ಹೊಸಕೋಟೆಯಲ್ಲಿಪ್ರತಿಭಟನಾ ಮೆರವಣಿಗೆ

Contributed bysulibeleprashanth@gmail.com|Vijaya Karnataka
koppal students protest strong campaign against central government
ಹೊಸಕೋಟೆಯಲ್ಲಿಪ್ರತಿಭಟನಾ ಮೆರವಣಿಗೆ

((ನಾನಾ ಸಂಘಟನೆಗಳು ಭಾಗಿ | ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರ ವಿರುದ್ದ ಕ್ರಮಕ್ಕೆ ಆಗ್ರಹ))
ವಿಕ ಸುದ್ದಿಲೋಕ ಹೊಸಕೋಟೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ, ಹೊಸದಿಲ್ಲಿಯಲ್ಲಿಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ನಾನಾ ಸಂಘಟನೆಗಳು ನಗರದಲ್ಲಿಪ್ರತಿಭಟನಾ ಮೆರವಣಿಗೆ ನಡೆಸಿದವು.

ವಿದ್ಯಾರ್ಥಿ ಹಾಗೂ ಪ್ರಜಾಪ್ರಭುತ್ವ ರಕ್ಷಣಾ ಒಕ್ಕೂಟ ಮತ್ತು ಸಿಜೆಪಿ, ಡಿವೈಎಫ್ ಐ , ಸಿಐಟಿಯು, ಎಸ್ ಎಫ್ ಐ, ತಾಲೂಕು ವಕೀಲರ ಸಂಘ, ಅಖಿಲ ಭಾರತ ವಕೀಲರ ಸಂಘ, ದಲಿತಪರ ಸಂಘಟನೆ, ರೈತಪರ ಸಂಘಟೆನೆ, ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ದೆಹಲಿಯಲ್ಲಿವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ಹಾಗೂ ಕೇಂದ್ರ ಮಂತ್ರಿ ಧಮೇಂರ್ ದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕೆಇಬಿ ಸರ್ಕಲ್ , ಹೂಮಂಡಿ ಸರ್ಕಲ್ , ಬಸವೇಶ್ವರ ಸರ್ಕಲ್ , ಮಸೀದಿ ಮೂಲಕ ತಾಲೂಕು ಕಚೇರಿ ಆವರಣದವೆರೆಗೆ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಮೆರವಣಿಗೆ ನಡೆಸಲಾಯಿತು.

ಅಖಿಲ ಭಾರತ ವಕೀಲರ ಸಂಘದ ಒಕ್ಕೂಟದ ರಾಜ್ಯಾಧ್ಯಕ್ಷ ಹರಿಂದ್ರ ಮಾತನಾಡಿ, ಕೇಂದ್ರದಲ್ಲಿಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ 12 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮುನ್ನೆಲೆಗೆ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವ ಕಿಂಗ್ ಪಿನ್ ಗಳ ಕ್ರಮ ಕೈಗೊಳ್ಳುವುದಿರಲಿ, ಆದರ ಜಾಲವನ್ನು ಪತ್ತೆ ಹಚ್ಚುವ ಗೊಜಿಗೂ ಹೋಗಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ದೇಶದ ಯುವ ಪೀಳಿಗೆಯ ಮೇಲೆ ಎಷ್ಟೊಂದು ಕಾಳಜಿ ಇದೆಯೆಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

2.5 ಲಕ್ಷ ವಿದ್ಯಾರ್ಥಿಗಳು ನಿಟ್ ಗಾಗಿ ಪೂರ್ವ ತಯಾರಿ ಮಾಡಿಕೊಂಡಿದ್ದರು. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಗ್ಗಿದೆ. ಇದರಿಂದ ಮನನೊಂದ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದು ನಿಜವಾಗಿ ಆತ್ಮಹತ್ಯೆಯಲ್ಲಕೇಂದ್ರ ಸರಕಾರ ಮಾಡಿದ ಸಂಚಿನ ಹತ್ಯೆಯಾಗಿದೆ. ಇದೆಲ್ಲದರ ವಿರುದ್ಧ ವಿದ್ಯಾರ್ಥಿ ಸಮುದಾಯ ಧ್ವನಿ ಎತ್ತಿದರೆ ಕೇಂದ್ರ ಸರಕಾರ ಪೊಲೀಸ್ ಶಕ್ತಿ ಬಳಿಸಿ ಗೂಂಡಾಗಿರಿ ಮಾಡಲು ಮುಂದಾಗುತ್ತಿದೆ ಎಂದು ದೂರಿದರು.

ಗಡಿಪಾರು ಮಾಡಿ:

ಅಂಬೇಡ್ಕರ್ ವಾದ ಸಂಘಟನೆಯ ತಾಲೂಕು ಅಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, 21 ವಿದ್ಯಾರ್ಥಿಗಳ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ದೇಶದಿಂದ ಗಡಿಪಾರು ಮಾಡುವ ಕೆಲಸ ಆಗಬೇಕಿದೆ. ವಿದ್ಯಾರ್ಥಿಗಳ ಶಾಂತಿಯುತ ಹೋರಾಟ ವೇಳೆ ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು. ಇಷ್ಟೆಲ್ಲಾಅನಾಹುತ ಸಂಭವಿಸುತ್ತಿದ್ದರೂ ಎಲ್ಲಿಯೂ ಪ್ರತಿಕ್ರಯಿಸದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ನಿಟ್ ಪರೀಕ್ಷೆ ರದ್ದು ಪಡಿಸಿ ಸಿಇಟಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿಸಿಐಟಿಯು ತಾಲೂಕು ಕಾರ್ಯದರ್ಶಿ, ಖಜಾಂಚಿ ಮೋಹನ್ ಬಾಬು, ದಲಿತ ಹಕ್ಕುಗಳ ಸಮಿತಿ ಕಾರ್ಯದರ್ಶಿ ಮುನಿರಾಜು ಎಂ., ವಕೀಲರಾದ ರವಿಂದ್ರ, ಗಣೇಶ್ ಹಾಗೂ ದಲಿತ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು

ಚಿತ್ರ-25 ಸೂಲಿಬೆಲೆ 3

ಹೊಸಕೋಟೆಯಲ್ಲಿನಾನಾ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.