ಸಮುದಾಯ ಆಧಾರಿತ ಸಂಶೋಧನೆ ಕೈಗೊಳ್ಳಿ

Contributed byvenkatesh.narasappa@timesgroup.com|Vijaya Karnataka
importance of community based research responsibilities at state and national levels
ಚಿತ್ರ: ಉಪನ್ಯಾಸ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಮಾಜಕಾರ್ಯ ವಿಭಾಗದಿಂದ ಸಂಶೋಧನೆ, ಬರವಣಿಗೆ ಮತ್ತು ಪ್ರಕಟಣೆ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
**

ಸಂಶೋಧನೆ, ಬರವಣಿಗೆ ಮತ್ತು ಪ್ರಕಟಣೆಯ ವಿಶೇಷ ಉಪನ್ಯಾಸ

ಸಮುದಾಯ ಆಧಾರಿತ ಸಂಶೋಧನೆ ಕೈಗೊಳ್ಳಿ

ವಿಕ ಸುದ್ದಿಲೋಕ ಕಲಬುರಗಿ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಮಾಜಕಾರ್ಯ ವಿಭಾಗದಿಂದ ಸಂಶೋಧನೆ, ಬರವಣಿಗೆ ಮತ್ತು ಪ್ರಕಟಣೆ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ವಿಶ್ವವಿದ್ಯಾಲಯದ ಆವರಣದಲ್ಲಿನಡೆಯಿತು.

ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಸಮಾಜ ಕಾರ್ಯ ಕ್ಷೇತ್ರದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಗ್ರಾಮ ಸಮೀಕ್ಷೆಗಳು, ಕ್ಷೇತ್ರ ಭೇಟಿ, ದತ್ತಾಂಶ ಸಂಗ್ರಹಣೆ , ಸಮುದಾಯಗಳೊಂದಿಗೆ ಸಂವಹನ ಹಾಗೂ ಸಮುದಾಯ ಆಧಾರಿತ ಸಂಶೋಧನೆಗಳ ಮೂಲಕ ತಳಮಟ್ಟದ ವಾಸ್ತವಾಂಶಗಳನ್ನು ಅರ್ಥಮಾಡಿಕೊಳ್ಳುವಲ್ಲಿಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.

ಸಾಮಾಜಿಕಕಾರ್ಯ ಕ್ಷೇತ್ರದಲ್ಲಿನಡೆಯುವ ಸಂಶೋಧನೆಗಳು ಮತ್ತು ಸಂಶೋಧನಾ ವರದಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ನೀತಿಗಳನ್ನು ರೂಪಿಸಲು ಅಮೂಲ್ಯ ಮಾಹಿತಿ ಒದಗಿಸುತ್ತವೆ. ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವುದು, ಸರಕಾರಿ ಯೋಜನೆಗಳ ಪ್ರಯೋಜನಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಹಾಗೂ ಸಮಾಜದಲ್ಲಿಸಕಾರಾತ್ಮಕ ಬದಲಾವಣೆ ತರುವಲ್ಲಿಸಮಾಜ ಕಾರ್ಯ ಸಂಶೋಧಕರು ಮತ್ತು ವೃತ್ತಿಪರರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಸಂಶೋಧನೆಗಳು ಸರಕಾರದ ಉತ್ತಮ ಆಡಳಿತಕ್ಕೆ ಬಲ ತುಂಬುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳು ಸಮಾಜದ ಅಗತ್ಯಗಳಿಗೆ ಸ್ಪಂದಿಸುವ, ನೈತಿಕ ಮೌಲ್ಯಗಳನ್ನು ಒಳಗೊಂಡ ಹಾಗೂ ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುವ ಗುಣಮಟ್ಟದ ಸಂಶೋಧನೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿಆಸ್ಟೆ್ರೕಲಿಯಾದ ಚಾರ್ಲ್ಸ್ಸ್ಟರ್ಟ್ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ, ಸಿಯುಕೆ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಮನೋಹರ್ ಪವಾರ್ ವಿಶೇಷ ಉಪನ್ಯಾಸ ನೀಡಿದರು. ಸಂಶೋಧನಾ ವಿಧಾನ, ಶೈಕ್ಷಣಿಕ ಬರವಣಿಗೆ , ಪ್ರಕಟಣಾ ನೀತಿಶಾಸ್ತ್ರ ಹಾಗೂ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕೆಗಳಲ್ಲಿಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಸಂಶೋಧನಾ ಸಮಗ್ರತೆ ಕಾಪಾಡಿಕೊಂಡು ಸಮಾಜಕ್ಕೆ ಉಪಯುಕ್ತವಾಗುವ ಪರಿಣಾಮಕಾರಿ ಶೈಕ್ಷಣಿಕ ಕೃತಿಗಳನ್ನು ರಚಿಸುವಂತೆ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಡೀನ್ ಪ್ರೊ.ಪವಿತ್ರಾ ಆರ್ .ಆಲೂರ್ , ಪ್ರೊ.ಚನ್ನವೀರ್ ಆರ್ .ಎಂ., ಡಾ.ಚಿತ್ಕಲಾ ವೆಂಕರೆಡ್ಡಿ, ಡಾ.ಎಂ.ಶಿವಮೂರ್ತಿ, ಡಾ.ಹರೀಶ್ , ಡಾ.ರವೀಂದರ್ ಕುಮಾರ್ , ಡಾ.ಶ್ರೀನಿವಾಸ್ ಡಿ. ಸೇರಿ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಲಕ್ಷ್ಮಣ ಜಿ ಸ್ವಾಗತಿಸಿದರು. ಡಾ.ಎಂ.ಶಿವಮೂರ್ತಿ ವಂದಿಸಿದರು.