ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್ ಸಿಟಿಸಿ) ಬೆಂಗಳೂರಿನಿಂದ ಆಗ್ನೇಯ ಏಷ್ಯಾದ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಎರಡು ಹೊಸ ಅಂತಾರಾಷ್ಟ್ರೀಯ ವಿಮಾನ ಪ್ರವಾಸ ಪ್ಯಾಕೇಜ್ ಗಳನ್ನು ಘೋಷಿಸಿದೆ.ಸಿಂಗಾಪುರ ಮತ್ತು ಮಲೇಷ್ಯಾದ ಬೆಸ್ಟ್ ಪ್ಯಾಕೇಜ್ ಆಗಸ್ಟ್ 14ರಂದು ಆರಂಭವಾಗಲಿದ್ದು, 6 ರಾತ್ರಿ/ 7 ದಿನಗಳ ಪ್ರವಾಸ ವ್ಯವಸ್ಥೆ ಕಲ್ಪಿಸಲಿದೆ. ಸಿಂಗಾಪುರ, ಕೌಲಾಲಂಪುರ, ಜೆಂಟಿಂಗ್ ಹೈಲ್ಯಾಂಡ್ ಅನ್ನು ಪ್ರವಾಸ ಒಳಗೊಂಡಿದೆ. ಅಲ್ಲದೆ, ಟ್ವಿನ್ ಶೇರಿಂಗ್ ಆಧಾರದಲ್ಲಿಪ್ರತಿ ವ್ಯಕ್ತಿಗೆ 1,47,500 ರೂ.ನಿಂದ ದರ ಆರಂಭವಾಗಲಿದೆ.
ಎಕ್ಸೋಟಿಕ್ ಬಾಲಿ ಪ್ಯಾಕೇಜ್ ಸೆಪ್ಟೆಂಬರ್ 25ರಿಂದ ಆರಂಭವಾಗಲಿದೆ. 4 ರಾತ್ರಿ/ 5 ದಿನಗಳ ರಜೆಯು ಬಾಲಿ ಕಡಲತೀರ, ಸಂಸ್ಕೃತಿ ಮತ್ತು ಸುಂದರ ನೋಟವನ್ನು ಪ್ರದರ್ಶಿಸಲಿದೆ. ಇದು ಟ್ವಿನ್ ಶೇರಿಂಗ್ ಆಧಾರದಲ್ಲಿಒಬ್ಬರಿಗೆ 88,950 ರೂ.ನಿಂದ ದರ ಆರಂಭವಾಗಲಿದೆ.
ಎರಡೂ ಪ್ಯಾಕೇಜ್ ಗಳು ಬೆಂಗಳೂರಿನಿಂದ ಎಕಾನಮಿ ಕ್ಲಾಸ್ ವಿಮಾನ ಟಿಕೆಟ್ , ಹೋಟೆಲ್ , ವಸತಿ, ಊಟದ ವ್ಯವಸ್ಥೆ, ಪ್ರಯಾಣ ವಿಮೆ, ಟೂರ್ ಎಸ್ಕಾರ್ಟ್ ಗಳ ಸೇವೆಗಳನ್ನು ಒಳಗೊಂಡಿದೆ. ಇದು ಸುರಕ್ಷಿತ ಪ್ರವಾಸ ಅನುಭವವನ್ನೂ ಒದಗಿಸಲಿದೆ. ಆಸಕ್ತ ಪ್ರವಾಸಿಗರು ಘ್ಕಿಜ್ಟ್ಚಿಠ್ಚಿಠಿಟ್ಠ್ಟಜಿsಞ.್ಚಟಞ ಮೂಲಕ ಬುಕ್ಕಿಂಗ್ ಮಾಡಬಹುದು ಅಥವಾ ಐಆರ್ ಸಿಟಿಸಿ ಪ್ರಾದೇಶಿಕ ಕಚೇರಿ, 8595931290, 859531292, 859531293 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.