ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನದಲ್ಲಿಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮುಂಚೂಣಿಯಲ್ಲಿನಿಂತು ಕಾರ್ಯನಿರ್ವಹಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು.
ಜಿಲ್ಲಾಬಿಜೆಪಿ ಕಚೇರಿಯಲ್ಲಿಶನಿವಾರ ಪಕ್ಷದ ಜಿಲ್ಲಾಯುವ ಮೋರ್ಚಾ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.
18 ವರ್ಷ ತುಂಬಿದ ಪ್ರತಿಯೊಬ್ಬ ಯುವ ಮತದಾರರನ್ನು ಗುರುತಿಸಿ, ಬೂತ್ ಮಟ್ಟದಲ್ಲಿಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಮತ್ತು ಸಾರ್ವಜನಿಕರಲ್ಲಿಈ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು. ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಯುವಜನತೆ. ಜಿಲ್ಲೆಯ ಪ್ರತಿಯೊಂದು ಮಂಡಲ, ಶಕ್ತಿಕೇಂದ್ರ ಹಾಗೂ ಬೂತ್ ಮಟ್ಟದಲ್ಲಿಯುವ ಮೋರ್ಚಾ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ಸರಕಾರದ ಜನಪರ ಯೋಜನೆಗಳನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವ ಜವಾಬ್ದಾರಿ ನಮ್ಮ ಯುವ ಪಡೆಗಳ ಮೇಲಿದೆ ಎಂದರು.
ಕಾರ್ಯಕರ್ತರು ಬಿಎಲ್ ಎ 2ಗಳೊಂದಿಗೆ ಸಮನ್ವಯ ಸಾಧಿಸಿ, ಮತದಾರರ ಪಟ್ಟಿಯಲ್ಲಿರುವ ತಿದ್ದುಪಡಿಗಳು ಹಾಗೂ ನೂತನ ನೋಂದಣಿ ಪ್ರಕ್ರಿಯೆಗಳು ಸುಗಮವಾಗಿ ನಡೆಯುವಂತೆ ಮಾಡಬೇಕು ಎಂದರು.
ಜಿಲ್ಲಾಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾಧ್ಯಕ್ಷ ಎನ್ .ಕೆ.ಜಗದೀಶ್ , ದಾವಣಗೆರೆ ವಿಭಾಗ ಪ್ರಭಾರಿ ಟಿ.ಡಿ.ಮೇಘರಾಜ್ , ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್ .ದತ್ತಾತ್ರಿ, ಯುವ ಮೋರ್ಚಾ ಸಹಪ್ರಭಾರಿ ಸಂತೋಷ್ ಹೊಳಲೂರು, ಉಪಾಧ್ಯಕ್ಷರಾದ ಸಂಜಯ್ , ಆಶಿಕ್ , ನಾಗಪ್ಪ ಮತ್ತಿತರರು ಇದ್ದರು.
-------------
ಫೋಟೊ ಶೀರ್ಷಿಕೆ; 25ಎಸ್ ಎಂಜಿ4
ಶಿವಮೊಗ್ಗ ಜಿಲ್ಲಾಬಿಜೆಪಿ ಕಚೇರಿಯಲ್ಲಿಶನಿವಾರ ಜಿಲ್ಲಾಯುವ ಮೋರ್ಚಾ ಕಾರ್ಯಕಾರಿಣಿಯನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.