ಪದಕದ ಖಾತೆ ತೆರೆದ ಪೋಲಿಯೊ ಪೀಡಿತ

Contributed byHarsha Vardhana|Vijaya Karnataka
jandu kumar polio affected kicker achieves medal victory at commonwealth games
ಕಿಕ್ಕರ್ - ತರಬೇತಿ ಹಣಕ್ಕಾಗಿ ತರಕಾರಿ ಮಾರಿದ, ರಿಕ್ಷಾ ಓಡಿಸಿದ ಜಂಡೂಗೆ ವೇಟ್ ಲಿಫ್ಟಿಂಗ್ ನಲ್ಲಿಕಂಚು

ಗ್ಲಾಸ್ಗೊ(ಸ್ಕಾಟ್ಲೆಂಡ್ ): 2026ರ ಕಾಮನ್ ವೆಲ್ತ… ಕ್ರೀಡಾಕೂಟದಲ್ಲಿಪುರುಷರ ಹೆವಿವೇಟ್ ಪ್ಯಾರಾ ಪವರ್ ಲಿಫ್ಟಿಂಗ್ ಫೈನಲ್ ನಲ್ಲಿಕಂಚಿನ ಪದಕ ಗೆಲ್ಲುವ ಮೂಲಕ ಜಂಡು ಕುಮಾರ್ ಭಾರತದ ಪದಕದ ಖಾತೆಯನ್ನು ತೆರೆದಿದ್ದಾರೆ.
ಬಿಹಾರದ ನಳಂದಾ ಜಿಲ್ಲೆಯವರಾದ ಜಂಡು, ತಮ್ಮ ಎರಡನೇ ಪ್ರಯತ್ನದಲ್ಲಿ190 ಕೆಜಿ ಎತ್ತುವ ಮೂಲಕ 130.9 ಅಂಕಗಳನ್ನು ಗಳಿಸಿ ಈ ಸಾಧನೆ ಮಾಡಿದರು. ಬಾಲ್ಯದಲ್ಲಿಪೋಲಿಯೊವನ್ನು ಮೆಟ್ಟಿನಿಂತು, ತೀವ್ರ ಆರ್ಥಿಕ ಸಂಕಷ್ಟಗಳ ನಡುವೆಯೂ ಕಠಿಣ ಪರಿಶ್ರಮದಿಂದ ಅವರು ಈ ಹಂತ ತಲುಪಿದ್ದಾರೆ. 29 ವರ್ಷದ ಜಂಡು, ತಮ್ಮ ತರಬೇತಿಗಾಗಿ ಹಣ ಹೊಂದಿಸಲು ತರಕಾರಿ ಮಾರಾಟ, ಇ-ರಿಕ್ಷಾ ಚಾಲಕ ವೃತ್ತಿಯನ್ನು ನಿರ್ವಹಿಸಿದ್ದಾರೆ ಎನ್ನುವುದು ಅವರ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಂಡು ಕುಮಾರ್ ಅವರ ಈ ಅದ್ಭುತ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ‘‘ಇದು ಅವರ ಅಚಲ ನಿರ್ಧಾರ ಮತ್ತು ಶ್ರಮದ ಪ್ರತಿಫಲವಾಗಿದೆ,’’ ಎಂದು ಶ್ಲಾಘಿಘಿಸಿದ್ದಾರೆ.

ಇದರೊಂದಿಗೆ ಕ್ರೀಡಾಕೂಟದ ಮೂರನೆಯ ದಿನ ಭಾರತ ಮಿಶ್ರ ಫಲಿತಾಂಶಗಳನ್ನು ಕಂಡಿತು. ಲಾನ್ ಬೌಲ್ಸ್ ಮಹಿಳಾ ಜೋಡಿಯಾದ ರೂಪಾ ರಾಣಿ ಹಾಗೂ ಪಿಂಕಿ ಸಿಂಗ್ ರೋಚಕ ಪಂದ್ಯದಲ್ಲಿಜಯಗಳಿಸಿ ಸತತ ಮೂರನೇ ಗೆಲುವು ದಾಖಲಿಸಿದರು. ಆದರೆ ಪುರುಷರ ಸಿಂಗಲ್ಸ್ ನಲ್ಲಿಪುತುಲ್ ಸೋನೊವಾಲ್ ಮಲೇಷಿಯಾ ವಿರುದ್ಧ ಸೋಲನುಭವಿಸಿದರು.

ಬಾಕ್ಸಿಂಗ್ ರಿಂಗ್ ನಲ್ಲಿಸಚಿನ್ ಸಿವಾಚ್ ಅವರು ಕೇವಲ 55 ಕೆ.ಜಿ ಪುರುಷರ ವಿಭಾಗದ 32ರ ಸುತ್ತಿನಲ್ಲಿಕಿಯೋಮಾ ಅಲ್ ಅಹ್ಮದೀಹ್ ಅವರನ್ನು ಸೋಲಿಸಿ 16ರ ಘಟ್ಟಕ್ಕೆ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ್ದಾರೆ. ಈಜು ಸ್ಪರ್ಧೆಯಲ್ಲಿಆರ್ಯನ್ ನೆಹ್ರಾ ಮತ್ತು ದಕ್ಷನ್ ಶಶಿಕುಮಾರ್ ಪುರುಷರ 400 ಮೀ. ಫ್ರೀಸ್ಟೈಲ್ ಅರ್ಹತಾ ಸುತ್ತಿನಲ್ಲಿನಿರ್ಗಮಿಸಿದರು.

ಕಾಮನ್ ವೆಲ್ತ… ಕ್ರೀಡಾಕೂಟದಲ್ಲಿಮಹಿಳೆಯರ 3್ಡ3 ವೀಲ್ ಚೇರ್ ಬಾಸ್ಕೆಟ್ ಬಾಲ್ ನಲ್ಲಿಪದಾರ್ಪಣೆ ಮಾಡಿದ ಭಾರತ ತಂಡವು ವೇಲ್ಸ್ ವಿರುದ್ಧ 16-1 ಅಂತರದಿಂದ ಪರಾಭವಗೊಂಡಿತು. ಮತ್ತೊಂದೆಡೆ, ಮಹಿಳೆಯರ ಆರ್ಟಿಸ್ಟಿಕ್ ಜಿಮ್ನಾಸ್ಟಿP್ಸ… ತಂಡದ ಪ್ರಣತಿ ನಾಯಕ್ , ಪ್ರತಿಷ್ಠಾ ಸಾಮಂತ್ , ಎಷಿತಾ ಮತ್ತು ನಿಶಿಕಾ ವೋಲ್ಟ… ವಿಭಾಗದಲ್ಲಿಉತ್ತಮ ಪ್ರದರ್ಶನ ನೀಡಿ 36.650 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದರು.

ಶ್ರೀಹರಿ ನಟರಾಜ್ ಗೆ ಸೆಮೀಸ್ ನಲ್ಲಿನಿರಾಸೆ

ಭಾರತದ ಸ್ಟಾರ್ ಸ್ವಿಮ್ಮರ್ ಬೆಂಗಳೂರಿನ ಶ್ರೀಹರಿ ನಟರಾಜ್ ಮತ್ತು ಇಬ್ಬರು ಪ್ಯಾರಾ ಈಜುಪಟುಗಳು ಪದಕ ಗೆಲ್ಲುವಲ್ಲಿವಿಫಲರಾದರು. ಪುರುಷರ 50 ಮೀ. ಬ್ಯಾಕ್ ಸ್ಟೊ್ರೕಕ್ ಸೆಮಿಫೈನಲ್ ಸ್ಪರ್ಧೆಯಲ್ಲಿಶ್ರೀಹರಿ ನಟರಾಜ್ , 25.29 ಸೆಕೆಂಡ್ ಗಳಲ್ಲಿಗುರಿ ತಲುಪಿ 7ನೇ ಸ್ಥಾನ ಪಡೆಯುವ ಮೂಲಕ ಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡರು. ಪುರುಷರ 100 ಮೀ. ಫ್ರೀಸ್ಟೈಲ್ ಎಸ್ 13 ವಿಭಾಗದ ಫೈನಲ್ ನಲ್ಲಿಭಾರತದ ಪ್ಯಾರಾ ಈಜುಪಟು ಬುಡಿಗಿನಾ ಅವರು 57.57 ಸೆಕೆಂಡ್ ಗಳಲ್ಲಿಸ್ಪರ್ಧೆಯನ್ನು ಮುಗಿಸಿ, ಜಂಟಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಕೂದಲೆಳೆಯ ಅಂತರದಲ್ಲಿಪದಕ ವಂಚಿತರಾದರು.