ಗದಗ: ಕೇಂದ್ರ ಸರಕಾರದ ಸೂಕ್ಷ ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂಎಸ್ ಎಂಇ) ಅನುಷ್ಠಾನಗೊಳಿಸುತ್ತಿರುವ ಗ್ರಾಮೋದ್ಯೋಗ ವಿಕಾಸ ಯೋಜನೆ (ಜಿವಿವೈ) ಅಡಿಯಲ್ಲಿಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ವಿವಿಧ ಕೌಶಲ ತರಬೇತಿ ಕಾರ್ಯಕ್ರಮಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆ.7 ಕೊನೆ ದಿನವಾಗಿದೆ.18 ರಿಂದ 55 ವರ್ಷದೊಳಗಿನ ಆಧಾರ್ ಕಾರ್ಡ್ ಅಥವಾ ಸರಕಾರದಿಂದ ನೀಡಲಾದ ಮಾನ್ಯ ಗುರುತಿನ ಚೀಟಿ ಹೊಂದಿರುವ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಯೋಜನೆಯ ವಿವರಗಳು ಕೆವಿಐಸಿ ವೆಬ್ ಸೈಟ್ ನಲ್ಲಿಲಭ್ಯವಿವೆ. ಯೋಜನೆಯಡಿ ಜೇನು ಸಾಕಣೆ, ಚಕ್ರ ಕುಂಬಾರಿಕೆ, ಎಲೆಕ್ಟ್ರಿಷಿಯನ್ , ಮೂಲಭೂತ ಪ್ಲಂಬಿಂಗ್ , ಹೊಲಿಗೆ ಯಂತ್ರ ನಿರ್ವಹಣೆ, ಅಗರಬತ್ತಿ ತಯಾರಿಕೆ, ಪಾದರಕ್ಷೆ ತಯಾರಿಕೆ ಮತ್ತು ದುರಸ್ತಿ, ಮರದ ಆಟಿಕೆ ತಯಾರಿಕೆ, ಮಸಾಲೆ ಹಾಗೂ ರುಚಿಕಾರಕ ಪದಾರ್ಥಗಳ ಸಂಸ್ಕರಣೆ, ಕಾಗದದ ತಟ್ಟೆ-ದೊನ್ನೆ ತಯಾರಿಕೆ ಹಾಗೂ ಕಾಗದ ಸಂಸ್ಕರಣೆ ಸೇರಿದಂತೆ ವಿವಿಧ ಕೌಶಲ ತರಬೇತಿಗಳನ್ನು ನೀಡಲಾಗುತ್ತದೆ. ಮಾಹಿತಿಗೆ ಗದಗ ಜಿಲ್ಲಾಕೈಗಾರಿಕೆ ಕೇಂದ್ರ ಸಂಪರ್ಕಿಸಬಹುದು ಎಂದು ಜಿಲ್ಲಾಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.