ಣ ಸತ್ಯಂಪೇಟೆ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದರು. ಈ ಭಾಗದ ರಾಜಕಾರಣಿಗಳು, ಮಠಾಧೀಶರ ಅಕ್ರಮಗಳನ್ನು ಭಯವಿಲ್ಲದೆ ಬಯಲುಗೊಳಿಸುತ್ತಿದ್ದರು ಎಂದರು. ಲಿಂಗಣ್ಣ ಪುತ್ರ ವಿಶ್ವಾರಾಧ್ಯ ಸತ್ಯಂಪೇಟೆ, ಸಾನ್ನಿಧ್ಯ ವಹಿಸಿದ್ದ ಮುದಗಲ್ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಮಾತನಾಡಿದರು.

ಬೆಂಗಳೂರಿನ ಸಿಸಿಬಿ ಪೊಲೀಸ್ ಅಧಿಕಾರಿ ಡಾ.ಬಿ.ಎಸ್ .ಸುಧಾಕರ್ ಅವರಿಗೆ ರಾಜ್ಯಮಟ್ಟದ ಬಸವ ಮಾರ್ಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಿಂಗಣ್ಣ ಪುತ್ರ, ಪತ್ರಕರ್ತ ಡಾ.ಶಿವರಂಜನ್ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಸತ್ಯಂಪೇಟೆ ಅವರು ಬರೆದ ಅಪ್ಪನ ಒಡನಾಟ ಕೃತಿ ಹಾಗೂ ಶರಣ ಮಾರ್ಗ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಶಾಸಕ ಬಿ.ಆರ್ .ಪಾಟೀಲ ಬಿಡುಗಡೆಗೊಳಿಸಿದರು. ಅಶೋಕ ದೊಡ್ಡಮನಿ ಕೃತಿ ಪರಿಚಯ ಮಾಡಿದರು.

ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ…, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ ಸೇರಿ ಇತರರು ವೇದಿಕೆಯಲ್ಲಿದ್ದರು. ಸುರೇಶ ಬಡಿಗೇರ ನಿರೂಪಿಸಿದರು. ವಿಠ್ಠಲ್ ಚಿಕಣಿ ವಂದಿಸಿದರು.